Sunday, April 14, 2019

Classroom

ನಮ್ ಬಸ್ಯಾ ಇದಾನಲ್ವ ಅವ್ನು ಮೊನ್ನೆ ಅವ್ರ ಕಾಲೇಜಲ್ಲಿ ಇಂಗ್ಲೀಷ್ ಲೆಕ್ಚರರ್ನ ಕೇಳ್ದ ಸಾರ್.. ಇಂಗ್ಲೀಷಲ್ಲಿ "ನಟುರೆ" ಅಂತ ಒಂದ್ ಪದ ಇದೆ ಹಂಗಂದ್ರೆ ಕನ್ನಡದಲ್ಲಿ ಅರ್ಥ ಏನ್ ಸಾರ್?

ಏನು "ನಟುರೆ" ನ? ಹುಚ್ಚುಚ್ಚಾಗಿ ಏನೇನೋ ಕೇಳ್ಬೇಡ. ನಾನು ಇಂಗ್ಲೀಷ್ನ ಮುವತ್ತು ವರ್ಷದಿಂದ ಟೀಚ್ ಮಾಡ್ತ ಇದೀನಿ.. ನಟುರೆ ಅನ್ನೊ ಪದ ಇಲ್ಲ.

ಸಾರ್ ಇದೆ ಸಾರ್. ನಿಮ್ಗೆ ಗೊತ್ತಿಲ್ಲ ಅಂದ್ರೆ ಗೊತ್ತಿಲ್ಲ ಅಂತ ಡೈರೆಕ್ಟಾಗಿ ಹೇಳಿ. ನನ್ ಬೈಬೇಡಿ. ನಾಳೆ ಬೆಳಿಗ್ಗೆ ತನ್ಕ ಟೈಂ ಕೊಡ್ತೀನಿ. "ನಟುರೆ" ಮೀನಿಂಗ್ ಹೇಳಿ ಇಲ್ಲ ಸೋಲೊಪ್ಕೊಳಿ ಅಂದ

ಹುಡುಗರೆದರು ಕ್ಲಾಸ್ ರೂಂ ಅಲ್ಲೆ ಈಥರ ಅವಮಾನವಾಯ್ತಲ್ಲಪ್ಪ ದೇವ್ರೆ... ಈ ಹುಡ್ಗ ನೋಡುದ್ರೆ ನಟುರೆ ಅನ್ನೋ ಪದ ಇದೆ ಅಂತ ಇಷ್ಟು ಕಾನ್ಫಿಡೆನ್ಸಾಗಿ ಹೇಳ್ತ ಇದಾನೆ. ಒಂದ್ ವೇಳೆ ಆಥರ ಪದ ಇರ್ಬಹುದಾ? ನೋಡೋಣ ಅಂತ ಹೇಳಿ ಡೈರೆಕ್ಟಾಗಿ ಲೈಬ್ರರಿಗೆ ಓಟ ಕಿತ್ರು. ಲೈಬ್ರರಿ, ಗೂಗಲ್ , ಡಿಕ್ಷನರಿ ಎಲ್ ನೋಡುದ್ರೆ ಆ ಪದಾನೆ ಕಾಣ್ಸಿಲ್ಲ. ಇನ್ನೇನ್ ಮಾಡೋದು ಬೆಳಿಗ್ಗೆ ಕ್ಲಾಸ್ ರೂಂಗೆ ಬಂದವರೇ

ಪ್ರಿಯ ವಿದ್ಯಾರ್ಥಿಗಳೆ ನಿನ್ನೆ ಎಲ್ಲ ಹುಡುಕಿದರೂ ನನಗೆ ನಟುರೆ ಪದದ ಅರ್ಥ ಗೊತ್ತಾಗ್ಲಿಲ್ಲ. ಐ ಯಾಂ ಸಾರಿ. ನಾನು ಸೋಲೊಪ್ಕೊತಾ ಇದೀನಿ ಅಂದವರೇ ಬಸ್ಯಾನ ಕಡೆ ತಿರಿಗಿ ನಟುರೆ ಪದಾನ ಒಂದ್ ಸಲ ಬೋರ್ಡ್ ಮೇಲೆ ಬರಿ ಬಾ ಕಂದ ಅಂದ್ರು. ನಮ್ ಬಸ್ಯ ಹೋಗಿ ಬೋರ್ಡ್ ಮೇಲೆ ಬರ್ದ
ನ - na
ಟು - tu
ರೆ - re

ನಟುರೆ - nature

ಆ ಮೇಷ್ಟುಗೆ ಅದೆಲ್ಲಿಂದ ಸಿಟ್ ಬಂತೋ. ಅಯ್ಯೋ ಪಾಪಿ. ನೇಚರ್ ನ ನಟುರೆ ಅಂದ್ಬಿಟ್ಟು ಯಾಮಾರುಸ್ದಲ್ಲೋ.. ನಿನ್ನ ಈಗ್ಲೆ ಕಾಲೇಜಿಂದ ಡಿಸ್ಮಿಸ್ ಮಾಡ್ತೀನಿ.. ಗೆಟ್ ಔಟ್ ಆಫ್ ದಿಸ್ ಕಾಲೇಜ್ ಅಂತ ಹೊರಗಾಕುದ್ರು..

ನಮ್ ಬಸ್ಯಾ ಅಳ್ತಾ ಹೇಳ್ದ. ಅಯ್ಯೋ ಸಾರ್ ದಯ್ವಿಟ್ಟು ಹಾಗ್ ಮಾಡ್ಬೇಡಿ. ನನ್ನ ಡಿಸ್ಮಿಸ್ ಮಾಡ್ಬೇಡಿ ಸಾರ್.. ನೀವ್ ಹಾಗ್ ಮಾಡುದ್ರೆ ನನ್ ಫುಟುರೆ ಹಾಳಾಗೋಗುತ್ತೆ

Silli lalli

ಲಲಿತಾಂಬ : ನಾನೇ ಸಮಾಜಸೇವಕಿ ಲಲಿತಾಂಬಾ ನನ್ನ ನಂಬಿ ಪ್ಲೀಸ್...ಪ್ಲೀಸ್...ಮಹನೀಯರೆ ಮತ್ತು ಮಹಿಳೆಯರೆ... ಮುತ್ತೈದೆ ನಗರಕ್ಕೆ ಕಾವೇರಿ ನೀರು ತರೋಕೆ ನಾನು ಹೋರಾಟ ಮಾಡ್ತೀನಿ ನನ್ನ ನಂಬಿ ಪ್ಲೀಸ್ ಪ್ಲೀಸ್......

ಕಾಂಪೋಂಡರ್ ಗೋವಿಂದ : ಡಾಕ್ಟ್ರೆ.. ತಾವ್ ತಪ್ ತಿಳ್ಯಲ್ಲ ಅಂದ್ರೆ ಒಂದ್ ಮಾತು.....ನನಗೆ ಬರಬೇಕಾದ ಎರಡು ವರ್ಷದ ಬೋನಸ್ ಬಂದಿಲ್ಲ ಅಂದ್ರೂ ಪರ್ವಾಗಿಲ್ಲ.....ನೀವ್ಯಾಕೆ ಲಾಸಲ್ಲಿ ನಡೀತಿರೊ ಕ್ಲಿನಿಕ್ ನ ಮುಚ್ಚಿ ಕಾವೇರಿ ಪ್ರತಿಭಟನೆ ಮಾಡ್ಬಾರ್ದು???


ಡಾಕ್ಟರ್ ವಿಠಲ್ ರಾವ್ : ಗೋವಿಂದಾ.....ಸುಮ್ನೆ ಕೂತ್ಕೊಳೋ

ಗೋವಿಂದ : ಅರ್ಥವಾಯಿತು ಬಿಡಿ

ಎನ್ನೆಮ್ಮೆಲ್ : ಡಾಕ್ಟ್ರೆ ನೀವ್ ಬನ್ನಿ....ಕಾರ್ ಶೆಡ್ಡಲ್ಲಿ ನಾವಿಬ್ರೂ ಪ್ರತಿಭಟನೆ ಮಾಡಾಣ.....

ಲಲಿತಾಂಬ : ಸಿಲ್ಲೀ......

ಎನ್ನೆಮ್ಮೆಲ್ : ತಪ್ಪಾಯ್ತಕ್ಕಾ.....

ವಿಠಲ : ಲೋ ರಂಗನಾಥ.....ಅದೆಷ್ಟೋ ಮನೆಹಾಳ್ ಐಡಿಯಾ ಕೊಟ್ಟಿದೀಯ...ಕಾವೇರಿ ಇಷ್ಯೂ ಗು ಏನಾದ್ರು ಐಡಿಯಾ ಕೊಡೋ

ರಂಗನಾಥ : ವಿಠಲಾ.... ನಿನ್ನ ಹೃದಯ ಗೆದ್ದ ಗೆಳೆಯ ನಾನಿರ್ಬೇಕಾದ್ರೆ ಯಾಕೋ ಯೋಚನೆ ಮಾಡ್ತೀಯ? ಜಸ್ಟ್ ಟೂ ಥೌಸಂಡ್ ಫೈವ್ ಹಂಡ್ರೆಡ್ ಕೊಡು ಅಷ್ಟೆ....ಹದಿನಾರು ಟಿಎಂಸಿ ಅಲ್ಲ ಅರ್ಧ ಟಿಎಂಸಿ ಕೂಡಾ ಕೇಳ್ಬಾರ್ದು ಹಂಗ್ ಮಾಡ್ತೀನಿ.....

ಜಾಣೇಶ : ಅಯ್ಯೋ ಎಷ್ಟ್ ಟಿಎಂಸಿ ಆದ್ರೂ ಕೊಟ್ಕೊಳ್ರಿ.. ಆದ್ರೆ ಹದ್ನಾರು ಅಂತ ಲೆಕ್ಕ ಮಾತ್ರ ಹೇಳ್ಬೇಡಿ....

ಪಲ್ಲಿ : ಹೇ ಜಾಣೇಶಾ.......ಹೋಗೋ ಒಳಗ್ಹೋಗೋ.....ಏನೇ ಸೂಜಿ...ಅವ್ರಿಗೆ ನೀರ್ ಕೊಟ್ರೆ ನಮ್ಗೆ ಕುಡ್ಯೋಕೆ ನೀರಿರಲ್ವಂತೆ..ಆಮೇಲೆ ನಾವ್ ಮದ್ವೆ ಹೇಗೇ ಆಗೋದು??? ನಡ್ಯೇ ಪ್ರತಿಭಟನೆ ಮಾಡೋಣಾ...

ಸೂಜಿ : ಹೌದೇನೋ.....ನಿಜನೇನೋ.....ನೆಡ್ಯೋ ಕುಂಟೆಬಿಲ್ಲೆ ಆಡ್ತಾ ಪ್ರತಿಭಟನೆ ಮಾಡೋಣ...ಐ ಲವ್ ಯೂ ಕಣೊ ಪಲ್ಲಿ...

ಪಲ್ಲಿ : ಮೀಟೂ ಕಣೆ....ಸೂಜಿ....

ವಿಠಲ : ಅಯ್ಯೋ ನೀವ್ ಸ್ವಲ್ಪ ಸುಮ್ನೆ ಇರ್ತೀರಾ.....ಲೋ ರಂಗನಾಥಾ.. ಕಾವೇರಿ ನೀರ್ ನಿಲ್ಸೋಕೆ ಏನಾದ್ರೂ ಐಡಿಯಾ ಕೊಡೋ....

ಸಿಲ್ಲಿ : ಕಾವೇರಿ ಅಂತಿದ್ದಾಗೆ ನಾನ್ ಬರೀತಿರೋ ಕಥೆ ನೆನಪಿಗೆ ಬಂತು.. ಕಥೆ ಹೆಸ್ರು ಕಾವೇರಿ ಅಲ್ಲ ಹಾವೇರಿ.....

ರಂಗನಾಥ : ಅಯ್ಯೋ ಸಿಲ್ಲಿ .....ನೀನ್ ಸ್ವಲ್ಪ ಸುಮ್ನಿರಮ್ಮಾ... ಲೋ ವಿಠಲಾ... ನನ್ ಹತ್ರ ಒಂದು ಸೂಪರ್ ಸುಪ್ರೀಂ ಐಡಿಯಾ ಇದೆ....ನೋಡೋ ವಿಠಲಾ.........ಒಂದ್ ಕೆಲ್ಸ ಮಾಡಾಣ..... ನಾವೇ ಹೋಗ್ಬಿಟ್ಟು ಡ್ಯಾಮ್ ಗೇಟ್ ಮುಚ್ಬಿಟ್ಟು ಬರೋಣ...

ವಿಶಾಲೂ :::::ವಾವ್.... ಚಪ್ಪಾಳೆ

ಪೋಲೀಸ್ : ಹೇತ್ತರಿಕೇ... ಏರೋಪ್ಲೇನ್ ಮೆ ಚಪಾತಿ ಕರೇಗಾರೆ....

ಪಿಸಿ : ರಾಗಿ ರೊಟ್ಟೀನೂ ಕರೇಗರೇ....

ಲಲಿತಾಂಬ : ಓ ಸುವ್ವರ್ ಕೇ ಬಚ್ಚೇ ಇನ್ಸ್ಪೆಕ್ಟ್ರೇ....ಬನ್ನೀ ಬನ್ನೀ

ಪೋಲೀಸ್ : ಸುಮ್ನಿರಮ್ಮಾ... ನಾವ್ ಹೆಂಗ್ಸುರ್ನ ಆಥರ ಕರ್ಯಲ್ಲಾ........ಡ್ಯಾಮ್ ಹತ್ರ ಹೋಗಿ ಗೇಟ್ ಕ್ಲೋಸ್ ಮಾಡಿ, ಬರೋಕೆ ಸ್ಕೆಚ್ ಹಾಕ್ತಾ ಇದೀರ ಅಂತ ನಮ್ಗೆ ಇನ್ಫರ್ಮೇಷನ್ ಬಂದಿದೆ. ಹಾಗಾಗಿ ಐಸಿಸಿ ಸೆಕ್ಷನ್ ಪ್ರಕಾರ ಸುರಕ್ಷತೆ ದೃಷ್ಟಿಯಿಂದ ನಿಮ್ಮೆಲ್ಲಾರ್ನ ಅರೆಸ್ಟ್ ಮಾಡ್ತಾ ಇದೀನಿ.....

ಎಲ್ಲಾರೂ : ಹಾ.........

ಶ್ರೀ ಬ್ಯಾಂಕಾಕೊಪಖ್ಯಾನ - ನಾಲ್ಕನೆಯ ಅಧ್ಯಾಯ

ಶ್ರೀ ಬ್ಯಾಂಕಾಕೊಪಖ್ಯಾನ - ನಾಲ್ಕನೆಯ ಅಧ್ಯಾಯ (ನಿನ್ನೆಯಿಂದ ಮುಂದುವರೆದಿದೆ) ಶ್ವಾನಕಾದಿ ಮಹರ್ಷಿಗಳು ಮುಂದುವರೆದು ಹೇಳುತ್ತಾರೆ " ಎಲೈ ಮುನಿವರ್ಯರೆ ನಾಲ್ಕನೆಯ ದಿನ ಮುಂಜಾನೆ ಬೇಗನೆ ಎದ್ದು ಸುರೇಶ ಅವರು ತಮ್ಮ ನಿತ್ಯಕರ್ಮಗಳನ್ನೆಲ್ಲ ಮುಗಿಸಿ, ಪತ್ನೀ ಸಮೇತರಾಗಿ ಬೆಳಿಗ್ಗೆ ಒಂಭತ್ತು ಗಂಟೆಯ ವಿಮಾನವನ್ನೇರಿ, ವಾಪಸ್ಸು ಮಲೇಷಿಯಾಗೆ ಹೋದರು. ಇಲ್ಲಿಗೆ ಅವರ ಬ್ಯಾಂಕಾಕಿನ ಪ್ರವಾಸ ಕಥನ ಮುಗಿಯಿತು ಎನ್ನಲಾಗಿ, ಪೂತರು ಕೇಳುತ್ತಾರೆ " ಎಲೈ ಮುನಿವರ್ಯನೆ ಥಾಯ್ ಜನರ ಜೀವನ ಶೈಲಿ, ಸಂಸ್ಕೃತಿ, ಆಚಾರ - ಧರ್ಮ ಎಂತಹದು? ಅವುಗಳನ್ನೆಲ್ಲ ಸವಿಸ್ತಾರವಾಗಿ ಹೇಳಿ ಎನ್ನಲು, ಮುನಿಗಳು ಹೇಳುತ್ತಾರೆ " ಅಯ್ಯಾ ಕೇಳು. ಬೌದ್ಧ ಧರ್ಮೀಯರೆ ಹೆಚ್ಚಾಗಿರುವ ಈ ದೇಶದಲ್ಲಿ ಹೆಜ್ಜೆಗೊಂದು ಬುದ್ಧನ ದೇವಾಲಯ ಕಂಡರೂ ಆಶ್ಚರ್ಯವೇನಿಲ್ಲ. ಬುದ್ದನಷ್ಟೇ ಆರಾಧಿಸಲ್ಪಡುವ ಇನ್ನೊಂದು ದೇವರೆಂದರೆ ಗಣಪತಿ. ಭರತ ಖಂಡವನ್ನು ಆಳುತ್ತಿದ್ದ ಶ್ರೀ ರಾಮಚಂದ್ರನ ಬಗ್ಗೆ ಕೇಳಿದ್ದೀಯಲ್ಲವೇ? ಆ ಶ್ರೀರಾಮನಂತೂ ಇವರ ಆರಾಧ್ಯ ದೈವ. ಇಂದಿಗೂ ಇಲ್ಲಿನ ರಾಜನನ್ನು ಜನರು ರಾಮ ನೆಂದೇ ಕರೆಯುತ್ತಾರೆಯೇ ಹೊರತು ಬೇರಾವುದೇ ಹೆಸರಿನಿಂದಲ್ಲ. ಇಲ್ಲಿನ ಸೇತುವೆಗಳಿಗೂ ಸಹ ರಾಮಸೇತು (ರಾಮಾ ಬ್ರಿಡ್ಜ್) ಎಂದೇ ಹೆಸರು. ರಾಮನೆಂಬುದು ಇಲ್ಲಿನ ಜನರಿಗೆ ಕೇವಲ ಹೆಸರಲ್ಲ. ಅವನೊಬ್ಬ ಶ್ರೇಷ್ಠ ವ್ಯಕ್ತಿ. ಪೂತರು ಮುಂದುವರೆದು ಕೇಳುತ್ತಾರೆ " ಎಲೈ ಮುನಿವರ್ಯನೆ, ಈ ಕ್ಷೇತ್ರಕ್ಕೆ ಯಾರ್ಯಾರು ಹೋಗಬಹುದು ? ಇಲ್ಲಿಗೆ ಹೋಗಬಹುದಾದ ವಿಧಾನವಾರೂ ಹೇಗೆ ? ಈ ಬಗ್ಗೆ ಸವಿಸ್ತಾರವಾಗಿ ಹೇಳಿ " ಎನ್ನಲು, ಮಹರ್ಷಿಗಳು ಹೇಳುತ್ತಾರೆ " ಜಾತಿ, ವಯಸ್ಸು, ಅಂತಸ್ತು, ಧರ್ಮ, ಲಿಂಗ ಬೇಧವಿಲ್ಲದೆ ಯಾರು ಬೇಕಾದರೂ ಈ "ತೀರ್ಥ" ಕ್ಷೇತ್ರವನ್ನು ಸಂದರ್ಶಿಸಬಹುದಾದರೂ, ವಯಸ್ಸಿನಲ್ಲಿರುವ ಯುವಕರಿಗೆ ಈ ಊರು ವಿಶೇಷವಾದ ಫಲಗಳನ್ನು ನೀಡುವುದು. ತಮ್ಮ ಧರ್ಮಪತ್ನಿಯೋದನೆ ಯಾವಾಗ ಬೇಕಾದರೂ ಈ ಕ್ಷೇತ್ರವನ್ನು ಸಂದರ್ಶಿಸಬಹುದು.ಒಂದು ವೇಳೆ ಧರ್ಮ ಪತ್ನಿಯನ್ನು ಜೊತೆಯಲ್ಲಿ ಕೊಂಡೊಯ್ದಿಲ್ಲವಾದಲ್ಲಿ, ಒಂದೆರಡು ದಿನದ ಮಟ್ಟಿಗೆ ಇಲ್ಲಿ ಪತ್ನಿಯರು ಕೂಡ ದೊರೆಯುತ್ತಾರೆ. ಈ ಕ್ಷೇತ್ರದಲ್ಲಿ ಇದ್ದಷ್ಟು ದಿನ ಬ್ರಹ್ಮಚರ್ಯವನ್ನು ಕಡಾಖಂಡಿತವಾಗಿ ಪಾಲಿಸಬಾರದು. ಅಷ್ಟೇ ಅಲ್ಲ ಇಲ್ಲಿ ತಂತಮ್ಮ ಶಕ್ತಿಗನುಸಾರವಾಗಿ, ಪೂರ್ತಿ ಬಾಡಿ ಮಸಾಜ್ ಮಾಡಿಸಿಕೊಳ್ಳಬಹುದು.ಇಲ್ಲಿಗೆ ಭೇಟಿಯಿತ್ತಾಗ, ಆದಿಯಲ್ಲಿ ಆಗಲಿ, ಮಧ್ಯದಲ್ಲಿ ಆಗಲಿ, ಅಂತ್ಯದಲ್ಲೇ ಆಗಲಿ, ಪೂರ್ತಿ ಮಸಾಜ್ ಮಾಡಿಸಬೇಕು. ಶಕ್ತವಿಲ್ಲದಿದ್ದಲ್ಲಿ ಅರ್ಧ ಬಾಡಿ ಮಸಾಜ್, ಅದೂ ಸಾಧ್ಯವಾಗದಿದ್ದಲ್ಲಿ ಫುಟ್ ಮಸಾಜ್ ಆದರೂ ಸರಿ ಮಾಡಿಸಿಕೊಳ್ಳಬಹುದು.ರಾತ್ರಿ ಹತ್ತರ ನಂತರ ಮಾತ್ರ ಆರಂಭಗೊಂಡು, ಮಧ್ಯರಾತ್ರಿ ಎರಡರ ವರೆಗೆ ಸ್ವರ್ಗವೇ ಧರೆಗಿಳಿದು ಬಂದಂತೆ ಕಂಗೊಳಿಸುವ ಖಾವೋ ಸ್ಯಾನ್ ರಸ್ತೆಯಂತೂ "ತೀರ್ಥ" ಪ್ರಿಯರಿಗೆ ವಿಶೇಷವಾದ ಫಲಗಳನ್ನು ಕೊಡತಕ್ಕದ್ದು.ಇಲ್ಲಿನ ಸುಂದರಿಯರಾದರೋ ವಿಶೇಷವಾದ ಧಿರಿಸುಗಳನ್ನು, ಆಭರಣಗಳನ್ನು ಧರಿಸಿ ಕಂಗೊಳಿಸುತ್ತಾರೆ. ಯಾರು ಈ ಕ್ಷೇತ್ರವನ್ನು ಸಂದರ್ಶಿಸಿ, ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಾರೋ, ಅವರ ದೇಹದ ನೋವುಗಳೆಲ್ಲ ಮಾಯವಾಗಿ, ಉತ್ತಮ ರೀತಿಯ ಆರೋಗ್ಯ ಉಂಟಾಗುವುದು. ಇದು ಸತ್ಯ ಎಂದು ಶ್ವಾನಕಾದಿ ಮಹರ್ಷಿಗಳು ಪೂತ ಮುನಿಗಳಿಗೆ ಹೇಳಿದರು ಎಂಬಲ್ಲಿಗೆ ಏಷ್ಯಾ ಖಂಡದ ಥಾಯ್ ದೇಶದ "ತೀರ್ಥ" ಕ್ಷೇತ್ರ ಮಹಿಮೆಯ ಕಥೆ ಸಂಪೂರ್ಣವಾದುದು... ಕಲಿಯುಗೆ, ಪ್ರಥಮ ಪಾದೇ, ಜಂಭೂ ದ್ವೀಪೇ, ಏಷ್ಯಾ ವರ್ಷೆ,ಏಷ್ಯಾ ಖಂಡೇ, ದಕ್ಷಿಣ ದಿಕ್ಭಾಗೆ ,ಥಾಯ್ "ತೀರ್ಥ" ಕ್ಷೇತ್ರೇ ಪ್ರವಾಸ ಕಥನೆ ಸಂಪೂರ್ಣಂ.. ಮಮ (ಎಲ್ಲರೂ ಮಮ ಅಂತ ಹೇಳಿ)ಶೀಘ್ರಸ್ಯೆ ಥಾಯ್ ದೇಶೆ ಕ್ಷೇತ್ರೇ ದರ್ಶನೆ ಭಾಗ್ಯೆ ಕರಿಷ್ಯೇ... *********** ಮಂಗಳಂ ***************

ಶ್ರೀ ಬ್ಯಾಂಕಾಕೋಪಾಖ್ಯಾನ ಮೂರನೆಯ ಅಧ್ಯಾಯ (ನಿನ್ನೆಯಿಂದ ಮುಂದುವರೆದಿದೆ)

ಮಹರ್ಷಿಗಳು ಮುಂದುವರೆದು ಹೇಳುತ್ತಾರೆ. ಎಲೈ ಮುನಿಶ್ರೇಷ್ಟರೆ ನಿಮಗೆ ಮೂರನೆಯ ದಿನದ ಕಥೆಯನ್ನು ಹೇಳುತ್ತೇನೆ ಕೇಳಿ. ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡು ಸುರೇಶ ಅವರು ಪತ್ನೀ ಸಮೇತರಾಗಿ ಫ್ಲೋಟಿಂಗ್ ಮಾರ್ಕೆಟನ್ನು ನೋಡಲು ಹೋದರು ಎನ್ನಲಾಗಿ ಪೂತರು ಕೇಳುತ್ತಾರೆ. ಸ್ವಾಮಿ ಈ ಫ್ಲೋಟಿಂಗ್ ಮಾರ್ಕೆಟ್ ಎಂದರೇನು? ಇದರ ಬಗ್ಗೆ ಸವಿಸ್ತಾರವಾಗಿ ಹೇಳಿ ಎನ್ನಲು ಮಹರ್ಷಿಗಳು ಮುಂದುವರೆಸುತ್ತಾರೆ. ಬ್ಯಾಂಕಾಕಿನಲ್ಲಿ ತುಂಬಾ ಪ್ರಸಿದ್ಧವಾದ ಸ್ಥಳ ಫ್ಲೋಟಿಂಗ್ ಮಾರ್ಕೆಟ್. ಇಂತಿಷ್ಟು ಹಣವನ್ನು ಕೊಟ್ಟು ಬಾಡಿಗೆಗೆ ಬೋಟೊಂದನ್ನು ಪಡೆದು, ಆ ಬೋಟಿನಲ್ಲಿ ಕುಳಿತು ನದಿಯಲ್ಲಿ ಪ್ರಯಾಣಿಸಬೇಕು. ಆ ನದಿಯ ಎರಡೂ ಕಡೆ ನೂರಾರು ವರ್ತಕರ ಅಂಗಡಿಗಳು. ಅಷ್ಟೇ ಅಲ್ಲದೇ ದೋಣಿಯಲ್ಲೇ ಅಂಗಡಿಗಳ ಮೂಲಕ ವ್ಯಾಪಾರ ಮಾಡುತ್ತಿರುವ ವರ್ತಕರು ಒಂದಷ್ಟು ಜನ. ಇಲ್ಲಿನ ಅಂಗಡಿಗಲಾದರೋ ಸುಂದರವಾದ ಕನ್ಯೆಯರಿಂದ ಸುತ್ತುವರೆದಿದೆ. ವಿಧವಿಧವಾದ ವೇಷಭೂಷಣಗಳನ್ನು ತೊಟ್ಟ ಲಲನೆಯರನ್ನು ನೋಡಲಂತೂ ಕಣ್ಣುಗಳೇ ಸಾಲದು.ಬ್ರೆಡ್ ಇಂದ ಹಿಡಿದು ಸೀಫುಡ್ ವರೆಗೆ, ಕನ್ನಡಿಯಿಂದ ಎಲೆ ಅಡಿಕೆಯ ಕುಟ್ಟಣಿವರೆಗೆ ವಿಧವಿಧವಾದ ವಸ್ತುಗಳನ್ನು ಆ ವರ್ತಕರು ಮಾರುತ್ತಿರುತ್ತಾರೆ. ನಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡಿ ಮುಗಿಸಬಹುದು. ಈ ರೀತಿಯ ಶಾಪಿಂಗ್ ಮುಗಿಸಿ ಹೊರಟ ಸುರೇಶ ಅವರು ಬ್ಯಾಂಕಾಕಿನ ಪ್ರಸಿದ್ಧ ವಿಕ್ಟರಿ ಮಾನುಮೆಂಟ್ ನೋಡಿಕೊಂಡು ಹೋಟೆಲಿಗೆ ಬಂದು ರಾತ್ರಿ ಪವಡಿಸಿದರೆಂಬಲ್ಲಿಗೆ ಮೂರನೆಯ ಅಧ್ಯಾಯವು ಮುಗಿಯಿತು

ಶ್ರೀ ಬ್ಯಾಂಕಾಕೋಪಖ್ಯಾನ - 2

ರೀ ಬ್ಯಾಂಕಾಕೋಪಖ್ಯಾನ (ನಿನ್ನೆಯಿಂದ ಮುಂದುವರೆದಿದೆ)
ಎರಡನೆ ಅಧ್ಯಾಯ :
ಮಹರ್ಷಿಗಳು ಮುಂದುವರೆದು ಹೇಳುತ್ತಾರೆ. ಎಲೈ ಮುನಿವರ್ಯರೇ ಸುರೇಶ ಅವರ ಬ್ಯಾಂಕಾಕ್ ಕಥೆಯ ಎರಡನೆ ದಿನದ ಭಾಗವನ್ನು ಹೇಳುತ್ತೇನೆ ಕೇಳಿ. ಬೆಳಿಗ್ಗೆ ಎದ್ದು ಪ್ರಾತಃಕಾಲದ ನಿತ್ಯಗಳನ್ನು ತೀರಿಸಿಕೊಂಡು ಅವರು ಪತ್ನೀ ಸಮೇತರಾಗಿ ಬುದ್ಧನ ದರ್ಶನಕ್ಕೆ ಹೊರಟರು. ಬುದ್ಧ ದೇವಾಲಯದ ಒಳ ಹೋದಡನೇ ಏನೋ ಒಂದುರೀತಿಯ ಸಂತಸ. ತ್ಯಾಗ, ಅಹಿಂಸೆಗಳನ್ನು ಇಡೀ ಜಗತ್ತಿಗೆ ಸಾರಿದ ಬುದ್ಧ. ಎನೋ ಒಂದು ರೀತಿಯ ಅಯಸ್ಕಾಂತಿಯ ಶಕ್ತಿ ಅವನ ನೋಟದಲ್ಲಿ. ಆಹಾ ಧನ್ಯ ಈ ಜನ್ಮ ಎಂದು ಮನದುಂಬಿ ಬುದ್ಧನ ದರ್ಶನ ಮಾಡಿ ಹೊರಬಂದೊಡನೆ ತಿಳಿದ ಹೊಸ ವಿಷಯ. ಇಂದು ಬುದ್ಧನ ವಿಶೇಷ ಪೂಜೆ. ಇಡೀ ಥಾಯಲ್ಯಾಂಡ್ ದೇಶದ ತುಂಬೆಲ್ಲ ಬುದ್ಧ ದೇವಾಲಯಗಳಲ್ಲೆಲ್ಲ ವಿಶೇಷ ಪೂಜೆ ಅಂತೆ.ಅದನ್ನು ಕೇಳಿ ತಮ್ಮ ಪ್ಲಾನ್ ಎ ಅನ್ನು ಬದಲಿಸಿ ಪ್ಲಾನ್ ಬಿ ಮಾಡಿದರು. ಪ್ಲಾನ್ ಬಿ ಏನೆಂದರೆ ಇವತ್ತು ಪೂರ್ತಿ ಬರೀ ಬುದ್ಧನ ದೇವಾಲಯಗಳನ್ನೆಲ್ಲ ನೋಡಬೇಕೆಂದು ನಿರ್ಧರಿಸಿ, ಅಲ್ಲಿಂದ ಹೊರಟು ಯಾವುದೋ ಒಂದು ಸ್ಪೀಡ್ ಬೋಟ್ ಹಿಡಿದು ನಗರದ ತುಂಬೆಲ್ಲ ಇರುವ ಸುಮಾರು ಐದಾರು ಬುದ್ಧ ದೇವಾಲಯಗಳನ್ನೆಲ್ಲ ಸಂದರ್ಶಿಸಿದ್ದಾಯಿತು. ಲಕ್ಕಿ ಬುದ್ದ ಟೆಂಪಲ್, ಸ್ಟಾಂಡಿಂಗ್ ಬುದ್ಧ ಟೆಂಪಲ್, ಬುದ್ಧ ಇಂಟರ್ನ್ಯಾಷನಲ್ ಮೆಡಿಟೇಷನ್ ಟೆಂಪಲ್, ವಾಟ್ ಅರುನ್ ಬುದ್ಧ, ದಿ ಟೆಂಪಲ್ ಆಫ್ ಎಮರಾಲ್ಡ್ ಬುದ್ಧ ಮುಂತಾದ ದೇವಾಲಯಗಳನ್ನು ಸಂದರ್ಶಿಸಿ, ಚೈನಾ ಮಾರ್ಕೆಟ್ ಹಾಗೂ ಲಿಟಲ್ ಇಂಡಿಯಾ ಗಳನ್ನು ಸಂದರ್ಶಿಸಿ, ರಾತ್ರಿ ಬಟರ್ ನಾನ್ ಹಾಗೂ ಮಟರ್ ಪನೀರ್ ತಿಂದು ಮತ್ತೆ ತನ್ನ ಹೋಟೆಲಿನ ರೂಮಿಗೆ ಬಂದು ಪವಡಿಸಿದರೆಂಬಲ್ಲಿಗೆ ಏಶಿಯಾ ಖಂಡದ ಮಲೇಶಿಯಾ ಪ್ರವಾಸವೆಂಬ ಕಥನದ ಎರಡನೇ ಅಧ್ಯಾಯವು ಸಂಪೂರ್ಣವಾದುದು
30 Jan 2016

ಶ್ರೀ ಬ್ಯಾಂಕಾಕೋಪಖ್ಯಾನ - 1

ಒಮ್ಮೆ ಪೂತ ಪುರಾಣಿಕರು ಶ್ವಾನಕಾದಿ ಮಹರ್ಷಿಗಳನ್ನು ಕಂಡು ಇಂತೆಂದರು... ಸ್ವಾಮಿ! ಈ ವಿಶ್ವದಲ್ಲಿ ಸುತ್ತಾಡಲು ಮಜವಾಗಿರುವ ಊರೊಂದರ ಬಗ್ಗೆ ಹೇಳಿ ಎನ್ನಲು ಶ್ವಾನಕಾದಿ ಮಹರ್ಷಿಗಳು ಇಂತೆಂದರು : ಎಲೈ ಮುನುವರ್ಯರೇ ಕೇಳಿರಿ. ಭೂಲೋಕದಲ್ಲಿ ಬ್ಯಾಂಕಾಕು ಎಂಬ ಊರಿರುವುದು. ಬ್ಯಾಂಕಾಕು ಕ್ಷೆತ್ರವಾದರೂ ಸುಂದರವಾದ ಸರೋವರಗಳಿಂದಲೂ, ಉದ್ಯಾನವನಗಳಿಂದಲೂ, ಸುಂದರವಾದ ಕನೆಯರಿಂದಲೂ ಸುತ್ತುವರೆದಿರುವುದು.ಆ ಊರಿನ ಬಗ್ಗೆ ಹೇಳುವೆನು ಕೇಳಿ ಎಂದು ಹೇಳಲುಪಕ್ರಮಿಸಿದರು. ಕಲಿಯುಗದಲ್ಲಿ ಸನ್ ಎರಡು ಸಾವಿರದ ಹದಿನಾರರ ಸಂವತ್ಸರದ ಪವಿತ್ರ ಉತ್ತರಾಯಣ ಜನವರಿ ಮಾಸದ ಇಪ್ಪತ್ತೊಂಭತ್ತನೇ ತಾರೀಕು ಸುರೇಶ ರವರು ತಮ್ಮ ಧರ್ಮಪತ್ನಿಯಾದ ಅಕ್ಷಯಾ ರಾವ್ ಒಡಗೂಡಿ ಕೌಲಲಾಂಪುರದಿಂದ ಹೊರಟು ಬ್ಯಾಂಕಾಕ್ ಕ್ಷೇತ್ರವನ್ನು ಸೇರಿ ರೈನ್ ಬೋ ಇಂಡಿಯನ್ ಫುಡ್ ಖಾನಾವಳಿಯಲ್ಲಿ ಊಟ ಮಾಡಿ ಸವಸ್ದೀ ಎಂಬ ಮೂರು ತಾರೆಗಳುಳ್ಳ ಹೋಟೆಲ್ ನಲ್ಲಿ ಚೆಕಿನ್ ಆದರು. ತದನಂತರ ಸಾಯಂಕಾಲದ ನಿತ್ಯವಿಧಿಗಳನ್ನೆಲ್ಲ ತೀರಿಸಿಕೊಂಡು ಹತ್ತಿರದಲ್ಲಿ ಇರುವ ಪಂಚಮುಖಿ ಗಣೇಶ ಹಾಗೂ ಬುದ್ಧನ ದೇಗುಲಗಳನ್ನು ಸಂದರ್ಶಿಸಿದರು. ಪೂರ್ವ ಕಾಲದ ಪಾಪಗಳಿಂದಲೂ ಬಾಧಿತರಾಗಿದ್ದರಿಂದ ಬುದ್ಧನ ದರ್ಶನ ಭಾಗ್ಯ ಅವರಿಗೆ ಸಿಗಲಿಲ್ಲ. ದೇವಾಲಯ ಸಮಯದ ಅವಧಿ ಮುಗಿದಿದ್ದು, ನಾಳೆ ಬೆಳಿಗ್ಗೆ ಹೋಗೋಣವೆಂದು ನಿರ್ಧರಿಸಿ, ರಾತ್ರಿ ಎಂಟರ ಬಳಿಕ ಬ್ಯಾಂಕಾಕ್ ಪುಣ್ಯಕ್ಷೇತ್ರದ ಅತಿ ಪ್ರಸಿದ್ಧವಾದ ನೈಟ್ ಮಾರ್ಕೆಟ್ ಆದ ಖವೋಸಾನ್ ರಸ್ತೆಯೆಲ್ಲ ಸುತ್ತಾಡಿ, ತನ್ನ ಧರ್ಮಪತ್ನಿಗೆ ಹೊಸ ಬಟ್ಟೆಯೊಂದನ್ನು ಖರೀದಿಸಿ ಮತ್ತೆ ಅಂದಿನ ರಾತ್ರಿ ಹೋಟೆಲಿಗೆ ಬಂದು ಪವಡಿಸಿದರೆಂಬಲ್ಲಿಗೆ ಏಶಿಯಾ ಖಂಡದ ಸುರೇಶರಾವ್ ರವರ ಥಾಯಲ್ಯಾಂಡ್ ಪ್ರವಾಸ ಕಥಾಭಾಗದ ಮೊದಲ ದಿನದ ಕಥೆಯು ಸಮಾಪ್ತಿಯಾದುದು. ಈ ಮೊದಲ ದಿನದ ಕಥನವನ್ನು ಓದಿದ ಬಳಿಕ ನಾಳೆ ಬರುವ ಎರಡನೇ ದಿನದ ಕಥೆಯನ್ನು ಓದಿಲ್ಲವಾದರೆ ಅಧಿಕವಾದ ಬಾಧೆಗಳಿಂದಲೂ, ಪಾಪಗಳಿಂದಲೂ ಬಂಧಿಸಲ್ಪಡುವಂತವರಾಗುತ್ತಾರೆ. ಹಾಗಾಗಿ ನಾಳೆಯ ಭಾಗವನ್ನು ಸಹ ಓದುವರಂತಾಗಿ ಎಂದು ಮಹರ್ಷೀಗಳು ಹೇಳಿದರು.

December 5 ರಂದು ಹೆಂಡತಿ ತವರುಮನೆಗೆ ಹೋದ ಖುಷಿ, ಸಾರೀ... ದುಃಖದಲ್ಲಿ ಬರೆದದ್ದು

ನನ್ನ ಪ್ರೀತಿಯ ಒಬ್ಬಳೇ ಹೆಂಡತಿಯಾದ @[100001636994958:2048:Akshaya Rao] , ನೀನೇನೋ ಬೆಂಗಳೂರಿಗೆ ಹೋಗಿ ನಿಮ್ಮಮ್ಮನ ಮನೆಯಲ್ಲಿ ತಿಂದುಂಡು ಕಾಲ ಕಳೆಯುತ್ತಿರುವೆ. ಆದರೆ ನೀನಿಲ್ಲದೆ ನನಗೆ ಊಟ ರುಚಿಸುತ್ತಿಲ್ಲ. ನಿದ್ರೆ ಬರುತ್ತಿಲ್ಲ...ಊಟ ತಿಂಡಿ ಇಲ್ಲದೆ ತುಂಬಾ ಒಣಕ್ಕೊಂದು ಹೋಗಿದೀನಿ.ಎಷ್ಟು ಒಣಕ್ಕೊಂದು ಹೋಗಿದೀನಿ ಅಂದ್ರೆ, ಹೊರಗೆ ಎಲ್ಲೇ ಹೋದರು ಸಹ ನನ್ನ ಸ್ನೇಹಿತರೆಲ್ಲ ವಣಕ್ಕಂ ವಣಕ್ಕಂ ಅಂತ ನಾನು ಒಣಕ್ಕೊಂದು ಹೋಗಿರೋದರ ಬಗ್ಗೆನೇ ವಿಚಾರಿಸ್ತಾ ಇದಾರೆ.. ನೀನಿಲ್ಲದೆ ಇರೋ ಊಟ ಎಂಥಹ ಊಟ ಅಂತ ನಿನ್ನೆ ಅಡಿಗೆನೆ ಮಾಡಿರಲಿಲ್ಲ. ಹೋಟೆಲ್ ನಲ್ಲಿ ತಿಂದ್ಕೊಂಡು ಬಂದೆ.ಇವತ್ತು ಶನಿವಾರ ರಜಾ ಮನೇಲೆ ಇದ್ದೆ ಆಲ್ವಾ.. ಆದ್ರೂನು ನೀನಿಲ್ಲದೆ ಊಟ ಎಂಥಹ ಊಟ ಅಂತ ಅಡಿಗೆ ಮಾಡ್ಲಿಲ್ಲ.. ಏನೋ ಸ್ವಲ್ಪ ಟೊಮೇಟೊ, ಆಲೂ ಗಡ್ಡೆ, ಹುರುಳಿಕಾಯಿ, ಶುಂಟಿ, ಕ್ಯಾರೆಟ್ ಹಾಗೆ ಸ್ವಲ್ಪ ಬಟಾಣಿ ಹಾಕಿ ಉಪ್ಪಿಟ್ಟು ಮಾಡ್ಕೊಂಡೆ ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು, ತುಪ್ಪ, ಕಾಯಿ ತೂರಿ ಹಾಕ್ಕೊಂಡು ತಿನ್ನೋಣ ಅಂದ್ಕೊಂಡೆ..ನೆಂಚಿ ಕೊಳ್ಳೋಕೆ ಪ್ರಿಯ ಉಪ್ಪಿನಕಾಯಿ ಹೇಗೂ ಮನೇಲಿ ಇದೆ.. ಹಾಗೇ ನೀನಿಲ್ಲದೆ ಇರೋ ಎಂತಾ ಊಟ ಅಲ್ವಾ ಉಪ್ಪಿಟ್ಟು ನ ಹಾಗೆ ತಿನ್ನೋಕೆ ಮನಸಾಗಲಿಲ್ಲ.ಹಾಗಾಗಿ ಆಲೂ ಗಡ್ಡೆ ಬಜ್ಜಿ ಮಾಡ್ಕೊಂಡೆ. ಲೈಟ್ ಆಗಿ ಮಳೆ ಬೇರೆ ಬರ್ತಿದೆ..ಹೇಗೂ ಕಡ್ಲೆ ಹಿಟ್ಟು ಕಲ್ಸಿದೀನಿ ಅಂತ ಒಂದೆರಡು ಮೆಣಸಿನಕಾಯಿ ಬಜ್ಜಿ ಮಾಡ್ಕೊಂಡೆ.. ಇನ್ನು .. ಬೋಂಡ ಮಾಡಿದ ಎಣ್ಣೆ ಹಾಗೆ ಕಾದಿತ್ತಲ್ವಾ ಅದಕ್ಕೆ ಎರಡು ಹಪ್ಪಳ ಹಾಕಿ ಹಪ್ಪಳ ಕರ್ಕೊಂಡೆ. ಬೆಳಿಗ್ಗೆ ತಂದಿದ್ದ ಬೂಂದಿ, mixture ಸ್ವಲ್ಪ ಇತ್ತಲ್ವಾ ಅದುನ್ನೇ ನೆಂಚಿಕೊಂಡು ತಿನ್ನೋಣ ಅಂದ್ಕೊಂಡೆ. ಆದ್ರೆ ನೀನಿಲ್ದೆ ಇರೋ ಊಟ ಅದೂ ಉಪ್ಪಿಟ್ಟು ಬೇರೆ, ತಿಂದ್ರೆ ಬಾಯಾರಿಕೆ ಜಾಸ್ತಿ ಆಗುತ್ತಲ್ವಾ ಹಾಗಾಗಿ ಚಿಕ್ಕದು ಬರೀ ೧ ರಿನ್ಗೆಟ್ ಪೆಪ್ಸಿ ಕ್ಯಾನ್ ತಗೊಂಡು ಬಂದೆ.ನಿನಗೆ ಕೊಟ್ಟ ಮಾತಿನಂತೆ ಒಬ್ನೇ ಇದ್ದೀನಿ ಅಂತ ನಾನು ಕುಡೀತ ಇಲ್ಲ.. ನೋಡು ಬೇಕಾದ್ರೆ ಈ ಫೋಟೋದಲ್ಲಿ ಎಲ್ಲಾದ್ರೂ ಬಿಯರ್ ಬಾಟಲ್ ಕಾಣುಸ್ತಾ ಇದ್ಯಾ ನಿಂಗೆ ಇಲ್ಲಾ ತಾನೇ.... ಇದೇ ಸಾಕ್ಷಿ ನಿನ್ನ ನಾನು ಎಷ್ಟು ಪ್ರೀತಿ ಮಾಡ್ತೀನಿ ಅಂತಾ.. ನೀನಿಲ್ಲದೆ ನನಗೆ ತಿಂಡಿ ಊಟ ಸೇರ್ತಾ ಇಲ್ಲ ...ತುಂಬಾ ಒಣಕ್ಕೊಂದು ಹೋಗಿದೀನಿ.. ನಿಂದೆ ಚಿಂತೆ ಮಾಡ್ತಾ ಇದ್ದೀನಿ...ಈ ಕಾಗದ ಕಂಡ ತಕ್ಷಣ ವೆರಿ ನೆಕ್ಸ್ಟ್ ಫ್ಲೈಟ್ ಹತ್ಕೊಂಡು ಬಂದ್ಬಿಡು ಪ್ಲೀಸ್... ಹಾ.. ಅಂದ ಹಾಗೆ ಬರೋಕೆ ಮುಂಚೆ ನಂಗೆ ಫೋನ್ ಮಾಡಿ ಇಂತಾ ದಿನ ಬರ್ತಾ ಇದ್ದೀನಿ ಅಂತ ಹೇಳ್ಬಿಟ್ಟು ಬಾ. ನಂಗೆ ಸರ್ಪ್ರೈಸ್ ಕೊಡ್ಬೇಕು ಅಂತ ನೀನೇನಾದ್ರೂ ಹೇಳ್ದೆ ಕೇಳ್ದೆ ಬಂದ್ಬಿಟ್ರೆ ಆಮೇಲೆ ನೀನು ಸರ್ಪ್ರೈಸ್ ಆಗ್ಬಿಡ್ತೀಯ... ಇಂತಿ ನಿನ್ನ ಬರುವಿಕೆಯನ್ನೇ ಎದುರು ನೋಡ್ತಾ ಇರುವ ನಿನ್ನ ಗಂಡ.....

నేను చూసిన సినిమా - The Walk

ಆಗಸ್ಟ್ 7, 1974 ರ ಮುಂಜಾನೆ. ಅದೇ ತಾನೇ ಉದಯಿಸುತ್ತಿದ್ದ ಸೂರ್ಯ ರಶ್ಮಿಗಳು ನ್ಯೂಯಾರ್ಕ್ ನಗರವನ್ನು ಚುಂಬಿಸಿ ಮುತ್ತಿಡುತ್ತಿದ್ದ ಸಮಯ. ನ್ಯೂಯಾರ್ಕ್ ನಗರಿಗರು ಬೆಳಗಿನ ವಾಕಿಂಗೊ, ಜಾಗಿಂಗಿಗೆಂದೋ ವರ್ಲ್ಡ್ ಟ್ರೇಡ್ ಸೆಂಟರ್ ನ ಬಳಿ ನಡೆದಾದುತ್ತಿದ್ದವರೆಲ್ಲ ನಿಂತಲ್ಲೇ ನಿಂತು, ಆಕಾಶವನ್ನೇ ದಿಟ್ಟಿಸಿ ನೋಡದ ಹತ್ತಿದರು. ಎಂತಹ ಧೈರ್ಯಶಾಲಿಗಾದರೂ ಸರಿ, ಹೃದಯ ನಿಂತು ಹೋದೀತು ಅಂತಹ ಆಶ್ಚರ್ಯ. ಅಂತಹ ಮೈ ಝುಮ್ಮೆನ್ನುವ ಸಾಹಸ.ಸರಿಸುಮಾರು 1350 ಅಡಿಗಳ ಮೇಲೆ ಯಾವುದೇ ರಕ್ಷಣೆಯಿಲ್ಲದೆ ವರ್ಲ್ಡ್ ಟ್ರೇಡ್ ಸೆಂಟರ್ ನ ಎರಡು ಗೋಪುರಗಳ ನಡುವೆ ಕೇವಲ ಒಂದು ತಂತಿಯ ಮೇಲೆ ಅವನು ನಡೆದಾಡುತ್ತಿದ್ದ. ಅದೂ ಸುಮಾರು 25 ಕೆಜಿ ತೂಗುವ 26 ಅಡಿ ಉದ್ದದ ಬ್ಯಾಲೆನ್ಸಿಂಗ್ ಕೋಲನ್ನು ಕೈಯಲ್ಲಿ ಹಿಡಿದು. ಸುಮಾರು 45 ನಿಮಿಷ ನಡೆದ ಈ ಸಾಹಸವನ್ನು ಕಣ್ಣಿನ ರೆಪ್ಪೆ ಮುಚ್ಚದೆ ನ್ಯೂಯಾರ್ಕ್ ನಗರಿಗರು ನೋಡಹತ್ತಿದರು.


ಹೌದು. ಇಂತಹ ಒಂದು ಅದ್ಭುತ ಸಾಹಸಿಗನೆ 24 ರ ಹರೆಯದ ನಮ್ಮ ಹೀರೋ ಫಿಲಿಪ್ ಪಟಿಟ್. ಮೂಲತಹ ಫ್ರೆಂಚ್ ಪ್ರಜೆಯಾಗಿದ್ದ ಇವ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ತಂತಿಯ ಮೇಲೆ ನಡೆಯಬೇಕೆಂಬ ಧೃಢ ನಿಶ್ಚಯದೊಂದಿಗೆ ಬಂದು ಸೇರಿದ್ದು ನ್ಯೂಯಾರ್ಕ್ ನಗರಕ್ಕೆ. ಆಗಿನ್ನೂ ವರ್ಲ್ಡ್ ಟ್ರೇಡ್ ಸೆಂಟರ್ ನಿರ್ಮಾಣವಾಗುತ್ತಿದ್ದ ಸಮಯ. ಕಟ್ಟಡ ನಿರ್ಮಾಣ ಕಾರ್ಮಿಕನಂತೆ ವೇಷ ಮರೆಸಿಕೊಂಡು,ಟ್ವಿನ್ ಟವರ್ ನ ಇಂಚಿಂಚೂ ಅಲೆದಾಡಿದ.ಅವನ ಮೆದುಳಿನ ಮೆಮೊರಿ ಚಿಪ್ ತುಂಬೆಲ್ಲ ಟ್ವಿನ್ ಟವರ್ನ ಉದ್ದ, ಅಗಲ, ಎತ್ತರಗಳೇ ಮುಂತಾದ ಡಾಟಾಗಳಿಂದ ತುಂಬಿ ಹೋಗಿತ್ತು. ತನ್ನ ಸ್ನೇಹಿತರ ನೆರವಿನಿಂದ ಎರಡೂ ಟವರ್ ಗಳ ನಡುವೆ ಹಗ್ಗ ಹಾಯಿಸಿ, ಅದರ ಮೂಲಕ ಸುಮಾರು 200 ಕೆಜಿ ಭಾರದ ತಂತಿ ಬಿಗಿದು, ತನ್ನ ಸಾಹಸಕ್ಕೆ ವೇದಿಕೆ ಸಿದ್ದಗೊಳಿಸಲು ತೆಗೆದುಕೊಂಡ ಸಮಯ ಕೇವಲ ಒಂದು ರಾತ್ರಿ.ಅದೂ ಕೆಲಸಗಾರರ ಕಾವಲುಗಾರರ ಕಣ್ಣು ತಪ್ಪಿಸಿ ಮಾಡಬೇಕಾದ ಕೆಲಸ. ಇಂತಹ ಸಾಹಸ ಮಾಡುವಾಗ ರಕ್ಷಣೆಗಾಗಿ ಒಂದು ಹಗ್ಗ ಬಿಗಿದಿರು ಎಂಬ ತನ್ನ ಗುರುಗಳಾದ ಪಾಪ ರೂಡಿಯ ಮಾತನ್ನೂ ಸಹ ನಯವಾಗೆ ತಿರಸ್ಕರಿಸಿದ. ತಾನಾಯಿತು ತನ್ನ ಕನಸಾಯಿತು ಗುರಿಸಾಧನೆಗೆ ಬೇಕಾದ ವಿಷಯವಾಯಿತು ಇವಿಷ್ಟೇ ಅವನ ಪ್ರಪಂಚ.ಕಡೆಗೂ ಗೆದ್ದೇ ಬಿಟ್ಟ. ಇದೇ ನ್ಯೂಯಾರ್ಕ್ ನಗರವೇ ನಿಬ್ಬೆರಗಾಗುವ ಸಾಹಸ ಮಾಡಿಬಿಟ್ಟ.ಅದೂ ಸುಮಾರು 45 ನಿಮಿಷಗಳ ಕಾಲ.ಟ್ವಿನ್ ಟವರ್ ಗಳ ನಡುವೆ ಎಂಟು ಬಾರಿ ಓಡಾಡಿದ್ದ ಕೇವಲ ಒಂದು ಹಗ್ಗದ ಮೇಲೆ.ಒಮ್ಮೆಯಂತೂ ಹಗ್ಗದ ಮೇಲೆ ಮಲಗೆಬಿಡ್ತಾನೆ.ಆ ದೃಶ್ಯ ನೋಡಿದಾಗಲಂತೂ ಎದೆ ಧಸಕ್ಕೆನ್ನುವುದು ಸತ್ಯ.

ತನ್ನ ಈ ಸಾಹಸವನ್ನೆಲ್ಲ ಅವನು ತನ್ನ ಪುಸ್ತಕವಾದ To Reach the Clouds
ನಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾನೆ.ಅವನ ಈ ಕೃತಿಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವಲ್ಲಿ ಸಹ Robert Zemeckis ಅದ್ಭುತ ಕೆಲಸ ಮಾಡಿದ್ದಾರೆ. ಮನಸಿಗೆ ತುಂಬಾ ಬೇಜಾರಾದಾಗ ನಾನು ನೋಡುವ ಕೆಲವು ಚಿತ್ರಗಳಾದ The forrest Gump, Cast Away, A Beautiful Mind, The Pursuit of happiness, The shashawnk Redemption, The theory of everyting ಗಳ ಸಾಲಿಗೆ ಹೊಸ ಸೇರ್ಪಡೆ The Walk ...ಇಂತಹ ಒಂದು ಉತ್ತಮ ಮೊಟಿವೆಶನಲ್ ಚಿತ್ರ ಕೊಟ್ಟ ರಾಬರ್ಟ್ ಅವರಿಗೊಂದು ಸ್ಪೆಶಲ್ ಥ್ಯಾಂಕ್ಸ್. ದಯವಿಟ್ಟು ಮಿಸ್ ಮಾಡದೆ ಒಮ್ಮೆ ನೋಡಿ....

ಕಟ್ಟಪ್ಪ ಬಾಹುಬಲೀನ ಯಾಕೆ ಕೊಂದ

ಕಟ್ಟಪ್ಪ ಬಾಹುಬಲೀನ ಯಾಕೆ ಕೊಂದ

ಅನ್ನೋದಷ್ಟೇ ಮುಖ್ಯ ಅಲ್ಲ..

ಡಾಕ್ಟರ್ ವಿಠಲ್ರಾವ್ ಇಂದ ಕಾಂಪೋಂಡರ್ ಗೋವಿಂದನಿಗೆ ಬರ್ಬೇಕಾದ ಎರಡು ವರ್ಷದ ಬೋನಸ್ ಬಂತಾ ಅನ್ನೋದೂ ಅಷ್ಟೇ ಮುಖ್ಯ ....

Netaji

A very interesting story found on FB on Netaji........

When Netaji went to meet Hitler first time,he was asked to wait by his men in a hall and they would go to inform him about Netaji's arrival.
Netaji started reading a book silently, then a man duplicate of Hitler came to hall showing himself as Hitler and went back as he was unmoved, many other duplicates came and went back.
then lastly Hitler came to check that whether Netaji can differentiate between him and his duplicates.(many times other men came to meet Hitler and they went back meeting his duplicates considering that they had met Hitler)
Netaji didn't respond to any of them, at last Hitler came silently in hall same like his duplicate had done and silently put one of his hand on Netaji's shoulder.

Netaji speaks ” Hitler”.
Hitler surprisingly asked ‘how can u say that I’m Hitler, you have never met Hitler before!’
Netaji answered the great dictator to whom British prime minister was afraid in this tone,

“NO ONE IN THE WORLD HAS THE COURAGE TO PUT HIS HAND ON SUBHASH CHANDRA BOSE’S SHOULDER EXCEPT HITLER, NOT EVEN HIS MEN”

ಸಾಹಿತಿ

ಪದ್ಯ ಕವನ ಲೇಖನ ಬರ್ಕೋಂಡು ಇದ್ರೆ ಸಾಹಿತಿ....

ಪದ್ಯ ಕವನ ಲೇಖನ ಬರ್ಕೋಂಡು ಇದ್ರೆ ಸಾಹಿತಿ......
......
......
ಬರ್ದೂ ಬರ್ದೂ ಬು.ಜೀ.ಆದ್ರೆ ನೀ ಸಾಯ್ತೀ ....

"The Power of your subconscious mind"

ಓದಲು ಸ್ವಲ್ಪ ಉದ್ದವಾದ ಪೋಸ್ಟ್. ಆದರೂ ದಯವಿಟ್ಟು ಒಮ್ಮೆ ಓದಿ. "ಡಾ.ಜಾನ್ ಮರ್ಫಿ"ಯವರ ಪುಸ್ತಕವೊಂದನ್ನು ಓದುತ್ತಿದ್ದಾಗ ನನಗೆ ತೋಚಿದ್ದನ್ನು ಇಲ್ಲಿ ಗೀಚಿದ್ದೇನೆ. ಫೇಸ್ಬುಕ್ ಅಲ್ಲಿ ಬು.ಜೀ ಗಳನ್ನೂ ಬಯ್ಯುವ ಅವರನ್ನು ಕೀಟಲೆ ಮಾಡುವ ನೂರಾರು ಪೋಸ್ಟುಗಳನ್ನು ಓದಿದ್ದೆ. ಆದರೆ ಬು. ಜೀ.ಗಳನ್ನು ಕೀಟಲೆ ಮಾಡುವುದು ಏತಕ್ಕೆ ಅವರ ತಪ್ಪಾದರೂ ಏನು? ಎಂಬ ಸವಿವರಣೆಯನ್ನು ಓದಿದ್ದು ಕೆಲವೇ ಕೆಲವು ಪೋಸ್ಟ್ ಗಳಲ್ಲಿ ಮಾತ್ರ. ಅದರ ನಿಜವಾದ ಅನುಭವ ಇಂದು ನನಗೆ ಮಾಡಿಸಿದವ "ಡಾಕ್ಟರ್ ಜಾನ್ ಮರ್ಫಿ....." ನಮಗೆಲ್ಲ ತಿಳಿದಿರುವಂತೆ ನಮ್ಮ ಪ್ರತಿ ಅಂಗಗಳೂ ಪ್ರತಿ ಭಾವನೆಗಳು, ಪ್ರತಿ ಕಾರ್ಯಗಳೂ ಮೆದುಳಿನ ನಿಯಂತ್ರಣಕ್ಕೊಳಪಟ್ಟಿದೆ. ಆದರೆ ನಮ್ಮಲ್ಲಿ ಬಹುದೇಕ ಮಂದಿಗೆ ತಿಳಿಯದ ವಿಚಾರವೆಂದರೆ, ಇದೇ ನಮ್ಮ ಮೆದುಳು, ಸುಪ್ತ ಪ್ರಜ್ಞೆ ಹಾಗು ಜಾಗೃತ ಪ್ರಜ್ಞೆ ಎಂಬ ಎರಡು ರೀತಿಯ ಪ್ರಜ್ಞಾವಸ್ಥೆ ಹೊಂದಿದೆ. ನಮ್ಮ ಪ್ರತಿ ಚಲನವಲನವನ್ನು ನಿಯಂತ್ರಿಸುವ ಜಾಗೃತ ಪ್ರಜ್ಞೆಯನ್ನೇ ಸುಪ್ತ ಪ್ರಜ್ಞೆ ನಿಯಂತ್ರಿಸುತ್ತದಂತೆ ಎಂದರೆ ಸುಪ್ತ ಪ್ರಜ್ಞೆಯ ತಾಕತ್ತನ್ನು ಒಮ್ಮೆ ಊಹಿಸಿ. ಸುಪ್ತ ಪ್ರಜ್ಞೆ ಎಂಬುದು ಒಂದು ರೀತಿಯ ನಿದ್ರಾವಸ್ತೆ ಎಂದರೂ ಬಹುಶ ತಪ್ಪಿಲ್ಲ. ಯಾವುದೋ ಒಂದು ದ್ವಂದ್ವದಲ್ಲಿ ನಾವು ಮುಳುಗಿದ್ದಾಗ, ನಮ್ಮ ಪ್ರಜ್ಞೆ ಬಹುದೇಕವಾಗಿ ನಿಸ್ತೆಜವಾಗಿ, ಗಟ್ಟಿಯಾದ ಹಾಗು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಅಸಹಾಯಕವಾಗಬಹುದು.ಅಂತಹ ಸಮಯದಲ್ಲಿ ನಮ್ಮ ನೆರವಿಗೆ ಬರುವ ಆಪದ್ಬಾಂದವ ಎಂದರೆ ಇದೇ ಸೊ ಕಾಲ್ಡ್ ಸುಪ್ತ ಪ್ರಜ್ಞೆ ಅಥವಾ subconscious mind. ಸುಪ್ತ ಪ್ರಜ್ಞೆ ಎಂಬುದು ಇಷ್ಟೊಂದು ಪವರ್ ಫುಲ್ ಆಗಿದ್ದರೂ ಕೂಡ, ಅದು ಅದನ್ನು ನಾವು ಹೇಗೆ ಪ್ರೊಗ್ರಾಮಿಂಗ್ ಮಾಡಿ ಟ್ರೈನಿಂಗ್ ಕೊಡುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಮೂಲತಃ ಅದು ನಾವು ಬೆಳೆದ ವಾತಾವರಣ, ನಮ್ಮ ಮಾನಸಿಕ ಹಾಗು ದೈಹಿಕ ಆರೋಗ್ಯ, ನಮ್ಮ ಹವ್ಯಾಸಗಳು,ನಮ್ಮ ದೈನಂದಿನ ಜೀವನಶೈಲಿ ಗೆ ಅನುಗುಣವಾಗಿ ಪ್ರೊಗ್ರಾಮಿಂಗ್ ಆಗಿರುತ್ತದೆ.ಹಾಗಾಗಿ ಅದರಲ್ಲಿ ಅದೆಷ್ಟೋ ಕಲ್ಮಶಗಳು, ಬೇಡವಾದ ಆಲೋಚನೆಗಳು,ಆಯಾಸ, ಅಧೈರ್ಯ, ದ್ವಂದ್ವ ಮುಂತಾದ ಕಲ್ಮಷಗಳೇ ತುಂಬಿರುತ್ತದೆ. ಯಾವುದೇ ಸಮಸ್ಯೆ ಎದುರಾದಾಗ, ಈ ಅಧೈರ್ಯ, ದ್ವಂದ್ವ ಗಳು ಇನ್ನೂ ಹೆಚ್ಚಾಗಿ ನಮ್ಮ ಜಾಗೃತ ಪ್ರಜ್ಞೆಯ ಮೇಲೆ ಸವಾರಿ ಮಾಡಿ, ಈ ಮೊದಲೇ ಹೇಳಿದಂತೆ, ನಮ್ಮ ಪ್ರಜ್ಞೆಯೆಂಬುದು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಆಗದ ಅಸಹಾಯಕ ಸ್ಥಿತಿ ತಲುಪುತ್ತವೆ. ಈ ಸಮಯವನ್ನೇ ಕಾದಿದ್ದ ಜ್ಯೋತಿಷಿಗಳು,ಡೋಂಗಿ ಬಾಬಾ ಗಳೋ ಅಥವಾ ಆತ್ಮಹತೆಯೋ ನಮ್ಮ ಮುಂದಿನ ಪರಿಹಾರಗಳಾಗುತ್ತವೆ. ಅದರ ಬದಲು ಇದೇ ಸುಪ್ತ ಪ್ರಜ್ಞೆಯನ್ನು ಕೆಲವು ಸುಲಭವಾದ ವ್ಯಾಯಾಮಗಳಿಂದ ಶಕ್ತಿಯುತವಾಗಿ ಬದಲಾಯಿಸಬಹುದು. ಅದರಲ್ಲಿನ ಕಲ್ಮಶಗಳನ್ನೆಲ್ಲ ಸ್ವಚ್ಚ ಮಾಡಿ, ಅದನ್ನು ಪ್ರೊಗ್ರಾಮಿಂಗ್ ಗೆ ಅಣಿಗೊಳಿಸಬೇಕು. ಸುಪ್ತಪ್ರಜ್ಞೆ ಯನ್ನು ಬಲಗೊಳಿಸಲು ಇರುವ ಸುಲಭ, ಖರ್ಚಿಲ್ಲದ, ಹಳೆಯ ಹಾಗು ಅತ್ಯುತ್ತಮ ಮಾರ್ಗವೆಂದರೆ ಪ್ರಾರ್ಥನೆ.ಹೌದು.ಭಗವಂತನ ಮುಂದೆ ಮಂಡಿಯೂರಿ,ಕಣ್ಮುಚ್ಚಿ, ಪ್ರಾರ್ಥನೆ ಮಾಡುವುದರಿಂದ ಸುಪ್ತ ಮನಸಿನಲ್ಲಿ ಕೆಲವು ಧನಾತ್ಮಕ ಅಂಶಗಳು ಉತ್ಪತ್ತಿಯಾಗುತ್ತವೆ.ಎಂತಹ ಸಂದರ್ಭದಲ್ಲೂ,ಗಲಿಬಿಲಿಗೆ ಒಳಗಾಗದಂತೆ, ನಮ್ಮನ್ನು ಧೈರ್ಯವಾಗಿರಿಸುವ ಸ್ಥಿತಿಗೆ ಸುಪ್ತ ಪ್ರಜ್ಞೆ ತಯಾರಾಗುತ್ತದೆ. ಒಮ್ಮೆ ಅದು ಈ ರೀತಿ ಪ್ರೋಗ್ರಾಮ್ ಆಗಿ ಈ ಹಂತಕ್ಕೆ ತಲುಪಿದರೆ ಸಾಕು. ಮುಂದೆ ನಡೆಯುವುದೆಲ್ಲ ಮ್ಯಾಜಿಕ್. ವಿಜಯವೆಂಬುದು ಖಂಡಿತ ಕಟ್ಟಿಟ್ಟ ಬುತ್ತಿ. ಪ್ರಾರ್ಥನೆ ಎಂಬುದು ಒಂದು ಧಾರ್ಮಿಕ ವಿಧಾನವಷ್ಟೇ ಅಲ್ಲ, ಅದೊಂದು ಮಾನಸಿಕ ವಿಜ್ಞಾನ ಕೂಡ ಹೌದು.ಅದು ಒಂದು ರೀತಿಯ ಸೆಲ್ಫ್ ಹಿಪ್ನಾಟಿಸಂ ಇದ್ದಂತೆ.ಪ್ರತಿದಿನ ಸ್ವಲ್ಪ ಸಮಯವನ್ನು ಪ್ರಾರ್ಥನೆಗಾಗಿ ಮೀಸಲಿಡಿ.ಭಗವಂತನ ಮುಂದೆ ಪ್ರಾರ್ಥನೆ ಮಾಡಿ ಆದರೆ ಬೇಡಿಕೆ ಇಡಬೇಡಿ. ನಿಜವಾದ ಪ್ರಾರ್ಥನೆಗೆ ಬದಲಾಗಿ ಇಚ್ಛೆ ಪಟ್ಟಿದ್ದನ್ನು ಪಡೆಯುವ ಸಾಮರ್ಥ್ಯ ನಿಮಗೆ ಫಲಿತಾಂಶ ರೂಪದಲ್ಲಿ ಖಂಡಿತ ಸಿಕ್ಕೇ ಸಿಗುತ್ತದೆ. ಈ ರೀತಿಯ ಮಾತನ್ನು ಬೇರೆ ಯಾರಾದರೂ ಸಾಮಾನ್ಯ ವ್ಯಕ್ತಿ ಹೇಳಿದ್ದರೆ ಅದರಲ್ಲಿ ಅಂಥಹ ವಿಶೇಷವೇನಿಲ್ಲ.ಬಹುಷಃ ಅದನ್ನಿಲ್ಲಿ ಟೈಪಿಸುವ ಉದ್ದೇಶವೂ ಇರುತ್ತಿರಲಿಲ್ಲವೇನೋ. ಆದರೆ ಈ ಮಾತನ್ನು ಹೇಳಿದ್ದು ಡೆಲ್ ಕಾರ್ನೆಗಿ, ನೆಪೋಲಿಯನ್ ಹಿಲ್, ಜೇಮ್ಸ್ ಅಲೆನ್ ಮುಂತಾದವರ ಸಾಲಲ್ಲಿ ಮುಂಚೂಣಿಯಾಗಿ ನಿಲ್ಲಬಲ್ಲ ಖ್ಯಾತ ವಿಜ್ಞಾನಿ,ಲೇಖಕ ಹಾಗು ಸಂಶೋಧಕ "ಡಾಕ್ಟರ್ ಜೋಸೆಫ್ ಮರ್ಫಿ". ಲಾಸ್ ಎಂಜಲಿಸ್ ನ "ಡೈರೆಕ್ಟರ್ ಆಫ್ ಚರ್ಚ್ ಅಂಡ್ ಡಿವೈನ್ ಸೈನ್ಸ್" ಗೆ ಮೂವತ್ತಕ್ಕೂ ಹೆಚ್ಚು ವರ್ಷ ಕಾಲ ಮಂತ್ರಿಯಾಗಿದ್ದವ. ಸುಪ್ತ ಪ್ರಜ್ಞೆ ಎಂಬ ಹೊಸ ವ್ಯಾಖ್ಯೆ ಯನ್ನು ಜಗತ್ತಿಗೆ ಪರಿಚಯಿಸಿ,ಅದರ ಮೇಲೆ ಸಂಶೋಧನೆ ಮಾಡಿ, ಪ್ರಬಂಧ ಮಂಡಿಸಿ, ಡಾಕ್ಟರೇಟ್ ಅನ್ನು ಗಳಿಸಿದವ. ಇವನು ಮಂಡಿಸಿದ ಸುಪ್ತ ಪ್ರಜ್ಞೆ ಎಂಬ ವಿಜ್ಞಾನದ ಮೇಲೆಯೇ ಡಾಕ್ಟರೇಟ್ ಮಾಡಿದವರು ಅದೆಷ್ಟೋ ಮಂದಿ. ಅವನು ಮಂಡಿಸಿದ ಈ ವಿಜ್ಞಾನ ಇಂದು ಮನೋ ವೈದ್ಯ ಶಾಸ್ತ್ರದಲ್ಲಿ ಒಂದು ಪರಿಣಾಮಕಾರಿ ಅಂಶವಾಗಿ ವಿದಿತಗೊಂಡಿದೆ. ತನ್ನ ಸಂಶೋಧನೆಗಳನ್ನೆಲ್ಲ ಧಾರೆ ಎರೆದು "The Power of your subconscious mind" ಎಂಬ ಪುಸ್ತಕವನ್ನು ಪ್ರಕಟಿಸಿದ್ದಾನೆ. ನೂರಾರು ಮನೋ ವೈದ್ಯರು, ಸಾವಿರಾರು ತತ್ವಜ್ಞಾನಿಗಳು, ಅದೆಷ್ಟೋ ಮ್ಯಾನೇಜ್ಮೆಂಟ್ ಗುರುಗಳು ಇಂದು ಈ ವಿಜ್ಞಾನದ ಮೇಲೆ ನೂರಾರು ಪುಸ್ತಕಳನ್ನು, ಲೇಖನಗಳನ್ನು ಬರೆದಿದ್ದಾರೆಂದರೆ ಜೋಸೆಫ್ ಮರ್ಫಿ ಯ ಸಂಶೋಧನೆಯ ಸಾಮರ್ಥ್ಯವನ್ನು ನೀವು ಊಹಿಸಬಹುದಾಗಿದೆ. ಇವನ ಪುಸ್ತಕವನ್ನು ಓದಿ, ಈ ವಿಧಾನವನ್ನು ಆಚರಣೆಗೆ ತಂದರೆ, ಸುಪ್ತ ಪ್ರಜ್ಞೆ ಬಲಗೊಂಡು, ದ್ವಂದ್ವವೆಂಬ ಭೂತ ನಮ್ಮನ್ನು ಕಾಡುವುದಿಲ್ಲವಂತೆ. ಆದರೆ ಈ ಪುಸ್ತಕವನ್ನು ಓದಿದ್ದೆ ತಡ, ಒಂದು ಹೊಸ ದ್ವಂದ್ವ ನನ್ನನ್ನು ಕಾಡಹತ್ತಿದೆ. ಪ್ರಾರ್ಥನೆ ಎಂಬುದು, ಸೋಮಾರಿಗಳು,ಕೈಲಾಗದವರು, ದೇವರ ಮೇಲೆ ಭಾರ ಹಾಕಿ ಬದುಕಲು ನಿರ್ಮಿಸಿಕೊಂಡ ಒಂದು ಮೂಡನಂಬಿಕೆ ಎಂಬ ಸನ್ಮಾನ್ಯ ಬು.ಜೀ ಗಳ ಮಾತನ್ನು ನಂಬಬೇಕೋ ಅಥವಾ ಪ್ರಾರ್ಥನೆ ಎಂಬುದು ಬಯಸಿದ್ದೆಲ್ಲ ನಮಗೆ ದೊರೆಯುವಂತೆ ಮಾಡುವ ತಾಕತ್ತುಳ್ಳ ಅಕ್ಷಯಪಾತ್ರೆ ಎಂಬ ಜೋಸೆಫ್ ಮರ್ಫಿ ಯ ಮಾತನ್ನು ನಂಬಬೇಕೋ.....

ಅರ್ಥ ಆಯ್ತಾ ???

ಅರ್ಥವಾದ್ರೆ ಅರ್ಥವಾಯ್ತು ಅನ್ನಿ
ಅರ್ಥವಾಗ್ದಿದ್ರೆ ಅರ್ಥವಾಗ್ಲಿಲ್ಲ ಅನ್ನಿ.
ಅರ್ಥ ಮಾಡ್ಕೊಂಡು ಅರ್ಥ ಆಗ್ಲಿಲ್ಲ ಅಂದ್ರೆ
ನಿಮಗೆ ಅರ್ಥವಾಗಿರೋದು ನನಗೆ ಹೇಗೆ ಅರ್ಥವಾಗಬೇಕು?
ಅರ್ಥ ಆಯ್ತಾ ???
ಮೇಷ್ಟ್ರು : ನಮ್ಮ ದೇಶ ಹಿಂದುಳಿಯಲು ಕಾರಣವೇನು?
ಬಸ್ಯಾ : ಸಾ ನಮ್ ಜನ
ಕಮ್ಮಿ ದುಡೀತಾರೆ
ಜಾಸ್ತಿ ಹಡೀತಾರೆ ..........

ಜಾಮಾತೋ ದಶಮಗ್ರಹಃ

ಜಾಮಾತೋ ದಶಮಗ್ರಹಃ
*********************
ಅಳಿಯ ಅನ್ನುವವನು ಹತ್ತನೆಯ ಗ್ರಹವಂತೆ. ಆ ಒಂಭತ್ತು ಗ್ರಹಗಳಿಂದ ಬೇಕಾದರೂ ತಪ್ಪಿಸಿಕೊಳ್ಳಬಹುದು ಆದರೆ ಅಳಿಯನೆಂಬ ಈ ಹತ್ತನೆಯ ಗ್ರಹದಿಂದ ತಪ್ಪಿಸಿಕೊಳ್ಳುವುದು ಬರೀ ಮುಶ್ಕಿಲ್ ನಹೀ ನ ಮಮ್ಕಿನ್ ಹೈ ಅಂತೆ. ಹೌದಾ?

ಇದನ್ನು ಮನಸಾರೆ ಒಪ್ಪಿಕೊಂಡವರು ಲೈಕ್ ಅಥವಾ ಕಮೆಂಟ್ ಮಾಡಿ.ಒಪ್ಪದೇ ಇದ್ದವರು ನಿಮ್ಮ ಫೇಸ್ಬುಕ್ ಪ್ರೊಫೈಲ್ ಡಿಲೀಟ್ ಮಾಡಿ.

ಇತಿ ವಾರ್ತಾಃ

ಎ ಕೊ ಇನ್ಸಿಡೆನ್ಸ್

ಇವತ್ತು ನನ್ನ ಸ್ನೇಹಿತರೊಬ್ಬರ ಹುಟ್ಟಿದ ಹಬ್ಬದ ಪಾರ್ಟಿ ಇತ್ತು ಕೌಲಲಂಪುರದಲ್ಲಿ.
ವಿಶೇಷ ಏನು ಅಂತ ಕೇಳಿ : ಅವನು ಮತ್ತು ಅವನ ಹೆಂಡತಿ ಇಬ್ಬರದೂ ಇವತ್ತೇ ಹುಟ್ಟಿದ ಹಬ್ಬ.

ಬಂದ ಅತಿಥಿಗಳೆಲ್ಲ ಹೇಳ್ತಾ ಇದ್ರು
"ಇಬ್ಬರ ಬರ್ತಡೇನು ಸೇಮ್ ಡೇ ವಾಟ್ ಎ ಕೊ ಇನ್ಸಿಡೆನ್ಸ್ ಮಗಾ" ಅಂತಾ

ಅದ್ರಲ್ಲೇನು ಅಂತಾ ವಿಶೇಷ ಕಾಣಿಸ್ತೋ ಅವರಿಗೆ ಕಾಣೆ ನಂದು ನನ್ ಹೆಂಡತಿ ದೂ ಕೂಡ ಸೇಮ್ ಡೇ ನೆ

"ವೆಡ್ಡಿಂಗ್ ಆನಿವರ್ಸರಿ "

ಈಗ ಹೇಳಿ " ವಾಟ್ ಎ ಕೋ ಇನ್ಸಿಡೆನ್ಸ್ ಮಗಾ "

ಲವರ್ಸ್ ಡೇ

ಮೊನ್ನೆ ಲವರ್ಸ್ ಡೇ ದಿನ ನಂಗೆ ಯಾರು ಲವರ್ರೆ ಇಲ್ಲ ಅಂತ ಅಳ್ತಾ ಕೂತಿದ್ದ ನನ್ ದೋಸ್ತಾ ಒಬ್ಬ...

ಅಲ್ಲ ಸ್ವಾಮಿ ನನ್ ಪ್ರಶ್ನೆ ಇಷ್ಟೇ ....

ಲವರ್ಸ್ ಡೇ ದಿನ ಲವರ್ ಇಲ್ಲ ಅಂತ ಅಳೊದಾದ್ರೆ... ಏಡ್ಸ್ ಡೇ ದಿನ ಏಡ್ಸ್ ಇಲ್ಲ ಅಂತ ಅಳೊಕಾಗುತ್ತ ????
*************************
ಹುಡುಗರು ಮಾಲ್ ಗೆ ಹೋಗೋದು ಏನಕ್ಕೆ ?
ಒಳ್ಳೊಳ್ಳೆ " ಮಾಲು" ಗಳನ್ನು ನೋಡೋಕೆ

ಹೌದಾ?
*******************
ನೆಂಟರು ಬಂದಾಗ ನೆನಪಿಟ್ಕೋಬೇಕಾದ ಒಂದು ಸೀಕ್ರೇಟು

ಖರ್ಚು ಕಡಿಮೆ ಇರಬೇಕು
ಆದರೆ ತರಕಾರಿ ಜಾಸ್ತಿ ಇರಬೇಕು
ನನ್ನ ಸ್ನೇಹಿತರೊಬ್ರು ಕಾಲ್ ಮಾಡುದ್ರು... ಸ್ವಲ್ಪ ಕೆಲಸ ಇದೆ ಸಾರ್. ಒಂದು ಅರ್ಧ ಗಂಟೆ ಬಿಟ್ಕೊಂಡು ಕಾಲ್ ಮಾಡ್ತೀನಿ ಅಂದೇ...
"ಅಯ್ಯೋ ಅರ್ಧ ಗಂಟೆ ಅದಮೇಲೆ ನಂಗೆ ಒಂದು ಮೀಟಿಂಗ್ ಇದೆ ನಾನು ಬ್ಯುಜಿ ಇರ್ತೀನಿ .. ಸೋ ಗಂಟೆ (?) ಬಿಟ್ಕೊಂಡ್ ಮಾಡ್ರಿ " ಅಂದು ಬಿಡೋದ ಪುಣ್ಯಾತ್ಮ ????

ಮಹಾಭಾರತದಲ್ಲಿ ಬಿಟ್ಟು ಹೋದ ಒಂದು ಸಣ್ಣ ಕಥೆ

ಮಹಾಭಾರತದಲ್ಲಿ ಬಿಟ್ಟು ಹೋದ ಒಂದು ಸಣ್ಣ ಕಥೆ : ಒಮ್ಮೆ ದೇವಕನ್ಯೆಯರಾದ ಊರ್ವಶಿ ಹಾಗು ಮೇನಕೆ ಜಲಕ್ರೀಡೆಯಾಡುತ್ತಿರಲು ಬೇಟೆಗಾಗಿ ಅಲ್ಲಿಗೆ ಬಂದ ಮನ್ಮಥನು ಅವರನ್ನು ಕಂಡು ಮೋಹಗೊಂಡನು ಹಾಗು ತಾನು ಆ ದೇವ ಕನ್ಯೆಯರನ್ನು ವಿವಾಹವಾಗಲು ನಿಶ್ಚಯಿಸಿ ಮೇನಕೆಯ ಬಳಿ ತನ್ನ ಮನದ ಇಂಗಿತವನ್ನು ತಿಳಿಸಿದನು. ಮನ್ಮಥನನ್ನು ಕಂಡು ವಿರಹ ವೇದನೆಯಿಂದ ಬಳಲುತ್ತಿದ್ದ ಮೇನಕೆಯು ತಾನು ಮನ್ಮಥನನ್ನು ವಿವಾಹವಾಗಲು ಒಪ್ಪಿದಳು. ತಕ್ಷಣವೇ ಅವರು ಗಾಂಧರ್ವ ರೀತಿಯಿಂದ ವಿವಾಹವಾದರು. ಇದನ್ನು ತಿಳಿದ ಇಂದ್ರನು ಮನ್ಮಥನಿಗೆ ಮುಂದೆ ಕಲಿಯುಗದಲ್ಲಿ ಭೂಲೋಕದಲ್ಲಿ ಜನ್ಮ ತಾಳುವಂತೆ ಶಾಪವಿತ್ತನು. ಮನ್ಮಥನು ಭಯದಿಂದ ಹೆದರಿ ಇಂದ್ರನಲ್ಲಿ ಶರಣಾಗಲು ಪ್ರಸನ್ನನಾದ ಇಂದ್ರನು ಮನ್ಮಥನಿಗೆ ವಿಶಾಪವನ್ನಿತ್ತನು. ತಾನು ಕೊಟ್ಟ ಶಾಪವನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ ಆದರೆ ಭೂಲೋಕದಲ್ಲಿ ಜನಿಸಿದಾಗ ಕೂಡ ಮನ್ಮಥ ಸುಂದರ ರೂಪದಲ್ಲೇ ಜನಿಸುವುದಾಗಿಯು ವಿಶಾಪವನ್ನಿತ್ತನು. ಹೀಗೆ ಇಂದ್ರನ ವಿಶಾಪದಿಂದ ಸಂತೋಷಗೊಂಡ ಮನ್ಮಥನು ಕಲಿಯುಗದಲ್ಲಿ 1983 ನೆ ಇಸವಿಯಲ್ಲಿ ಜನ್ಮತಾಳಿದನು. ಈ ಕತೆಯ ಎಳೆಯನ್ನು ಹಿಡಿದು ಹೊರಟ tv ಚಾನಲ್ ಒಬ್ಬರಿಗೆ ಕಲಿಯುಗದ ದಿ ಮೋಸ್ಟ್ ಹ್ಯಾಂಡ್ಸಂ ಯುವಕನ ಫೋಟೋ ಒಂದು ದೊರೆತಿದ್ದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದಾರೆ. ಈ ಸುಂದರ ಯುವಕನನ್ನು ನೋಡಲೆಂದೇ ಸುಂದರ ರೂಪದ ಕನ್ನಿಕೆಯರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮುಗಿಬಿದ್ದು tv ನೋಡಲಾರಂಭಿಸಿ TRP ರೇಟ್ ಯದ್ವಾತದ್ವಾ ಜಾಸ್ತಿಯಾಗಿ ಮಾಧ್ಯಮ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ವಾಗಲಾರಂಭಿಸಿದೆ. ಮಾಧ್ಯಮಗಳಿಗೆ ದೊರೆತ ಆ ಸುಂದರ ಯುವಕನ ಫೋಟೋ ಸ್ಯಾಂಪಲ್ ಒಂದು ಇಲ್ಲಿದೆ: ಹುಡುಗ ಇಷ್ಟ ಆದ್ರೆ ಲೈಕಿಸಿ ತುಂಬಾ ಇಷ್ಟ ಆದ್ರೆ ಕಾಮೆಂಟಿಸಿ.

ಶಾನುಭೋಗರ ಮಗಳು

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ರತ್ನದಂತಹ ಹುಡುಗಿ ಊರಿಗೆಲ್ಲ
ಬಲುಜಾಣೆ ಗಂಭೀರೆ ಹೆಸರು ಸೀತಾದೇವಿ ಹನ್ನೆರಡು ತುಂಬಿಹುದು ಮದುವೆಯಿಲ್ಲ || ಪ ||

ತಾಯಿಯಿಲ್ಲದ ಹೆಣ್ಣು ಮಿಂಚಬೀರುವ ಕಣ್ಣು ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು ಇಂಥ ಬಾಳಿಗೆ ಒಲವೆ ನಿನ್ನ ಕನಸು |
ಹತ್ತಿರದ ಕೆರೆಯಿಂದ ತೊಳೆದಬಿ೦ದಿಗೆಯೊಳಗೆ ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ ಅವಳ ಗಂಡನ ಹೆಸರ ಕೇಳಬೇಕು || ೧ ||

ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು ಒಲ್ಲೆನೆಂದಳು ಸೀತೆ ಕೋಣೆಯೊಳಗೆ |
ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ ತೆರಳಿದನು ಜೋಯಿಸನು ತಣ್ಣಗಾಗಿ || ೨ ||

ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರಕೇರಿಯಲಿ ಬಂದಿದ್ದ ಹೊಸ ಗಂಡು ತನ್ನ ಕೂದಲಿಗಿಂತ ಕಪ್ಪು ಎಂದು |
ನಮ್ಮೂರಿನಕ್ಕರೆಯ ಸಕ್ಕರೆಯ ಬೊ೦ಬೆಯನು ನೋಡಬೇಕೆ ಇಂಥ ಕಪ್ಪುಗಂಡು
ಶಾನುಭೋಗರ ಮನೆಯ ತೋರಣವೆ ಹೇಳುವುದು ಬಂದ ದಾರಿಗೆ ಸುಂಕವಿಲ್ಲವೆಂದು || ೩ ||

ಶಾನುಭೋಗರ ಮಗಳು ರತ್ನದಂತಹ ಹುಡುಗಿ ಗಂಡುಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೆನಂತೆ ನಷ್ಟವಿಲ್ಲ ||

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ಸಿ ಅಶ್ವಥ್

ಸ್ಟೀಫಾನ್ ಹಾಕಿಂಗ್........ ನಿನಗೆ ಸಾವಿರ ಸಾವಿರ ಪ್ರಣಾಮ ........

ಸುಮಾರು ವರ್ಷ ಸಿನಿಮಾ ಮಲ್ತಿಪ್ಲೆಕ್ಷ್ ನಲ್ಲಿ ಕೆಲಸ ಮಾಡಿದ್ದರಿಂದಲೋ ಏನೋ ಕುಳಿತಲ್ಲೇ ಕುಳಿತು ಸಿನಿಮಾ ನೋಡುವುದೆಂದರೆ (ಅದರಲ್ಲೂ ದುಡ್ಡು ಕೊಟ್ಟು) ನನಗೆ ಏನೋ ಒಂಥರಾ ಹಿಂಸೆ. ಹಾಗಿದ್ದು ವರ್ಷಕ್ಕೆ ಎರಡೋ ಮೂರೋ ಸಿನಿಮ ನೋಡುವುದನ್ನಂತು ತಪ್ಪಿಸಿಲ್ಲ...
ಮೊನ್ನೆ ಶನಿವಾರ ಕೌಲಲಂಪುರದ GSC ಮುಲ್ರಿಪ್ಲೆಕ್ಷ್ ನಲ್ಲಿ ನಾನು ನೋಡಿದ ಸಿನಿಮಾ ಅಂತು ಅದ್ಭುತ... ಸಾವನ್ನೇ ಗೆದ್ದು ಸಾಧನೆ ಮಾಡಿದ ಒಬ್ಬ ಅಧುನಿಕ ಮಾರ್ಕಂಡೆಯನ ಕಥೆ.
ಭೌತ ವಿಜ್ಞಾನದಲ್ಲಿ ಬ್ಲಾಕ್ ಹೋಲ್ಸ ಹಾಗು ಕ್ವಾಂಟಮ್ ಮೆಕ್ಯಾನಿಕ್ಸ್ ಗಳಿಗೆ ಒಂದು ನಿರ್ದಿಸ್ತ ಅರ್ಥವನ್ನು ತಂದಿತ್ತ ಮಹಾನುಭಾವ ಸ್ಟೀಫಾನ್ ಹಾಕಿಂಗ್.
1942 ರ ಜನವರಿ 8 ರಂದು ಇಂಗ್ಲೆಂಡಿನಲ್ಲಿ ಹುಟ್ಟಿದ ಸ್ಟೀಫಾನ್ ಹಾಕಿಂಗ್ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆಲ್ಲ ಇಂಗ್ಲೆಂಡಿನ ಬಿರಾನ್ ಹೌಸ್ ಸ್ಕೂಲಿನಲ್ಲಿ. ತನ್ನ 13 ನೆ ವಯಸ್ಸಿನಲ್ಲಿ ameotrophic lateral sclerosis ಎಂಬ ವಿಚಿತ್ರ ರೋಗಕ್ಕೆ ತುತ್ತಾದ ಸ್ಟೀಫಾನ್ ತನ್ನ 17 ನೆ ವಯಸ್ಸಿಗೆಲ್ಲ ಪ್ರತಿಷ್ಟಿತ ಆಕ್ಸ್ಫರ್ಡ್ ಯೂನಿವರ್ಸಿಟಿ ಗೆ ಸೇರಿದ. ಕೆಲವೇ ವರ್ಷಗಳಲ್ಲೇ ಕೈ ಕಾಲು ಬೆನ್ನು ಮೂಳೆ ಗಳ ಸ್ವಾಧೀನ ಕಳೆದುಕೊಂಡ ಸ್ಟೀಫಾನ್ 21 ನೆ ವಯಸ್ಸಿಗೆಲ್ಲ ತನ್ನ ಧ್ವನಿಯನ್ನು ಬಹುದೆಕ ಕಳೆದುಕೊಂಡಿದ್ದ. ಆಗ ಅಧುನಿಕ ವೈದ್ಯ ವಿಜ್ಞಾನ ಇವನಿಗೆ ವಿಧಿಸಿದ ಆಯುಸ್ಸು ಕೇವಲ 2 ವರ್ಷ... ಇದಾವುದಕ್ಕೂ ಧೃತಿಗೆಡದ ಸ್ಟೀಫಾನ್ ತನ್ನ ಬಹುದೇಕ ಸಮಯವನ್ನೆಲ್ಲ ತನ್ನ ಸಂಶೋಧನೆಗಳಲ್ಲೇ ಕಳೆದ. 1960 ರಲ್ಲಿ ಡಾಕ್ಟರೇಟ್ ಅನ್ನು ಮುಡಿಗೇರಿಸಿಕೊಂಡ ಸ್ಟೀಫಾನ್ ತನ್ನ ಸಂಶೋಧನೆಗಲ್ಲಿ ಇನ್ನಷ್ಟು ಮುಳುಗಿದ. ರೋಜರ್ ಪೆನ್ರೋಸೆ ಎಂಬ ಗಣಿತಗ್ನನಿಂದ ಪ್ರಭಾವಿತನಾಗಿ ತನ್ನ ಸಂಶೋಧನೆಯ ದಿಗಂತವನ್ನು ಮತ್ತಷ್ಟು ವಿಸ್ತರಿಸಿದ..ಅವನ ಸಂಶೋಧನೆಗಲೊಡನೆ ಅವನ ಕಾಯಿಲೆಯೂ ಕೂಡ....ಕಡೆಗೂ 2005 ರಲ್ಲಿ ತನ್ನ ಸಂಶೋಧನೆಗಳನೆಲ್ಲ ಸೇರಿಸಿ A Brief History of Time ಎಂಬ ಪುಸ್ತಕವನ್ನು ಮುದ್ರಿಸಿದ. ಇಲ್ಲಿಯವರೆಗೂ ಮಾರಟವಾದ ಈ ಪುಸ್ತಕದ ಸಂಖ್ಯೆ ಒಂದು ಕೋಟಿಗೂ ಹೆಚ್ಚು...ವೈದ್ಯ ಮಹಾಶಯ ಹೇಳಿದ ಆ ಎರಡು ವರ್ಷದ ಅಯಸ್ಶು ಎಂದೋ ಮುಗಿದು ಹೋಗಿದೆ ...ವೈದ್ಯಲೋಕಕ್ಕೆ ಸವಾಲು ಹಾಕಿ ಆಯುಶವನ್ನೇ ಗೆದ್ದು ಮೂಲ ವಿಜ್ಞಾನ ಸಂಶೋಧನಾ ಕ್ಷೇತ್ರದ ತುತ್ತ ತುದಿಗೆರಿದ ಸ್ಟೀಫಾನ್ ಮೊನ್ನೆ ತಾನೇ (ಜನವರಿ 8 ರಂದು) ತನ್ನ 73 ನೆ ಹುಟ್ಟಿದ ದಿನವನ್ನು ಆಚರಿಸಿಕೊಂಡರು... ಅದೂ ತಾನಿನ್ನೂ ಕೇಂಬ್ರಿಜ್ ಯೂನಿವರ್ಸಿಟಿ ಯ ಗಣಿತ ಹಾಗು ವಿಜ್ಞಾನದ ಮುಖ್ಯಸ್ತನಾಗಿದ್ದುಕೊಂಡೆ......

ಐದು ಹಾಡು ಎರಡು ಡೈಲಾಗ್ ಮೂರು ಡ್ಯಾನ್ಸ್ ಒಂದು ಇಂಟರ್ವೆಲ್ ಅರ್ಥವೇ ಆಗದ ಡಬಲ್ ಮೀನಿಂಗ್ ಕಾಮಿಡಿ ....... ಸಿನಿಮಾ ನೋಡುವುದಕ್ಕಿಂತ ಹತ್ತು ಸಾವಿರ ಪಾಲು ಮೇಲು.....ದಯವಿಟ್ಟು ಮಿಸ್ ಮಾಡ್ಕೋಬೇಡಿ .......ಹಾಗೆ ಸ್ಟೀಫಾನ್ ಹಾಕಿಂಗ್ ಗೆ ಗಟ್ಟಿ ಆಯಿಸ್ಸು ಕೊಡಪ್ಪಾ ದೇವ್ರೇ ಎಂದು ಬೆದಿಕೊಳ್ಳೊದನ್ನು ಮರೀಬೇಡಿ......

ಸ್ಟೀಫಾನ್ ಹಾಕಿಂಗ್........ ನಿನಗೆ ಸಾವಿರ ಸಾವಿರ ಪ್ರಣಾಮ ........

ಸ್ಟೀಫಾನ್ ಹಾಕಿಂಗ್ website ಗಾಗಿ ಇಲ್ಲಿ ಕ್ಲಿಕ್ ಮಾಡಿ....
http://www.hawking.org.uk/index.html

Theory of Everything ಸಿನಿಮಾ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ....
https://www.youtube.com/watch?v=Salz7uGp72c

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...