Sunday, April 14, 2019

ಶ್ರೀ ಬ್ಯಾಂಕಾಕೋಪಖ್ಯಾನ - 2

ರೀ ಬ್ಯಾಂಕಾಕೋಪಖ್ಯಾನ (ನಿನ್ನೆಯಿಂದ ಮುಂದುವರೆದಿದೆ)
ಎರಡನೆ ಅಧ್ಯಾಯ :
ಮಹರ್ಷಿಗಳು ಮುಂದುವರೆದು ಹೇಳುತ್ತಾರೆ. ಎಲೈ ಮುನಿವರ್ಯರೇ ಸುರೇಶ ಅವರ ಬ್ಯಾಂಕಾಕ್ ಕಥೆಯ ಎರಡನೆ ದಿನದ ಭಾಗವನ್ನು ಹೇಳುತ್ತೇನೆ ಕೇಳಿ. ಬೆಳಿಗ್ಗೆ ಎದ್ದು ಪ್ರಾತಃಕಾಲದ ನಿತ್ಯಗಳನ್ನು ತೀರಿಸಿಕೊಂಡು ಅವರು ಪತ್ನೀ ಸಮೇತರಾಗಿ ಬುದ್ಧನ ದರ್ಶನಕ್ಕೆ ಹೊರಟರು. ಬುದ್ಧ ದೇವಾಲಯದ ಒಳ ಹೋದಡನೇ ಏನೋ ಒಂದುರೀತಿಯ ಸಂತಸ. ತ್ಯಾಗ, ಅಹಿಂಸೆಗಳನ್ನು ಇಡೀ ಜಗತ್ತಿಗೆ ಸಾರಿದ ಬುದ್ಧ. ಎನೋ ಒಂದು ರೀತಿಯ ಅಯಸ್ಕಾಂತಿಯ ಶಕ್ತಿ ಅವನ ನೋಟದಲ್ಲಿ. ಆಹಾ ಧನ್ಯ ಈ ಜನ್ಮ ಎಂದು ಮನದುಂಬಿ ಬುದ್ಧನ ದರ್ಶನ ಮಾಡಿ ಹೊರಬಂದೊಡನೆ ತಿಳಿದ ಹೊಸ ವಿಷಯ. ಇಂದು ಬುದ್ಧನ ವಿಶೇಷ ಪೂಜೆ. ಇಡೀ ಥಾಯಲ್ಯಾಂಡ್ ದೇಶದ ತುಂಬೆಲ್ಲ ಬುದ್ಧ ದೇವಾಲಯಗಳಲ್ಲೆಲ್ಲ ವಿಶೇಷ ಪೂಜೆ ಅಂತೆ.ಅದನ್ನು ಕೇಳಿ ತಮ್ಮ ಪ್ಲಾನ್ ಎ ಅನ್ನು ಬದಲಿಸಿ ಪ್ಲಾನ್ ಬಿ ಮಾಡಿದರು. ಪ್ಲಾನ್ ಬಿ ಏನೆಂದರೆ ಇವತ್ತು ಪೂರ್ತಿ ಬರೀ ಬುದ್ಧನ ದೇವಾಲಯಗಳನ್ನೆಲ್ಲ ನೋಡಬೇಕೆಂದು ನಿರ್ಧರಿಸಿ, ಅಲ್ಲಿಂದ ಹೊರಟು ಯಾವುದೋ ಒಂದು ಸ್ಪೀಡ್ ಬೋಟ್ ಹಿಡಿದು ನಗರದ ತುಂಬೆಲ್ಲ ಇರುವ ಸುಮಾರು ಐದಾರು ಬುದ್ಧ ದೇವಾಲಯಗಳನ್ನೆಲ್ಲ ಸಂದರ್ಶಿಸಿದ್ದಾಯಿತು. ಲಕ್ಕಿ ಬುದ್ದ ಟೆಂಪಲ್, ಸ್ಟಾಂಡಿಂಗ್ ಬುದ್ಧ ಟೆಂಪಲ್, ಬುದ್ಧ ಇಂಟರ್ನ್ಯಾಷನಲ್ ಮೆಡಿಟೇಷನ್ ಟೆಂಪಲ್, ವಾಟ್ ಅರುನ್ ಬುದ್ಧ, ದಿ ಟೆಂಪಲ್ ಆಫ್ ಎಮರಾಲ್ಡ್ ಬುದ್ಧ ಮುಂತಾದ ದೇವಾಲಯಗಳನ್ನು ಸಂದರ್ಶಿಸಿ, ಚೈನಾ ಮಾರ್ಕೆಟ್ ಹಾಗೂ ಲಿಟಲ್ ಇಂಡಿಯಾ ಗಳನ್ನು ಸಂದರ್ಶಿಸಿ, ರಾತ್ರಿ ಬಟರ್ ನಾನ್ ಹಾಗೂ ಮಟರ್ ಪನೀರ್ ತಿಂದು ಮತ್ತೆ ತನ್ನ ಹೋಟೆಲಿನ ರೂಮಿಗೆ ಬಂದು ಪವಡಿಸಿದರೆಂಬಲ್ಲಿಗೆ ಏಶಿಯಾ ಖಂಡದ ಮಲೇಶಿಯಾ ಪ್ರವಾಸವೆಂಬ ಕಥನದ ಎರಡನೇ ಅಧ್ಯಾಯವು ಸಂಪೂರ್ಣವಾದುದು
30 Jan 2016

No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...