Wednesday, April 30, 2008

ಇದು ನಮ್ಮ ಮೀಡಿಯ ಕಣ್ರೀ...

ಬೆಳ ಬೆಳಗ್ಗೆ ಏಳು ಗಂಟೆಗೆ ಎದ್ದು ಎಂದಿನಂತೆ ಪ್ರಜಾವಾಣಿ ಕೈಗೆ ತಗೊಂಡೆ.ಒಂದು ಕಡೆ ಯಡಿಯೂರಪ್ಪ, ಇನ್ನೊಂದು ಕಡೆ ಧರ್ಮ ಸಿಂಗ್, ನೆಕ್ಸ್ಟ್ ಪೆಜ್ನಲ್ಲಿ ಮಾಮೂಲಿ ಅದೇ ನಿದ್ದೆ ಮಾಡೋ ಮುಖದ ಒಬ್ಬರು... ಲಾಸ್ಟ್ ಪೇಜ್ ನೋಡಿದ್ರೆ ಕಪಾಳಕ್ಕೆ ಹೊಡದು ದೇಶದ ಮಾನ ಮರ್ಯಾದೆ ಹರಾಜ್ ಹಾಕಿರೋ ಕ್ರಿಕೆಟ್ ಪ್ಲೆಯರ್ರು .... ಬರೀ ಇದೆ ಫೋಟೋಗಳು ಬರೀ ಇದೆ ನ್ಯೂಸ್. ಸರಿ ಇದು ಬೇಡ ಅಂತ ವಿಜಯ ಕರ್ನಾಟಕ ತಗೊಂಡ್ರೆ ಅದು ಇನ್ನು ಡೇಂಜರ್ರು.....ಅದೇನೋ ಇಸ್ರೋ ನವರು ಅಪರೂಪಕ್ಕೆ ಒಂದು ಸಾಧನೆ ಮಾಡಿದರಂತೆ ..ಹತ್ತು ಉಪಗ್ರಹನ ಒಂದೇ ಸಲ ಮೇಲಕ್ಕೆ ಕಳ್ಸಿದರಂತೆ (ಅದೇನು ಮಹ ಸಾಧನೆ ಬಿಡಿ.. ನಮ್ಮ ಬೆಂಗಳೂರ್ ನರ್ಸಿಂಗ್ ಹೋಮ್ ವೈದ್ಯರು ಒಂದೇ ಸಲಕ್ಕೆ ಇಪ್ಪತ್ತು ಮೂವತ್ತು ಜನರನ್ನ ಮೇಲಕ್ಕೆ ಕಳಿಸುವಾಗ ಅಂತೀರ?)ಸ್ವಲ್ಪ ನೋಡೋಣ ಅಂದ್ರೆ ಪೇಪರ್ ನ ತುಂಬ ಎಲ್ಲ ಕಮಲ.ಕೈ,ಆನೆಗಳದ್ದೆ ಫೋಟೋ.

ಇಂದಿನ ಮಕ್ಕಳೇ ನಾಳಿನ ಇಂಜಿನಿಯರ್ ಗಳು, ಅಂತ ಸುಮ್ನೆ ಹೇಳೋದು ಅಷ್ಟೆ, ಒಂದು ಸೈನ್ಸ್ ಬಗ್ಗೆ ಲೇಖನ ಇಲ್ಲ, ಒಂದು ನ್ಯೂಸ್ ಇಲ್ಲ, ಇನ್ನೆಲ್ಲಿ ಸ್ವಾಮಿ ಇಂಜಿನಿಯರ್ ಗಳು ರೆಡಿ ಆಗ್ತಾರೆ ನಂ ದೇಶದಲ್ಲಿ, ಬರೀ ರಾಜಕಾರಣಿಗಳನ್ನ ರೆಡಿ ಮಾಡ್ತಾರೆ ಇವ್ರು (ಅದೂ ಎಂತ ರಾಜಕಾರಣಿಗಳನ್ನ ಅಂತ ಬೇರೆ ಹೇಳಬೇಕಾಗಿಲ್ಲ ಬಿಡಿ).ಇಂಜಿನಿಯರ್ ಕಾಲೇಜ್ನಲ್ಲಿ ಲಕ್ಷ ಲಕ್ಷ ದುಡ್ಡು ಕೊಟ್ಟು ಓದಿದ್ದು ಓದಿದ್ದೆ. ಇಂಜಿನಿಯರ್ ಆಗಿದ್ದು ಆಗಿದ್ದೆ. ಇವರ ಯೋಗ್ಯತೆಗೆ ಬೆಂಗಳೂರ್ ನಲ್ಲಿ ಆಗೋ ಟ್ರಾಪಿಕ್ ಜಾಮ್ ಅನ್ನೋ ಚಿಕ್ಕ ಪ್ರಾಬ್ಲಮ್ ಗೆ ಸೋಲ್ಯುಶನ್ ಕೊಡೋಕೆ ಆಗಿಲ್ಲ. ಇನ್ನೆಲ್ಲಿ ಸ್ವಾಮೀ ದೇಶ ಉದ್ಧಾರ ಅಗತ್ತೆ. ನಮ್ಮ ದಾಗುತ್ರು ಗುಳು, ಇಂಜಿನ್ ನೀರ್ ಗುಳು, ರಾಜ್ಕಾರ್ನಿಗುಳು, ಇವರನ್ನೆಲ್ಲಾ ಮರ ಹತ್ತಿಸೋ ನಮ್ಮ ಮೀಡಿಯಾ ದವರು, ......................................

ಜೈ..... ಭಾರತಾಂಬೆ ............................

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...