ನಮ್ ಬಸ್ಯಾ ಇದಾನಲ್ವ ಅವ್ನು ಮೊನ್ನೆ ಅವ್ರ ಕಾಲೇಜಲ್ಲಿ ಇಂಗ್ಲೀಷ್ ಲೆಕ್ಚರರ್ನ ಕೇಳ್ದ
ಸಾರ್.. ಇಂಗ್ಲೀಷಲ್ಲಿ "ನಟುರೆ" ಅಂತ ಒಂದ್ ಪದ ಇದೆ ಹಂಗಂದ್ರೆ ಕನ್ನಡದಲ್ಲಿ ಅರ್ಥ ಏನ್
ಸಾರ್?
ಏನು "ನಟುರೆ" ನ? ಹುಚ್ಚುಚ್ಚಾಗಿ ಏನೇನೋ ಕೇಳ್ಬೇಡ. ನಾನು ಇಂಗ್ಲೀಷ್ನ ಮುವತ್ತು ವರ್ಷದಿಂದ ಟೀಚ್ ಮಾಡ್ತ ಇದೀನಿ.. ನಟುರೆ ಅನ್ನೊ ಪದ ಇಲ್ಲ.
ಸಾರ್ ಇದೆ ಸಾರ್. ನಿಮ್ಗೆ ಗೊತ್ತಿಲ್ಲ ಅಂದ್ರೆ ಗೊತ್ತಿಲ್ಲ ಅಂತ ಡೈರೆಕ್ಟಾಗಿ ಹೇಳಿ.
ನನ್ ಬೈಬೇಡಿ. ನಾಳೆ ಬೆಳಿಗ್ಗೆ ತನ್ಕ ಟೈಂ ಕೊಡ್ತೀನಿ. "ನಟುರೆ" ಮೀನಿಂಗ್ ಹೇಳಿ ಇಲ್ಲ
ಸೋಲೊಪ್ಕೊಳಿ ಅಂದ
ಹುಡುಗರೆದರು ಕ್ಲಾಸ್ ರೂಂ ಅಲ್ಲೆ ಈಥರ ಅವಮಾನವಾಯ್ತಲ್ಲಪ್ಪ
ದೇವ್ರೆ... ಈ ಹುಡ್ಗ ನೋಡುದ್ರೆ ನಟುರೆ ಅನ್ನೋ ಪದ ಇದೆ ಅಂತ ಇಷ್ಟು ಕಾನ್ಫಿಡೆನ್ಸಾಗಿ
ಹೇಳ್ತ ಇದಾನೆ. ಒಂದ್ ವೇಳೆ ಆಥರ ಪದ ಇರ್ಬಹುದಾ? ನೋಡೋಣ ಅಂತ ಹೇಳಿ ಡೈರೆಕ್ಟಾಗಿ
ಲೈಬ್ರರಿಗೆ ಓಟ ಕಿತ್ರು. ಲೈಬ್ರರಿ, ಗೂಗಲ್ , ಡಿಕ್ಷನರಿ ಎಲ್ ನೋಡುದ್ರೆ ಆ ಪದಾನೆ
ಕಾಣ್ಸಿಲ್ಲ. ಇನ್ನೇನ್ ಮಾಡೋದು ಬೆಳಿಗ್ಗೆ ಕ್ಲಾಸ್ ರೂಂಗೆ ಬಂದವರೇ
ಪ್ರಿಯ
ವಿದ್ಯಾರ್ಥಿಗಳೆ ನಿನ್ನೆ ಎಲ್ಲ ಹುಡುಕಿದರೂ ನನಗೆ ನಟುರೆ ಪದದ ಅರ್ಥ ಗೊತ್ತಾಗ್ಲಿಲ್ಲ. ಐ
ಯಾಂ ಸಾರಿ. ನಾನು ಸೋಲೊಪ್ಕೊತಾ ಇದೀನಿ ಅಂದವರೇ ಬಸ್ಯಾನ ಕಡೆ ತಿರಿಗಿ ನಟುರೆ ಪದಾನ
ಒಂದ್ ಸಲ ಬೋರ್ಡ್ ಮೇಲೆ ಬರಿ ಬಾ ಕಂದ ಅಂದ್ರು. ನಮ್ ಬಸ್ಯ ಹೋಗಿ ಬೋರ್ಡ್ ಮೇಲೆ ಬರ್ದ
ನ - na
ಟು - tu
ರೆ - re
ನಟುರೆ - nature
ಆ ಮೇಷ್ಟುಗೆ ಅದೆಲ್ಲಿಂದ ಸಿಟ್ ಬಂತೋ. ಅಯ್ಯೋ ಪಾಪಿ. ನೇಚರ್ ನ ನಟುರೆ ಅಂದ್ಬಿಟ್ಟು
ಯಾಮಾರುಸ್ದಲ್ಲೋ.. ನಿನ್ನ ಈಗ್ಲೆ ಕಾಲೇಜಿಂದ ಡಿಸ್ಮಿಸ್ ಮಾಡ್ತೀನಿ.. ಗೆಟ್ ಔಟ್ ಆಫ್
ದಿಸ್ ಕಾಲೇಜ್ ಅಂತ ಹೊರಗಾಕುದ್ರು..
ನಮ್ ಬಸ್ಯಾ ಅಳ್ತಾ ಹೇಳ್ದ. ಅಯ್ಯೋ ಸಾರ್
ದಯ್ವಿಟ್ಟು ಹಾಗ್ ಮಾಡ್ಬೇಡಿ. ನನ್ನ ಡಿಸ್ಮಿಸ್ ಮಾಡ್ಬೇಡಿ ಸಾರ್.. ನೀವ್ ಹಾಗ್
ಮಾಡುದ್ರೆ ನನ್ ಫುಟುರೆ ಹಾಳಾಗೋಗುತ್ತೆ
No comments:
Post a Comment