Wednesday, July 6, 2016

ಜ್ಯೋತಿಷ್ಯವೋ ವಿಜ್ಞಾನವೋ?



ಜ್ಯೋತಿ-ಶ್ಯ (ಸ್ಟಡಿ ಆಫ್ ಲೈಟ್) ಅನ್ನುವುದು ವಿಜ್ಞಾನದ ಪರಿಚಯ ನಮಗೆ ಆಗುವುದಕ್ಕೆ ಸಾವಿರಾರು ವರ್ಷ ಮೊದಲೇ ಇದ್ದ ಒಂದು ಪದ್ಧತಿ. ಸೌರಮಂಡಲ ದ ಕೇಂದ್ರಬಿಂದು ವಾದ ಸೂರ್ಯನ ಸುತ್ತಾ ಗ್ರಹಗಳು ಸುತ್ತುವ ರೀತಿ, ಅವುಗಳ ವೇಗ ಹಾಗೂ ಅವುಗಳ ಗುರುತ್ವ ಬಲಗಳನ್ನು ದೃಗ್ಗಣಿತ ರೀತಿಯಿಂದ ಕರಾರುವಾಕ್ ಲೆಕ್ಕ ಮಾಡಿ ಅವುಗಳ ಚಲನೆ, ವೇಗ ಇತರ ವಿಷಯಗಳ ಒಂದು ರಿಪೋರ್ಟ್ ಮಾಡುತ್ತಿದ್ದರು.ಅದೂ ಕ್ಯಾಲ್ಕುಲಸ್, ಕಂಪ್ಯೂಟರ್, ಇದಾವುದೂ ಇರದೇ ಇದ್ದ ಕಾಲದಲ್ಲಿ.ಅದನ್ನೇ ನಾವು ಜ್ಯೋತಿಷ್ಯ ಅಂದು ಕರೆಯುತ್ತೇವೆ.
ಜ್ಯೋತಿಷ್ಯದ ಪ್ರಕಾರ ಹನ್ನೆರಡು ರಾಶಿಗಳು, ಒಂಭತ್ತು ಗ್ರಹಗಳು,ಇಪ್ಪತ್ತೇಳು ನಕ್ಷತ್ರಗಳೂ ಇವೆ ಎಂದು ಹೇಳಿದೆ. ನಮ್ಮ ಆಧುನಿಕ ವಿಜ್ಞಾನ ಒಪ್ಪಿಕೊಂದಿದ್ದೂ ಇದನ್ನೇ. ಈ ಒಂಭತ್ತು ಗ್ರಹಗಳ ಫಲಗಳಲ್ಲಿ ಗುರುವಿಗೆ ದೊಡ್ಡ ಸ್ಥಾನ.ಗುರುಬಲ ಚೆನ್ನಾಗಿರಬೇಕೆಂದು ಜ್ಯೋತಿಷ ಹೇಳುತ್ತದೆ. ನಮ್ಮ ವಿಜ್ಞಾನ ಒಪ್ಪಿಕೊಂದದ್ದೂ ಅದನ್ನೇ. ಗುರುವಿನ ಗುರುತ್ವ ಬಲ ಇತರ ಎಲ್ಲಾ ಎಂಟು ಗ್ರಹಗಳ ಒಟ್ಟು ಬಲಕ್ಕಿಂತ ಹೆಚ್ಚು(ಬರಾಬರಿ 24 .79 m /s ೨). ಪ್ರತಿದಿನಾ ಸಾವಿರಾರು ಆಕಾಶಕಾಯಗಳು ಸಿಡಿದು ಸೌರ ವ್ಯೂಹದಲ್ಲಿ ಚಿಲ್ಲಾಪಿಲ್ಲಿ ಆಗುತ್ತವೆ. ಗುರುವಿನ ಗುರುತ್ವ ಬಲ ಇರದೇ ಹೋಗಿದ್ದರೆ ಈ ಆಕಾಶಕಾಯಗಳು ಸಿಡಿಯುವುದರಿಂದ  ಇಂದು ಭೂಮಿಯ ಅಸ್ತಿತ್ವ ವೆ ಇರುತ್ತಿರಲಿಲ್ಲ ಎಂದು ನಮ್ಮ ಆಧುನಿಕ ವಿಜ್ಞಾನ ಕೂಡ ಒಪ್ಪಿಕೊಂಡಿದೆ. ಭೂಮಿಯು ಒಂದು ಅಯಸ್ಕಾಂತೀಯ ಕ್ಷೇತ್ರವಾಗಿದ್ದು, ಉತ್ತರ ದಕ್ಷಿಣ ದಿಕ್ಕಿನ್ದಲ್ಲಿ ಕಾಂತ ಕ್ಷೇತ್ರಗಳನ್ನು ಹೊಂದಿದೆ.ನಾವು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಕಾಂತ ಕ್ಷೇತ್ರದ ಪರಿಣಾಮ ನಮ್ಮ ಮೆದುಳಿನ ನ್ಯೂರಾನ್ ಗಳ ಮೇಲೆ ಆಗುತ್ತದೆ ಎಂದು ಹೇಳಿದ್ದು ಜ್ಯೋತಿಷ್ಯವೇ ಅಲ್ಲವೇ??ಜ್ಯೋತಿಷ್ಯ ಎಂಬುದು ಮೂಢ ನಂಬಿಕೆ ಎಂದು ರುಜುವಾತು ಮಾಡಿ ನೋಡಿಸುವವರು ನಮ್ಮಲ್ಲಿ ತುಂಬಾ ಜನ ಇದ್ದಾರೆ. ಆದರೆ ಜ್ಯೋತಿಷ್ಯದ ತತ್ವಗಳು ಇಲ್ಲಿ ಸುಳ್ಳಾಗಿದೆ ಎಂದು ವೈಜ್ಞಾನಿಕವಾಗಿ ರುಜುವಾತು ಪಡಿಸಿದ ಒಂದೇ ಒಂದು ಉದಾಹರಣೆ ಇಲ್ಲ.
ಅಷ್ಟೇಕೆ ಅದೆಷ್ಟೋ ದಿನಗಳ ಲೆಕ್ಕಾಚಾರ ಮಾಡಿ, ಆಧುನಿಕ ವಿಜ್ಞಾನ ಹೇಳಿದ ಶ್ರೀ ರಾಮನ ಜನ್ಮದಿನ ಕ್ರಿ.ಪೂ.5114 , ಜನವರಿ ಹತ್ತು. ವಾಲ್ಮೀಕಿ ರಾಮಾಯಣದಲ್ಲಿ ಒಂದೆಡೆ ಹೇಳುವಂತೆ ಐದು ಗ್ರಹಗಳು ಒಂದು ನಿರ್ದಿಷ್ಟ ಪಥದಲ್ಲಿ ಇದ್ದಾಗ ರಾಮನ ಜನ್ಮವಾಯಿತು ಎಂದು. ಈಗಿನ ಕ್ಯಾಲ್ಕುಲಸ್ ಗಣಿತ ಬಳಸಿ,ಅದನ್ನು ನಮ್ಮ ಇಂಗ್ಲಿಷ್ ಕ್ಯಾಲೆಂಡರ್ ಗೆ ತರ್ಜುಮೆ ಮಾಡಿದಾಗ ಬಂದಿದ್ದೂ ಸಹ ಅದೇ ದಿನ..
ಇಷ್ಟಕ್ಕೂ ವೇದ ಗಣಿತ ಹಾಗೂ ಇತ್ತೀಚಿಗೆ ಅತೀ ಹೆಚ್ಚು ಬಳಸಲ್ಪಡುತ್ತಿರುವ Zero based mathematics ಗಳ ಮೂಲಕ ಕೂಡಿ ಕಳೆದು ಗುಣಾಕಾರ ಹಾಕಿ ತಯಾರಾಗುತ್ತಿದ್ದ ಸಂಖ್ಯೆಗಳೇ ಜನ್ಮ ಕುಂಡಲಿ...ಇಷ್ಟಕ್ಕೂ ಜ್ಯೋತಿಷ್ಯದ ಯಾವ ಲೆಕ್ಕಾಚಾರ ತಪ್ಪಾಗಿದೆ ಹೇಳಿ ಸ್ವಾಮೀ.. ಆರ್ಯಭಟ ಸೂತ್ರ? ವರಾಹಮಿಹಿರ ಸೂತ್ರ? ಬ್ರಹ್ಮಗುಪ್ತ ಸೂತ್ರ? ಭಾಸ್ಕರ ಸೂತ್ರ? ಶ್ರೀಧರನ ಸೂತ್ರ? ಹೇಮಚಂದ್ರ ಸೂತ್ರ? ಉಹೂ..ಒಂದೇ ಒಂದು ಸೂತ್ರವೂ ತಪ್ಪಿಲ್ಲ..ಇದೆ ಸೂತ್ರಗಳನ್ನೇ ಅಲ್ಲವೇ ನಮ್ಮ ಆಧುನಿಕ ಕಂಪ್ಯೂಟರ್ ಗಳು Data processing ನಲ್ಲಿ, encryption ಗಳಲ್ಲಿ ಬಳಸುತ್ತಿರುವುದು?
ಇತ್ತೀಚಿಗೆ ಹೊಟ್ಟೆ ಹೊರೆಯಲೆಂದು ಏನೇನೋ ಬಾಯಿಗೆ ಬಂದಿದ್ದು ಒದರುವ tv ಜ್ಯೋತಿಶರಿಂದಾಗಿ ಜ್ಯೋತಿಷ್ಯವನ್ನು ದೂರುವುದು ಸರಿಯೇ? ಜ್ಯೋತಿಷ್ಯ ಎಂದ ಕೂಡಲೇ ನಿಮ್ಮ ಕಣ್ಣ ಮುಂದೆ ಬರಬೇಕಾದ ಚಿತ್ರಣ ವರಾಹಮಿಹಾರ, ಭಾಸ್ಕರ, ಅರ್ಯಭಾಟರದ್ದು.. TV ಜ್ಯೋತಿಶಿಗಳದ್ದಲ್ಲ. TV ಜ್ಯೋತಿಷಿಗಳನ್ನು ಬ್ಯಾನ್ ಮಾಡುತ್ತಿರುವುದು ಸ್ವಾಗತಾರ್ಹವೇ ..ಈ TV ಜ್ಯೋತಿಷಿಗಳು ಮೂಡನಂಬಿಕೆಯನ್ನು ಬಿತ್ತುತ್ತಿದ್ದಾರೆ ಎನ್ನುವುದು ಒಪ್ಪಬಹುದಾದರೂ.
..........
.........
.........
.........
.........
.........
.........
.........
ಜ್ಯೋತಿಷ್ಯ ಮೂಢ ನಂಬಿಕೆಯನ್ನು ಬಿತ್ತುತ್ತಿದೆ ಎನ್ನುವುದು ಒಪ್ಪಲಾಗದು...

No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...