ಸುಮಾರು ವರ್ಷ ಸಿನಿಮಾ ಮಲ್ತಿಪ್ಲೆಕ್ಷ್ ನಲ್ಲಿ ಕೆಲಸ ಮಾಡಿದ್ದರಿಂದಲೋ ಏನೋ ಕುಳಿತಲ್ಲೇ
ಕುಳಿತು ಸಿನಿಮಾ ನೋಡುವುದೆಂದರೆ (ಅದರಲ್ಲೂ ದುಡ್ಡು ಕೊಟ್ಟು) ನನಗೆ ಏನೋ ಒಂಥರಾ ಹಿಂಸೆ.
ಹಾಗಿದ್ದು ವರ್ಷಕ್ಕೆ ಎರಡೋ ಮೂರೋ ಸಿನಿಮ ನೋಡುವುದನ್ನಂತು ತಪ್ಪಿಸಿಲ್ಲ...
ಮೊನ್ನೆ ಶನಿವಾರ ಕೌಲಲಂಪುರದ GSC ಮುಲ್ರಿಪ್ಲೆಕ್ಷ್ ನಲ್ಲಿ ನಾನು ನೋಡಿದ ಸಿನಿಮಾ ಅಂತು
ಅದ್ಭುತ... ಸಾವನ್ನೇ ಗೆದ್ದು ಸಾಧನೆ ಮಾಡಿದ ಒಬ್ಬ ಅಧುನಿಕ ಮಾರ್ಕಂಡೆಯನ ಕಥೆ.
ಭೌತ ವಿಜ್ಞಾನದಲ್ಲಿ ಬ್ಲಾಕ್ ಹೋಲ್ಸ ಹಾಗು ಕ್ವಾಂಟಮ್ ಮೆಕ್ಯಾನಿಕ್ಸ್ ಗಳಿಗೆ ಒಂದು ನಿರ್ದಿಸ್ತ ಅರ್ಥವನ್ನು ತಂದಿತ್ತ ಮಹಾನುಭಾವ ಸ್ಟೀಫಾನ್ ಹಾಕಿಂಗ್.
1942 ರ ಜನವರಿ 8 ರಂದು ಇಂಗ್ಲೆಂಡಿನಲ್ಲಿ ಹುಟ್ಟಿದ ಸ್ಟೀಫಾನ್ ಹಾಕಿಂಗ್ ತನ್ನ
ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆಲ್ಲ ಇಂಗ್ಲೆಂಡಿನ ಬಿರಾನ್ ಹೌಸ್ ಸ್ಕೂಲಿನಲ್ಲಿ. ತನ್ನ
13 ನೆ ವಯಸ್ಸಿನಲ್ಲಿ ameotrophic lateral sclerosis ಎಂಬ ವಿಚಿತ್ರ ರೋಗಕ್ಕೆ
ತುತ್ತಾದ ಸ್ಟೀಫಾನ್ ತನ್ನ 17 ನೆ ವಯಸ್ಸಿಗೆಲ್ಲ ಪ್ರತಿಷ್ಟಿತ ಆಕ್ಸ್ಫರ್ಡ್
ಯೂನಿವರ್ಸಿಟಿ ಗೆ ಸೇರಿದ. ಕೆಲವೇ ವರ್ಷಗಳಲ್ಲೇ ಕೈ ಕಾಲು ಬೆನ್ನು ಮೂಳೆ ಗಳ ಸ್ವಾಧೀನ
ಕಳೆದುಕೊಂಡ ಸ್ಟೀಫಾನ್ 21 ನೆ ವಯಸ್ಸಿಗೆಲ್ಲ ತನ್ನ ಧ್ವನಿಯನ್ನು ಬಹುದೆಕ
ಕಳೆದುಕೊಂಡಿದ್ದ. ಆಗ ಅಧುನಿಕ ವೈದ್ಯ ವಿಜ್ಞಾನ ಇವನಿಗೆ ವಿಧಿಸಿದ ಆಯುಸ್ಸು ಕೇವಲ 2
ವರ್ಷ... ಇದಾವುದಕ್ಕೂ ಧೃತಿಗೆಡದ ಸ್ಟೀಫಾನ್ ತನ್ನ ಬಹುದೇಕ ಸಮಯವನ್ನೆಲ್ಲ ತನ್ನ
ಸಂಶೋಧನೆಗಳಲ್ಲೇ ಕಳೆದ. 1960 ರಲ್ಲಿ ಡಾಕ್ಟರೇಟ್ ಅನ್ನು ಮುಡಿಗೇರಿಸಿಕೊಂಡ ಸ್ಟೀಫಾನ್
ತನ್ನ ಸಂಶೋಧನೆಗಲ್ಲಿ ಇನ್ನಷ್ಟು ಮುಳುಗಿದ. ರೋಜರ್ ಪೆನ್ರೋಸೆ ಎಂಬ ಗಣಿತಗ್ನನಿಂದ
ಪ್ರಭಾವಿತನಾಗಿ ತನ್ನ ಸಂಶೋಧನೆಯ ದಿಗಂತವನ್ನು ಮತ್ತಷ್ಟು ವಿಸ್ತರಿಸಿದ..ಅವನ
ಸಂಶೋಧನೆಗಲೊಡನೆ ಅವನ ಕಾಯಿಲೆಯೂ ಕೂಡ....ಕಡೆಗೂ 2005 ರಲ್ಲಿ ತನ್ನ ಸಂಶೋಧನೆಗಳನೆಲ್ಲ
ಸೇರಿಸಿ A Brief History of Time ಎಂಬ ಪುಸ್ತಕವನ್ನು ಮುದ್ರಿಸಿದ. ಇಲ್ಲಿಯವರೆಗೂ
ಮಾರಟವಾದ ಈ ಪುಸ್ತಕದ ಸಂಖ್ಯೆ ಒಂದು ಕೋಟಿಗೂ ಹೆಚ್ಚು...ವೈದ್ಯ ಮಹಾಶಯ ಹೇಳಿದ ಆ ಎರಡು
ವರ್ಷದ ಅಯಸ್ಶು ಎಂದೋ ಮುಗಿದು ಹೋಗಿದೆ ...ವೈದ್ಯಲೋಕಕ್ಕೆ ಸವಾಲು ಹಾಕಿ ಆಯುಶವನ್ನೇ
ಗೆದ್ದು ಮೂಲ ವಿಜ್ಞಾನ ಸಂಶೋಧನಾ ಕ್ಷೇತ್ರದ ತುತ್ತ ತುದಿಗೆರಿದ ಸ್ಟೀಫಾನ್ ಮೊನ್ನೆ ತಾನೇ
(ಜನವರಿ 8 ರಂದು) ತನ್ನ 73 ನೆ ಹುಟ್ಟಿದ ದಿನವನ್ನು ಆಚರಿಸಿಕೊಂಡರು... ಅದೂ ತಾನಿನ್ನೂ
ಕೇಂಬ್ರಿಜ್ ಯೂನಿವರ್ಸಿಟಿ ಯ ಗಣಿತ ಹಾಗು ವಿಜ್ಞಾನದ ಮುಖ್ಯಸ್ತನಾಗಿದ್ದುಕೊಂಡೆ......
ಐದು ಹಾಡು ಎರಡು ಡೈಲಾಗ್ ಮೂರು ಡ್ಯಾನ್ಸ್ ಒಂದು ಇಂಟರ್ವೆಲ್ ಅರ್ಥವೇ ಆಗದ ಡಬಲ್
ಮೀನಿಂಗ್ ಕಾಮಿಡಿ ....... ಸಿನಿಮಾ ನೋಡುವುದಕ್ಕಿಂತ ಹತ್ತು ಸಾವಿರ ಪಾಲು
ಮೇಲು.....ದಯವಿಟ್ಟು ಮಿಸ್ ಮಾಡ್ಕೋಬೇಡಿ .......ಹಾಗೆ ಸ್ಟೀಫಾನ್ ಹಾಕಿಂಗ್ ಗೆ ಗಟ್ಟಿ
ಆಯಿಸ್ಸು ಕೊಡಪ್ಪಾ ದೇವ್ರೇ ಎಂದು ಬೆದಿಕೊಳ್ಳೊದನ್ನು ಮರೀಬೇಡಿ......
ಸ್ಟೀಫಾನ್ ಹಾಕಿಂಗ್........ ನಿನಗೆ ಸಾವಿರ ಸಾವಿರ ಪ್ರಣಾಮ ........
ಸ್ಟೀಫಾನ್ ಹಾಕಿಂಗ್ website ಗಾಗಿ ಇಲ್ಲಿ ಕ್ಲಿಕ್ ಮಾಡಿ....
http://www.hawking.org.uk/index.html
Theory of Everything ಸಿನಿಮಾ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ....
https://www.youtube.com/watch?v=Salz7uGp72c
Subscribe to:
Post Comments (Atom)
ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?
ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...
-
ನಮ್ ಬಸ್ಯಾ ಇದಾನಲ್ವ ಅವ್ನು ಮೊನ್ನೆ ಅವ್ರ ಕಾಲೇಜಲ್ಲಿ ಇಂಗ್ಲೀಷ್ ಲೆಕ್ಚರರ್ನ ಕೇಳ್ದ ಸಾರ್.. ಇಂಗ್ಲೀಷಲ್ಲಿ "ನಟುರೆ" ಅಂತ ಒಂದ್ ಪದ ಇದೆ ಹಂಗಂದ್ರೆ ಕನ್ನ...
-
ಒಂದು ಕಾಲದಲ್ಲಿ ಹಾವುಗಳ ಬಗ್ಗೆ ನನಗಿದ್ದ ಜ್ಞಾನ ಕೂಡ ಮಾಮೂಲಿ ಎಲ್ಲರಿಗೂ ಇರುವಷ್ಟೇ ಇತ್ತು. ಪುಂಗಿ ನಾದಕ್ಕೆ ಹಾವು ತಲೆದೂಗುತ್ತೆ, ಎಲ್ಲಾ ಹಾವುಗಳೂ ವಿಷಕಾರಿ, ಹಾ...
No comments:
Post a Comment