Thursday, September 1, 2016

|| ನಮಾಮಿ ವಿಘ್ನೇಶ್ವರ ಪಾದ ಪಂಕಜಂ ||

ಇನ್ನೇನು ಊರು, ಕೇರಿ, ಹಳ್ಳಿ, ಪಟ್ಟಣ, ಬೀದಿ ಬೀದಿಗಳಲ್ಲೆಲ್ಲ "ಗಣಪತಿ ಬಪ್ಪ ಮೋರಯಾ" ಗಳದೇ ಸದ್ದು. ಬೀದಿ ಬೀದಿ ಗಳಲ್ಲೂ ಗಣೇಶ ನ ಉತ್ಸವಗಳೇ. ಒಂದು ಸೊಂಡಿಲು ಬರೆದರೆ ಮುಗಿಯಿತು. ಯಾವುದೇ ರೀತಿಯ ಆರ್ಟಿಸ್ಟಿಕ್ ಟಚ್ ಗಳಾದರೂ ಸರಿ, ಯಾವುದೇ ರೀತಿಯ ಶೇಪ್ ಗಳಾದರೂ ಸರಿ ಅದು ಗಣೇಶನೇ.ಧಡೂತಿ ಹೊಟ್ಟೆ, ಕೈ ಕಾಲು ಸಣ್ಣ, ಕೈ ತುಂಬಾ ಸಿಹಿ ಲಾಡು, ಹೊಟ್ಟೆಗೊಂಡು ಸ್ನೇಕ್ ಬೆಲ್ಟ್, ಇವಿಷ್ಟೇ ಇವನ ಐಡೆಂಟಿಟಿ. ಮುಂಬಯಿ ಯಲ್ಲಿ ನಡೆದ 102 ನೆಯ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನಲ್ಲಿಯೂ ಗಣೇಶನ ಆನೆಯ ತಲೆಯ ಬಗ್ಗೆ ಚರ್ಚೆ ಆಗಿದೆಯಂತೆ. ಎಷ್ಟೋ ವಿದೇಶಿ ಗಣಿತಜ್ಞರು ಧಡೂತಿ ದೇಹದ ಗಣೇಶ ಹಾಗು ಅವನನ್ನು ಹೊತ್ತ ಬಡಪಾಯಿ ಇಲಿಯ ಕತೆಯ ಮೂಲಕ e = mc 2 ಸೂತ್ರವನ್ನು ವಿವರಿಸುತ್ತಾರಂತೆ. ಬ್ರಿಟಿಷ್ ಸರ್ಕಾರದ ಮೇಲೆ ಹೋರಾಡಲು ಭಾರತೀಯರನ್ನು ಸಂಘಟಿಸಲು ಲೋಕಮಾನ್ಯ ತಿಲಕರು ಆಯ್ಕೆ ಮಾಡಿದ್ದೂ ಕೂಡ ಗಣೇಶ ಉತ್ಸವ ಎಂದರೆ ಗಣೇಶನ ವೈಶಿಷ್ಟ್ಯ ದ ಪರಿಚಯವಾಗುತ್ತದೆ. ಹಾಗಾದರೆ ಗಣೇಶನಿಗೆ ಇರುವ ಈ ವಿಶಿಷ್ಟತೆಗೆ ಇರುವ ಅರ್ಥವಾದರೂ ಯಾವುದು? ಇಡೀ ಜಗತ್ತೇ ನಂಬಿರುವಂತೆ ಇಂದಿನ ವೈಜ್ಞಾನಿಕ, ಗಣಿತ ಹಾಗು ವೈದ್ಯ ವಿಜ್ಞಾನ ಆವಿಷ್ಕಾರಗಳಿಗೆ ಬಹು ಪಾಲು ಕೊಡುಗೆ ವೇದಗಳದ್ದೇ. ಹಾಗಾದರೆ ಈ ಗಣೇಶನ ವಿಶಿಷ್ಟತೆಯ ಅರ್ಥವಾದರೂ ಏನು?
ಗಣೇಶನಿಗೆ ಆನೆಯ ತಲೆ ಬಂದ ಕತೆಯಂತೂ ನಮ್ಮೆಲ್ಲಾರೀಗೂ ಪರಿಚಿತ.ಪಾರ್ವತಿಯು ತನ್ನ ಟಿಶ್ಯೂ ಗಳಿಂದ ಗಣೇಶನನ್ನು ಸೃಸ್ಟಿಸಿದ್ದು, ತಾಯಿಯ ಮಾತಿನಂತೆ ಗಣೇಶ ಶಿವನನ್ನು ತಡೆದದ್ದು, ಕೋಪಗೊಂಡ ಶಿವ ಗಣೇಶನ ತಲೆಯನ್ನು ಕಡಿದದ್ದು, ನಂತರ ಪಾರ್ವತಿಯ ಕೋರಿಕೆಯಂತೆ ಆನೆಯ ತಲೆಯನ್ನು ತಂದು, ಪ್ಲಾಸ್ಟಿಕ್ ಸರ್ಜರಿ ಮೂಲಕ ಜೋಡಿಸಿದ್ದು ನಮೆಗೆಲ್ಲ ತಿಳಿದ ಕತೆಯೇ.

ಹಾಗಾದರೆ ಗಣೇಶ ಹುಟ್ಟಿದ್ದೇ ಸ್ತ್ರೀ - ಪುರುಷ ಸಮಾಗಮ ವಿಲ್ಲದೆಯೇ ಎಂದಾಯಿತು. ಈ ರೀತಿ ಕೂಡ ಜೀವಿಗಳು ಹುಟ್ಟಬಹುದು ಎಂಬ ಫಿಕ್ಷನ್ ನಮಗೆ ದೊರೆತದ್ದು ಈ ಕತೆಯಿಂದ. (ಇದನ್ನು ಇಂಗ್ಲಿಷ್ ನಲ್ಲಿ Parthenogenisis ಅಂತಾರೆ). ಗಣೇಶನಷ್ಟೇ ಅಲ್ಲದೆ, ಕರ್ಣ, ಆಂಜನೇಯ,ವಸಿಷ್ಠ,ಅಗಸ್ತ್ಯ ಮುಂತಾದವರು ಈ ಪಾರ್ಥೇನೋಜೆನಿಸಿಸ್ ಎಂಬ ಟೆಕ್ನಾಲಜಿಯ ಮೂಲಕ ಹುಟ್ಟಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.





 ಇನ್ನು ಗಣೇಶನ ತಲೆಯ ಬದಲು ಆನೆಯ ತಲೆ ಜೋಡಿಸಲು ನಡೆದ ಪ್ಲಾಸ್ಟಿಕ್ ಸರ್ಜರಿ (ಇದನ್ನು ವೈದ್ಯ ವಿಜ್ಞಾನದಲ್ಲಿ hetero - transplant ಅಂತಾರೆ)  ಯಲ್ಲಿ ಬಿಸಿ ಸಕ್ಕರೆ ಪಾಕವನ್ನು ಉಪಯೋಗಿಸಲಾಯಿತು ಎಂಬುದು ನಮಗೆ ಈ ಕತೆಯಿಂದ ದೊರೆತ ಫಿಕ್ಷನ್.  ಈ ರೀತಿಯ hetero - transplant ಗಳ ಪ್ರಯೋಗ ಬರೀ ಗಣೇಶನ ಮೇಲಷ್ಟೇ ಅಲ್ಲ ಶಿವನ ತಂದೆ ದಕ್ಷ (ಆಡಿನ ತಲೆ), ಹಯಗ್ರೀವ (ಕುದುರೆಯ ತಲೆ) ರ ಮೇಲೂ ನಡೆದಿದೆಯಂತೆ. ಅಷ್ಟೇ ಅಲ್ಲ ಆನೆಯ ತಲೆಯೇ ಯಾಕೆ ಎಂಬ ಪ್ರಶ್ನೆಗೂ ಇಲ್ಲೇ ಉತ್ತರ ಅಡಗಿದೆ. ಮನುಷ್ಯನ ಅತಿ ಸಮೀಪ ಸಸ್ತನಿ ಎಂದರೆ ಆನೆಯೇ ಅಲ್ಲವೇ? (ಈ ರೀತಿ ಅರ್ಧ ಮಾನವ ಇನ್ನರ್ಧ ಪ್ರಾಣಿ ರೀತಿಯ ಹೋಲಿಕೆಗಳನ್ನು ಹೊಂದಿರುವ ಜೀವಿಗಳನ್ನು zoomorphic ಅಂತಾರೆ )

ಇನ್ನು ಗಣೇಶನ ಹೊಟ್ಟೆ ನೋಡಿದೊಡನೆ ನಮಗೆ ಬರುವ ಮೊದಲ ಶಂಕೆ - ಇಷ್ಟು ದಪ್ಪ ಹೊಟ್ಟೆ ಇದ್ದರೆ ಖಂಡಿತ acidity ಬರುತ್ತೆ. ಹಾಗಾದರೆ ಗಣೇಶನಿಗೆ acidity ಬಂದಿಲ್ಲವಾದರೂ ಯಾಕೆ? ಗಣೇಶನ ಶ್ಲೋಕವೊಂದರಲ್ಲೇ ಇದಕ್ಕೆ ಉತ್ತರ ಅಡಗಿದೆ - " ಕಪಿತ್ಥ ಜಂಬೂಫಲ ಸಾರ ಭಕ್ಷಿತಂ " ಅಂದರೆ ಗಣೇಶ ಯಾವಾಗಲೂ ಜಂಬೂಫಲ (White apple ಅಥವಾ rose apple ) ಗಳನ್ನು ತಿನ್ನುತ್ತಿದ್ದನಂತೆ. ನಮಗೆಲ್ಲ ತಿಳಿದಿರುವಂತೆ Rose apple helps to detoxify the liver, improve digestion and protects against diabetes.

ಇನ್ನು ಮನುಷ್ಯನಲ್ಲಿರುವ ಬೊಜ್ಜಿಗೂ ಅವನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ. ದಪ್ಪಗಿರುವವರ ಆಯಸ್ಸು ಇತರರ ಆಯಸ್ಸಿಗಿಂತ ಅಧಿಕ ಎಂದು ಪದ್ಮಭೂಷಣ ಡಾ.ಹೆಗ್ಡೆ ಯವರ ಭಾಷಣದಲ್ಲಿ ಕೇಳಿದ ನೆನಪು. ಅದೇ ರೀತಿ ಗಣೇಶನ ಕೈಲಿರುವ ಸಿಹಿ ಕೂಡ. ಸಿಹಿ ತಿನ್ನುವುದಕ್ಕೂ ಮನುಷ್ಯನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸಹ ಆಯುರ್ವೇದದಲ್ಲಿ ಲಿಖಿತವಂತೆ (ಸಿಹಿ ಬೇರೆ ಸಕ್ಕರೆ ಬೇರೆ. ಸಕ್ಕರೆ ತಿನ್ನುವುದರಿಂದ ಖಾಯಿಲೆ ಬರಬಹುದು ಆದರೆ ಸಿಹಿ ತಿನ್ನುವುದರಿಂದ ಅಲ್ಲ.. ನೆನಪಿಡಿ- ಬೆಲ್ಲ ಕೂಡ ಸಿಹಿ ಪದಾರ್ಥ)

ಇನ್ನು ಗಣಿತ ಕ್ಷೇತ್ರಕ್ಕೂ ಗಣೇಶನ ಕೊಡುಗೆ ಅಪಾರ. ನಮಗೆಲ್ಲ ತಿಳಿದ ಹಾಗೆ ಗಣ ಎಂದರೆ ಗುಂಪು (In mathematics, it is called as Groups or set theory) ಇಂತಹ ಗಣಗಳಿಗೆ ಈಶನೇ ಗಣೇಶ (derivatives of groups is called as Ganitham). ಅಷ್ಟೇ ಅಲ್ಲ ಶಿವನು ಆತ್ಮ ತತ್ವಕ್ಕೂ,ಶಕ್ತಿಮಾತೆಯು ಜಗತ್ ತತ್ವಕ್ಕೂ, ಸ್ಕಂದನು ಜೀವ ತತ್ವಕ್ಕೂ, ಒಡೆಯನ್ನಾದರೆ ವಾಕ್ ತತ್ವದ ಒಡೆಯ ಈ ಗಣೇಶ. ಹಾಗಾಗಿಯೇ ಮಹಾಭಾರತವನ್ನು ಬರೆಯಲು ವೇದವ್ಯಾಸರು ಕ್ಯಾಲಿಗ್ರಫಿ ಗಾಗಿ  ಆಯ್ದುಕೊಂಡಿದ್ದು ಗಣೇಶನನ್ನೇ. "ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ" ಎಂಬ ಶ್ಲೋಕದಲ್ಲಿ ಕೂಡ ಸೂರ್ಯನ ವಿಕಿರಣಗಳು ಶಕ್ತಿಯ ರೂಪವೆಂದು ಸಹ ಹೇಳಲಾಗಿದೆ.

ಹೇ ಗಣೇಶ.. ನೀನೆಷ್ಟು ವಿಶಿಷ್ಟನೋ, ಅಷ್ಟೇ ವಿಚಿತ್ರ ಕೂಡ. ನೀನೆಷ್ಟು ವಿಚಿತ್ರನೋ ಅಷ್ಟೇ ವಿಜ್ಞಾನ ಕೂಡ. ನಮ್ಮೆಲ್ಲರ ವಿಘ್ನಗಳನ್ನೂ ಪರಿಹರಿಸಿ, ನಮಗೆ ಸುಖ ಶಾಂತಿ ನೀಡು..."ಗಣಪತಿ ಬಪ್ಪ ಮೋರಯಾ"

Monday, August 1, 2016

ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ ???


 

ಇಪ್ಪತ್ತೊಂದು ಗ್ರಾಮ್. !!! ಹೌದು ಕೇವಲ ಇಪ್ಪತ್ತೊಂದು ಗ್ರಾಮ್...... !!!

 

ನಮಗೆಲ್ಲ ತಿಳಿದಿರುವಂತೆಅಮೆರಿಕಾದ ಖ್ಯಾತ ವಿಜ್ಞಾನಿ ಡಾಕ್ಟರ್ ಡಂಕನ್ ಮೆಕೆಡಾಲ್ ಅನೇಕ ಪ್ರಯೋಗಗಳಿಂದ ತನ್ನ ಪ್ರಯೋಗಾಲಯದಲ್ಲಿ ಸಾಕ್ಷಿ ಸಮೇತ ಸಾಧಿಸಿ ತೋರಿಸಿದ ಮನುಷ್ಯನ ಆತ್ಮದ ತೂಕ ಕೇವಲ ಇಪ್ಪತ್ತೊಂದು ಗ್ರಾಮ್ !!! ಇಷ್ಟು ಕಡಿಮೆ ತೂಕವುಳ್ಳ ಆತ್ಮದ ಶಕ್ತಿ ಹಿಮಾಲಯಕ್ಕಿಂತಲೂ ಹೆಚ್ಚುಸಾಗರಕ್ಕಿಂತಲೂ ಹಿರಿದುವೇದ ಉಪನಿಷತ್ ಗಳು ಹೇಳಿದಆತ್ಮೋನ್ನತಿ ಯಿಂದ ಹಿಡಿದುಇಂದಿನವರೆಗೂ ಆತ್ಮಕ್ಕೆ ಸಂಬಂಧಿಸಿದ ನೂರಾರು ಪದಗಳು ನಮ್ಮ ಆಡು ಭಾಷೆಯಲ್ಲಿ ಹಾಸುಹೊಕ್ಕಾಗಿವೆಆತ್ಮ ಶಕ್ತಿಆತ್ಮ ಗೌರವಆತ್ಮ ವಿಶ್ವಾಸಆತ್ಮ ವಂಚನೆಆತ್ಮ ಸಾಕ್ಷಾತ್ಕಾರ ..ಇತ್ಯಾದಿ ಹಾಗಾಗಿ ಆತ್ಮ ಎಂಬುದು ಧಾರ್ಮಿಕ ಪದವೆಂಬುದು ಸುಳ್ಳು .. ಏಕೆಂದರೆ ಮುಂಚೆ ಹೇಳಿದ ಪದಗಳಾವೂ ಧರ್ಮಕ್ಕೆ ಸಂಬಂಧಿಸಿದ್ದಲ್ಲಬದಲಾಗಿ ಇವು ನಮ್ಮ ಜೀವನ ಕ್ರಮಕ್ಕೆ ಸಂಬಂಧಿಸಿದ್ದು.

 

ಗೀತೆಯ ಎರಡನೇ ಅಧ್ಯಾಯದಲ್ಲಿ ಶ್ರೀ ಕೃಷ್ಣ ಹೇಳಿದಂತೆ,

 

ಜಾಯತೇಮೃಯತೆ ಕದಾಚಿನ

ನಾಯಂ ಭೂತ್ವಾ ಭವಿತಾ ಭೂಯಃ

ಆಜೊ ನಿತ್ಯ ಶಾಶ್ವತೋ ಯಂ ಪುರಾಣೋ

ಹನ್ಯತೇ ಹನ್ಯಮಾನೇ ಶರೀರೇ

 

ಅಂದರೆಆತ್ಮಕ್ಕೆ ಹುಟ್ಟು ಸಾವುಗಳಾಗಲಿ ಇಲ್ಲ ಅದು ಅನಂತಅಜರಾಮರಆತ್ಮಕ್ಕೆ ಸಾವಿಲ್ಲ ಎಂದಾದರೆ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುವುದು ಸರಿಯೇ ? ಒಂದು ವೇಳೆ ಶಾಂತಿ ಸಿಗಲಿ ಎಂದಾದರೆ ಎಲ್ಲಿ ಮತ್ತು ಹೇಗೆಆತ್ಮಕ್ಕೆ ಸಾವೇ ಇಲ್ಲ ಎಂದಾದರೆ ಶಾಂತಿ ಆದರೂ ಹೇಗೆ ಸಿಕ್ಕೀತು ? ಎಂದೂ ಸಹ ಕೆಲವು ತತ್ವಜ್ಞಾನಿಗಳ ಅಂಬೋಣ.

 

ಆದರೆ ನಾನಿಲ್ಲಿ ಹೇಳಹೊರಟಿರುವ ವಿಷಯವೇ ಬೇರೆಇದು ಸಾವಿಗೆಆತ್ಮಕ್ಕೆ ಹಾಗೂ ಶಾಂತಿಗೆ ಸಂಬಂಧಿಸಿದ್ದಲ್ಲಬದಲಾಗಿ ಬೇಡಿದ್ದನ್ನು ನೀಡುವ ಕಲ್ಪವೃಕ್ಷವೆಂಬ ಆತ್ಮ ಶಕ್ತಿಗೆ ಸಂಬಂಧಿಸಿದ್ದುಹೌದು ಆತ್ಮ ಹಿಮಾಲಯದಂತಹ ಪರ್ವತವನ್ನೂ ಕುಟ್ಟಿ ಕೆಡವಬಲ್ಲದುಸಾಗರವನ್ನು ಈಜಿ ಜಯಿಸಬಲ್ಲದುನಕ್ಷತ್ರ ಗ್ರಹ ಗಳಾಚೆಗಿನ ಬ್ರಹ್ಮಾಂಡವನ್ನೇ ನಡುಗಿಸಬಲ್ಲದ್ದು -  ಆತ್ಮ ಶಕ್ತಿ ಶಕ್ತಿಗೆ ಭಯವೆಂಬುದು ತಿಳಿದಿಲ್ಲನೆಗೆಟಿವ್ ಯೋಚನೆಗಳ ಅರಿವಿಲ್ಲಆದರೂ ಇಷ್ಟು ಶಕ್ತಿಯುತವಾದ ಆತ್ಮವನ್ನುಚಿಂತೆಯೋಚನೆಹಾಗೂ ನಮ್ಮ ಕೆಲವು ಭೌತಿಕ ಚರ್ಯೆಗಳು ಆಗಾಗ ಬಲಹೀನಗೊಳಿಸುತ್ತವೆಇಂತಹ ಕಲ್ಮಶಗಳಿಂದ ಆತ್ಮಶಕ್ತಿಯ ಮೈಲೇಜ್ ಹಾಗೂ ಪಿಕಪ್ ಸ್ವಲ್ಪ ಕಮ್ಮಿಯಾಗತೊಡಗುತ್ತದೆ.ಸ್ವಲ್ಪ ಶ್ರದ್ದೆ ವಹಿಸಿದರೆ ಆತ್ಮಕ್ಕೆ ಮತ್ತೆ ಮುಂಚಿನ ಪಿಕಪ್ ಹಾಗೂ ಮೈಲೇಜ್ ಕೊಡುವುದು ಅಂತಹ ಕಷ್ಟವೇನಲ್ಲ ನನ್ನ ಆತ್ಮಶಕ್ತಿಯೇ ಗಟ್ಟಿಯಾಗು !!!  ನನ್ನ ಆತ್ಮಶಕ್ತಿಯೇ ಗಟ್ಟಿಯಾಗು !!!! ಎಂದು ಅದಕ್ಕೆ ಕೇಳುವಂತೆ ಪದೇ ಪದೇ ಕೂಗಿ ಹೇಳಿದರೆ ಆಯಿತುಅದು ತನ್ನಿಂತಾನೇ ಬಲಗೊಳ್ಳುತ್ತಾ ಹೋಗುತ್ತದೆ ಕ್ರಿಯೆಗೆ ಹಲವಾರು ಹೆಸರುಗಳುಕೆಲವರು ಇದನ್ನು ಧ್ಯಾನ ಎಂದರೆ ಇನ್ನೂ ಕೆಲವರು ಪ್ರಾರ್ಥನೆ ಎನ್ನುತ್ತಾರೆಮತ್ತೂ ಕೆಲವರು ಏಕಾಗ್ರತೆ ಎಂದರೆ ಇನ್ನೂ ಕೆಲವರು ಸಾಧನೆ ಎನ್ನುತ್ತಾರೆ .ಮತ್ತಷ್ಟು ಜನ ಯೋಗವೆಂದೂಇನ್ನಷ್ಟು ಜನ ಮೆಸ್ಮರಿಸಂ ಎಂದೂ ಕರೆಯುತ್ತಾರೆಹೆಸರು ಹಾಗೂ ಅದರ ಬಾಹ್ಯ ರೂಪ ಏನೇ ಇರಲಿಅದರ ಮೂಲ ತತ್ವ ಒಂದೇಯಾವುದೇ ಕಾರ್ಯವನ್ನೂ ಮಾಡಲು ಬೇಕಾಗುವಷ್ಟು ಉತ್ಸಾಹವನ್ನು ಒದಗಿಸುವುದೇ ಆಗಿದೆ.

 

ಬೈಬಲ್ನಲ್ಲಿ ಹೇಳಿದಂತೆ,

 

Why, my soul, are you downcast?
Why so disturbed within me?
Put your hope in God,
for I will yet praise him,
my Savior and my God.

(Psalm 42:11)

 

ಆತ್ಮವನ್ನು ಉತ್ತೇಜಿಸಿ ಅದರ ಶಕ್ತಿಯನ್ನು ಹೆಚ್ಚಿಸುವುದೇ ದೇವರು ಎಂಬ ಕಲ್ಪನೆಯ ಮೂಲ ಉದ್ದೇಶ. "ದೇವರುಎಂಬ ನಂಬಿಕೆಯು ಆತ್ಮಶಕ್ತಿಯನ್ನು ಉತ್ತಮಗೊಳಿಸುತ್ತದೆಯೇ ಹೊರತು, "ದೇವರುಎಂಬ ಅಸ್ತಿತ್ವದಿಂದಲ್ಲಆತ್ಮವನ್ನು "ದೇವರುಎಂಬ ಅಸ್ತಿತ್ವಕ್ಕೆ ಜೋಡಿಸಿದೊಡನೆಯೇ ಅದು ತನ್ನದೇ ಆದ ಧಾರ್ಮಿಕ ಕಟ್ಟುಪಾಡುಗಳ ಸಂಕೋಲೆಯೊಳಗೆ ಬಂಧಿತವಾಗುತ್ತದೆಆತ್ಮ ಶಕ್ತಿಯನ್ನು ಧಾರ್ಮಿಕ ಸಂಕೋಲೆಗಳೊಡನೆ ಬಂಧಿಸದೇತತ್ವ ಶಾಸ್ತ್ರದಲ್ಲಿ ಬಂಧಿಸಿದರೆ ಸಾಕುನಾವು ಬೇಡಿದ್ದನ್ನು ನೀಡುವ ಕಲ್ಪವೃಕ್ಷವಾಗುವುದರಲ್ಲಿ ಸಂಶಯವಿಲ್ಲಅದು ತನ್ನಿಂತಾನೇ ಆತ್ಮ ವಿಶ್ವಾಸವನ್ನು ಪಂಪ್ ಮಾಡುತ್ತದೆಸಾಕಷ್ಟು ಆತ್ಮ ವಿಶ್ವಾಸ ಒಂದಿದ್ದರೆ ಸಾಕುಜಗತ್ತನ್ನೇ ಜಯಿಸಬಲ್ಲ ವಿಜಯಿ ನಾನಾಗಬಲ್ಲೆ ..

 

ಹಾಗಾಗಿ ನನ್ನ ಆತ್ಮವೇ !!!! ಬೇಡಿದ್ದನ್ನು ನೀಡಬಲ್ಲ ಕಲ್ಪವೃಕ್ಷ ನೀನಾಗು !!!!

 

ಲಾಸ್ಟ್ ಪಂಚ್ : ಸತ್ತ ವ್ಯಕ್ತಿಗೆ ಸಂತಾಪ ಸೂಚಿಸುತ್ತಾಆತ್ಮಕ್ಕೆ ಶಾಂತಿ ಸಿಗಲಿ, Rest In Peace ಎಂದು ಹೇಳುವುದು ವಾಡಿಕೆ ಮೂಲಕವಾದರೂ ಸತ್ತ ವ್ಯಕ್ತಿಯ ಬಗ್ಗೆ ಮೂರು ನಿಮಿಷ ನೆನೆಸಿಕೊಳ್ಳುವ ಒಳ್ಳೆಯ ಉದ್ದೇಶ ಇದರ ಹಿಂದಿದೆಮೂರು ನಿಮಿಷ ನೆನೆಸಿ ಕೊಳ್ಳುವುದು ಇರಲಿರೆಸ್ಟ್ ಇನ್ ಪೀಸ್ ಎಂಬ ಮೂರು ಪದಗಳನ್ನು ಟೈಪ್ ಮಾಡಲೂ ಸಹ ತಾಳ್ಮೆ ಇರದ ಮಂದಿ ಅದೆಷ್ಟೋಯಾರಾದರೂ ಸತ್ತ ಸುದ್ದಿ ಬಂದೊಡನೆ ನಂದೂ ಒಂದಿರ್ಲಿ ಎಂಬಂತೆ ಕೇವಲ RIP ಎಂದು ಟೈಪಿಸಿತನ್ನ ಕೆಲಸ ಮುಗಿಯಿತೆಂದು ಭಾವಿಸುವ ರಿಪ್ಪನಪೇಟೆ ರಿಪ್ಪಯ್ಯಗಳ ಆತ್ಮಗಳಿಗೆಅವರು ಸತ್ತ ನಂತರವೂಶಾಂತಿ ಸಿಗದಿರಲಿ!!!

 

 



ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...