Saturday, January 12, 2019

ಶಕ್ತಿ ಮತ್ತು ಬೆಳವಣಿಗೆಯೇ ಜೀವನದ ಚಿಹ್ನೆ, ದೌರ್ಬಲ್ಯವೇ ಮರಣದ ಚಿಹ್ನೆ - ಸ್ವಾಮಿ ವಿವೇಕಾನಂದ


ಸ್ವಾಮಿ ವಿವೇಕಾನಂದ - ಅದೊಂದು ವ್ಯಕ್ತಿಯಲ್ಲ ; ವ್ಯಕ್ತಿತ್ವ.


"ಆತ್ಮನಂಬಿಕೆಯುಳ್ಳ ನೂರು ಯುವಕರನ್ನು ನನಗೆ ಕೊಡಿ. ಜಗತ್ತನ್ನೆÃ ಜಯಿಸುತ್ತೆÃನೆ" ಎಂದು ಹೇಳಿದ ತತ್ವಜ್ಙಾನಿ, ದಾರ್ಶನಿಕ, ಯೋಗಿ, ವಾಗ್ಮಿ,, ಸನಾತನದ ಹರಿಕಾರ, ದೇಶಭಕ್ತ ಸಂತ ಸ್ವಾಮಿ ಶ್ರಿÃ ವಿವೇಕಾನಂದರ ನೂರ ಐವತ್ತಾರನೆ ಜನ್ಮದಿನವಿಂದು. ತನ್ನಿಮಿತ್ತ ಆ ಯೋಗಿಗೊಂದು ನುಡಿನಮನ.


"My Dear Brothers And Sisters Of America" ಎಂಬ ಆ ಪದಗಳು ಆ ಸ್ವಾಮೀಜಿಯ ಬಾಯಿಯಿಂದ ಹೊರಬಿದ್ದಿತ್ತು. ಅಷ್ಟೆÃ. ಸೂಜಿಮೊನೆಯಂತೆ ನಿಶ್ಯಬ್ದವಾಗಿದ್ದ ಆ ಸಭಾಭವನವೆಲ್ಲಾ ನೂರಾರು ಕೈಗಳಿಂದ ಹೊರಟ ಕರತಾಡನದ ಸದ್ದಿನಿಂದ ತುಂಬಿಹೋಗಿತ್ತು. ಆ ಕರತಾಡನಗಳ ಸದ್ದು ಆಡಿಟೋರಿಯಂನ  ಗೋಡೆಗÀಳಿಂದ ಪ್ರತಿಧ್ವನಿಸಿ ಇಮ್ಮಡಿಗೊಳ್ಳುತ್ತಿತ್ತು. ಆ ಸ್ವಾಮೀಜಿಯ ಮುಖವನ್ನು ಒಮ್ಮೆಯಾದರೂ ನೋಡಬೇಕೆಂಬ ಅದಮ್ಯ ಬಯಕೆಯಿಂದ ಕುಳಿತಿದ್ದ ಕುರ್ಚಿಗಳಿಂದ ಎದ್ದು ನಿಲ್ಲುತ್ತಿದ್ದ ನೂರಾರು ಸಭಿಕರು, ಹಿಂದಿನ ಸಾಲಲ್ಲಿ ಕುಳಿತಿದ್ದ ಕಾರಣ ಸ್ವಾಮೀಜಿಯ ಮುಖ ದರ್ಶನ ಸಾಧ್ಯವಾಗದೇ, ಕಡೇ ಪಕ್ಷ ತಮ್ಮ ತಲೆಯ ಮೇಲಿನ ಟೋಪಿಗಳಿಗಾದರೂ ಅವರ ದರ್ಶನವಾದೀತೇನೋ ಎಂದು ಟೋಪಿಯನ್ನು ಮೇಲೆಸೆಯತೊಡಗಿದರು. ಕಾರ್ಯಕ್ರಮ ಆಯೋಜಕರಂತೂ ಸಭಿಕರನ್ನು ಸಮಾಧಾನಗೊಳಿಸಲು ಮೈಕಿನಲ್ಲಿ ಪದೇ ಪದೇ ಬಿನ್ನವಿಸಿಕೊಳ್ಳುತ್ತಿದ್ದರು. ಆದರೇನಂತೆ, ಅವರ ವಿನಂತಿಯ ಮನವಿಯನ್ನು ಕೇಳಿಸಿಕೊಳ್ಳುವ ವ್ಯವಧಾನ ಅಲ್ಲಾರಿಗೂ ಇದ್ದಂತಿರಲಿಲ್ಲ. ಅಥವಾ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರ ಕಿವಿಗಳು ಇರಲಿಲ್ಲ. ಅಲ್ಲಿ ನೆರೆದಿದ್ದ ಬಹುದೇಕ ಅಷ್ಟೂ ಜನರು ಸ್ವಾಮೀಜಿಯ ಮಾತಿನ ಸಮ್ಮೊÃಹನಕ್ಕೊಳÀಗಾಗಿದ್ದರು. ಒಂದಲ್ಲ, ಎರಡಲ್ಲ ಬರೋಬ್ಬರಿ ನೂರ ಇಪ್ಪತ್ತು ನಿಮಿಷಗಳ ಕಾಲ ಆ ಇಡೀ ಸಭಾಂಗಣ ಸಭಿಕರ ಕರತಾಡನಗಳ, ಅದರಿಂದ ಹೊರಡುತ್ತಿದ್ದ ಪ್ರತಿಧ್ವನಿಗಳ ನಿನಾದದಿಂದ ತುಂಬಿಹೋಗಿ ಸ್ಥಬ್ಧವಾಗಿತ್ತು.. ಇನ್ನೊಂದೆರಡು ನಿಮಿಷಗಳು ಅದೇ ಪರಿಸ್ಥಿತಿ ಮುಂದುವರೆದಿದ್ದರೆ, ಬಹುಶಃ ಇಡೀ ಆಡಿಟೋರಿಯಂ ನ ತಾರಸಿಯೇ ಬಿರುಕು ಬಿಡುತ್ತಿತ್ತೆÃನೋ !!!

ಹೌದು. ಭಾರತೀಯ ತತ್ವಶಾಸ್ತçವೆಂಬ ಹಣ್ಣನ್ನು ಬಿಡಿಸಿ, ಅದರ ತಿರುಳಿನ ಸ್ವಾದವನ್ನು ಜಗತ್ತಿಗೆ ಉಣಬಡಿಸಹೊರಟ ಕೇವಲ ಮುವತ್ತರ ಪ್ರಾಯದ ತರುಣನೊಬ್ಬ ಅಮೇರಿಕಾದ ಚಿಕಾಗೊವಿನ  ಸರ್ವಧರ್ಮ ಸಮ್ಮೆÃಳನದಲ್ಲಿ ಸನಾತನ ಧರ್ಮದ ಪ್ರತಿನಿಧಿಯಾಗಿ 1893 ರ ಸೆಪ್ಟಂಬರ್ ಹನ್ನೊಂದರಂದು ವೇದಿಕೆಯ ಮೇಲೆ ಭಾಷಣ ಆರಂಭಿಸಿದ ಮೊದಲೆರೆಡು ನಿಮಿಷಗಳ ಸ್ಥಿತಿ ಇದು. ದೇಶ ವಿದೇಶಗಳಿಂದ ಬಂದಿದ್ದ ಹತ್ತಾರು ಧರ್ಮಗಳ ವಕ್ತಾರರೇ ಆಸೀನರಾಗಿದ್ದ ವೇದಿಕೆ ಅದಾಗಿತ್ತು. ಈ ಸ್ವಾಮೀಜಿಗಳ ವಯಸ್ಸಾದರೋ ಕೇವಲ ಮುವತ್ತು ವರ್ಷ. ಇವರ ಎರಡರಷ್ಟು ವಯಸ್ಸುಳ್ಳ, ಅನುಭವವುಳ್ಳ ಇತರ ಧರ್ಮ ಪ್ರವರ್ತಕರು ಅಲ್ಲಿದ್ದರು. ಅವರಾರಿಗೂ  ಸಿಗದ ಮಾನ್ಯತೆ, ಗೌರವಗಳು, ಕೇವಲ ತಮ್ಮ ಸರಿಸುಮಾರು ಹತ್ತು ನಿಮಿಷಗಳ ಭಾಷಣದ ಫಲವಾಗಿ ಸ್ವಾಮೀಜಿಯ ಪಾಲಾಗಿತ್ತು.. "ಏಳು; ಎದ್ದೆÃಳು; ಗುರಿ ಮುಟ್ಟುವವರೆಗೂ ನಿಲ್ಲದಿರು", "ಶಕ್ತಿಯೇ ಜೀವನ; ನಿಶ್ಯಕ್ತಿಯೇ ಮರಣ" ಎಂದು ಜಗತ್ತಿಗೆ ಸಾರಿದ, ಸ್ವತಃ ಪಾಲಿಸಿದ ಅ ಗಟ್ಟಿ ವ್ಯಕ್ತಿತ್ವವೇ - ಸ್ವಾಮಿ ಶ್ರಿÃ ವಿವೇಕಾನಂದ.



ಈ ದೇಶಭಕ್ತ ಸಂತ ಹುಟ್ಟಿದ್ದು 1863 ರ ಜನವರಿ 12 ರಂದು ಕೊಲ್ಕತ್ತಾ ನಗರದಲ್ಲಿ. ಬಾಲ್ಯದ ಹೆಸರು ನರೇಂದ್ರದತ್ತ. ಸಂಸ್ಕಾರವಂತ ಕುಟುಂಬದಲ್ಲಿ ಜನಿಸಿದ್ದರಿಂದಲೇ ಏನೋ, ಬಾಲ್ಯದಿಂದಲೂ, ಅಗಾಧ ದೈವಭಕ್ತಿ, ಅಷ್ಟೆÃ ಛಲ ಹಾಗು ಧೈರ್ಯ. ಆಧ್ಯಾತ್ಮದೆಡೆಗಿನ ಉನ್ನತ ಒಲವು, ನರೇಂದ್ರನ್ನು ಬ್ರಹ್ಮಸಮಾಜದೆಡೆಗೆ ತಿರುಗುಸಿತ್ತು. ಬ್ರಹ್ಮಸಮಾಜದ ನಿರಾಕಾರ ಕಲ್ಪನೆ ಈತನಿಗೆ ತಕ್ಕಮಟ್ಟಿನ ಸಮಾಧಾನ ತಂದಿತ್ತಾದರೂ, ದೈವದ ಅಸ್ಥಿತ್ವದ ಬಗ್ಗೆ ಈತನ ಹೃದಯಾಂತರಾಳದಲ್ಲಿ ಹುದುಗಿದ್ದ ನೂರಾರು ಪ್ರಶ್ನೆಗಳಿಗೆ ಉತ್ತರಿಸಲು ಸೋತಿತ್ತು. ಅಷ್ಟೆÃ ಅಲ್ಲ ಗುರುವೊಬ್ಬರ ಹುಟುಕಾಟಕ್ಕೆ ಪ್ರೆÃರೇಪಿಸಿತ್ತು. ಆ ಪ್ರೆÃರೇಪಣೆಯೇ ಗುರುಗಳೊಬ್ಬರ ಬಳಿಗೆ ಕರೆತಂದಿತ್ತು. ಆತ ಕೇವಲ ಗುರುವಷ್ಟೆÃ ಅಲ್ಲ, ಒಬ್ಬ ದಾರ್ಶನಿಕನಾಗಿದ್ದ; ಆತನೊಬ್ಬ ಯೋಗಿಯಾಗಿದ್ದ; ಆತನೊಬ್ಬ ತತ್ವಜ್ಙಾನಿಯಾಗಿದ್ದ. ಹೀಗೆ ಬಾಲಕನಾಗಿದ್ದ ನರೇಂದ್ರದತ್ತನನ್ನು "ಸ್ವಾಮಿ ವಿವೇಕಾನಂದರೆಂದು ಜಗತ್ತಿಗೆ ಪರಿಚಯಿಸಿದವರೇ "ಶ್ರಿÃ ರಾಮಕೃಷ್ಣ ಪರಮಹಂಸರು".
ಅಂದಿನಿಂದ ಶುರುವಾದ ಸ್ವಾಮೀಜಿಯ ಆಧ್ಯಾತ್ಮದ ಹಸಿವು, ವೇದ-ಉಪನಿಶತ್, ಬೈಬಲ್, ಒಳಗೊಂಡಂತೆ, ಹಿಂದೂ, ಇಸ್ಲಾಂ, ಬೌದ್ಧ, ಜೈನ, ಕ್ರೆöÊಸ್ತ, ಜೊರಾಷ್ಠಿçಯನ್ ಮೊದಲಾದ ತತ್ವಜ್ಙಾನದ ಸವಿಯನ್ನು ಸವೆದರೂ ತಣಿಯಲಿಲ್ಲ. ಈ ನಿರಂತರ ಜ್ಙಾನದಾಹದಿಂದ ಕೇವಲ ತಾನೊಬ್ಬ ಸಾಧುವೆನಿಸದೇ, ಜ್ಙಾನಿಯಾಗಲು ಪ್ರೆÃರೇಪಿಸಿತ್ತು. ಬಾಲ್ಯದಿಂದಲೂ ಮೈಗೂಡಿದ್ದ, ಧೈರ್ಯ, ಛಲಗಳು, ಈತನ ಆಧ್ಯಾತ್ಮ ಜ್ಙಾನವೆಂಬ ಸಸಿಗೆ, ನೀರು, ಗೊಬ್ಬರಗಳಾದವು. ಈ ಧೈರ್ಯವೇ ಕಡೆಗೆ ಚಿಕಾಗೋವಿನ ಸರ್ವಧರ್ಮ ಸಮ್ಮೆÃಳನದ ವೇದಿಕೆಯ ಮೈಕಿನ ಮುಂದೆ ತಂದು ನಿಲ್ಲಿಸಿತ್ತು.. ಇಡೀ ವಿಶ್ವವೇ ಭಾರತದ ಸನಾತನ ಸಂಸ್ಕೃತಿಗೆ ಮಾರುಹೋಗುವಂತೆ ಮಾಡಿತ್ತು. ಸನಾತನ ಸಾರದ ಘಮಲು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿತ್ತು. ಸನಾತನದ ಬೇರು, ರೆಂಬೆ ಕೊಂಬೆಗಳು ಜಗದೆಡೆಗೆ ಹರಡುವಂತೆ ಮಾಡಿತ್ತು.

ಭಾರತೀಯ ತತ್ವಶಾಸ್ತç ಸಾರದ ಸವಿಯನ್ನು ಜಗದಗಲ ಉಣಬಡಿಸಿದ ಓ ಯೋಗಿಯೇ.... 

ನಿನಗಿದೋ ಕೋಟಿ ನಮನ







  • ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಿದ ಬಳಿಕ ನನಗೆ ನನ್ನ ದೇಶದ ಬಗೆಗೆ ಇರುವ ಪ್ರೀತಿ ಸಾವಿರ ಪಟ್ಟು ಹೆಚ್ಚಾಯಿತು. ನಾನು ಯುವಜನತೆಯಲ್ಲಿ ಒಂದನ್ನು ಕೋರಿಕೊಳ್ಳುತ್ತೇನೆ- ಸ್ವಾಮಿ ವಿವೇಕಾನಂದರು ಬದುಕಿ- ಬಾಳಿದ ಈ ನೆಲದಲ್ಲಿ ನಿಮ್ಮ ಚೈತನ್ಯವನ್ನು ಉಪಯೋಗಿಸದೆ ವಿಫಲಜೀವರಾಗಿ ಹೋಗದಿರಿ.- ಮಹಾತ್ಮ ಗಾಂಧಿ
  • ಸ್ವಾಮಿ ವಿವೇಕಾನಂದರ ತಪಃ ಪೂರ್ಣವಾದ ಶಕ್ತಿವಾಣಿ ಒಂದು ಅಮೃತದ ಮಡು ! ಇದರಲ್ಲಿ ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ. - ರಾಷ್ಟ್ರಕವಿ ಕುವೆಂಪು
  • ತಮ್ಮ ಕಾಲದ ವಿದ್ಯಾರ್ಥಿಗಳ ಮೇಲೆ ಸ್ವಾಮಿ ವಿವೇಕಾನಂದರು ತಮ್ಮ ಭಾಷಣ, ಬರಹಗಳ ಮೂಲಕ ಮಾಡಿದ ಪ್ರಭಾವವು, ಇತರ ಯಾವುದೇ ನಾಯಕರ ಪ್ರಭಾವಕ್ಕಿಂತ ಮಿಗಿಲಾದುದಾಗಿತ್ತು. ಸ್ವಾಮಿ ಅವರೆಲ್ಲರ ಆಶೆ ಆಶೋತ್ತರಗಳನ್ನು ಪ್ರತಿನಿಧಿಸಿದ್ದರು.- ಸುಭಾಶ್ಚಂದ್ರ ಬೋಸ್‌
  • ವಿವೇಕಾನಂದರ ಪ್ರತಿ ಮಾತುಗಳೂ ರೋಮಾಂಚನಕಾರಿ! ಪ್ರತೀ ವಾಕ್ಯವನ್ನು ಓದುವಾಗ ನನ್ನ ಮೈ ನವಿರೇಳುತ್ತದೆ! ಮುಂದುವರೆದು ಹೇಳುತ್ತಾನೆ. ಅವರ ಸಾಹಿತ್ಯ ಓದುವಾಗಲೇ ನನಗೆ ಇಂತಾ ಅನುಭವವಾಗುತ್ತದಲ್ಲಾ! ಅವರ ತುಟಿಗಳಿಂದ ನೇರವಾಗಿ ಮಾತನ್ನು ಕೇಳಿದ ಆ ಭಾಗ್ಯಶಾಲಿಗಳಿಗೆ ಇನ್ನೆಂತಾ ಅನುಭವವಾಗಿರಬೇಕು-ಫ್ರೆಂಚ್ ಸಾಹಿತಿ ರೊಮ್ಯಾನ್ ರೊಲ್ಯಾಂಡ್


ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...