Sunday, December 13, 2020

ಫ್ರಾಗೇಶ - ಭಾಗ ಆರು



 

ಢಮ್, ಢಮ್, ಢಮ್. ಶಿಂಗ್ ಪಾಂಗ್ ಬಂದೂಕಿನಿಂದ ಹೊರಟ ಮೂರು ಗುಂಡುಗಳು ಒಮ್ಮೆಲೇ ಫ್ರಾಗೇಶನ ದೇಹವನ್ನು ಧಸಕ್ಕನೇ ಹೊಕ್ಕವು. ಫ್ರಾಗೇಶನ ದೇಹದಿಂದ ಒಮ್ಮೆಯೇ ರಕ್ತ ಚಿಲ್ಲನೆ ಚಿಮ್ಮಿತು. ಪರ್ವತದೇಹಿಯಾದ ಫ್ರಾಗೇಶನಿಗೆ ಬುಲೆಟ್ ಗಳು ಒಂದು ಲೆಕ್ಕವೇ? ಆದರೂ ತನ್ನ ದೇಹದಿಂದ ರಕ್ತ ಬಂದಿದ್ದನ್ನು ಕಂಡು ಫ್ರಾಗೇಶನ ರೋಷ ಇಮ್ಮಡಿಗೊಂಡಿತು ರೋಷಾವೇಶದಿಂದ ಕಣ್ಣುಗಳನ್ನು ಬಿಡುತ್ತಾಗುಟುರ್ ಗುಟುರ್’ ಎಂದು ಹೂಂಕರಿಸುತ್ತಾ ಜೋರಾಗಿ ಅಬ್ಬರಿಸಿದ. ಹುಚ್ಚೆದ್ದವಂತೆ ನೀರಮೇಲೆ ಜೋರಾಗಿ ಕುಪ್ಪಳಿಸತೊಡಗಿದ. ಹಡಗಿನ ಬಾಲವೊಂದನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಮೂರು ಸುತ್ತು ಗಿರ್ರನೆ ಅದನ್ನು ಸುತ್ತಿಸಿ, ಬಟ್ಟೆಯನ್ನು ಮೇಲೆತ್ತಿ ಒಗೆಯುವಂತೆ ಹಡಗನ್ನು ಜೋರಾಗಿ ಮೇಲೆ ಎತ್ತಿ ನೀರಿನ ಮೇಲೆ ಒಗೆದ. ಒಗೆತದ ಹೊಡೆತಕ್ಕೆ ಸಿಕ್ಕ ಹಡಗು ಎರಡು ಭಾಗಗಳಾಗಿ ಸೀಳಿತು. ಆದರೂ ಫ್ರಾಗೇಶನ ಕೋಪ ತಗ್ಗಲಿಲ್ಲ. ಜೋರಾಗಿ ಬುಸುಗುಡುತ್ತಾ, ಎರಡು ಭಾಗಗಳಾಗಿ ಸೀಳಿದ್ದ ಹಡಗಿನ ಒಂದು ಭಾಗವನ್ನೇ ಮತ್ತೆ ಕೈಲಿ ಹಿಡಿದು ಆಕಾಶದತ್ತ ಎಸೆದ. ಬ್ಯಾಟಿನಿಂದ ಚಿಮ್ಮಿದ ಚೆಂಡಿನಂತೆ ಬಾನೆತ್ತರಕ್ಕೆ ಚಿಮ್ಮಿದ ಹಡಗು ಅಷ್ಟೇ ವೇಗದಿಂದ ಇನ್ನೊಂದು ಹಡಗಿನ ಮೇಲೆ ಅಡ್ಡಡ್ಡವಾಗಿ ಬಿತ್ತು. ಹೊಡೆತಕ್ಕೆ ಸಿಕ್ಕ ಹಡಗು ಅಡ್ಡಡ್ಡವಾಗಿ ಎರಡು ಭಾಗಗಳಾಗಿ ಛಿದ್ರವಾಯ್ತು.

ಆಕ್ರೋಶಭರಿತನಾಗಿದ್ದ ಫ್ರಾಗೇಶ ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಅಲ್ಲೇ ಸಮುದ್ರದ ಮಧ್ಯೆ ನಡುಗಡ್ಡೆಯ ದ್ವೀಪದಂತಿದ್ದ ಬೆಟ್ಟವೊಂದನ್ನು ಬುಡಸಮೇತ ಕಿತ್ತು ಜೋರಾಗಿ ಶಿಂಗ್ ಪಾಂಗ್ ಇದ್ದ ಹಡಗಿನತ್ತ  ಎಸೆದ. ಅಷ್ಟೇ ಶಿಂಗ್ ಪಾಂಗ್ ಇದ್ದ ಹಡಗಿನ ಗೋಡೆಗಳು ಛಿದ್ರ ಛಿದ್ರಗೊಂಡು ಒಮ್ಮೆಲೇ ನೀರು ಭರ್ರನೆ ಒಳನುಗ್ಗಿತು. ನೀರಿನ ರಭಸಕ್ಕೆ ಸಿಕ್ಕ ಹಡಗು ನೀರಿನ ಆಳಕ್ಕೆ ಮುಳುಗಿತು. ಅಷ್ಟೇ ಅಲ್ಲದೇ ಬುಡಸಮೇತ ಬೆಟ್ಟವನ್ನು ಕಿತ್ತು ಉಂಟಾದ ಖಾಲಿ ಜಾಗಕ್ಕೆ ಇದ್ದಕ್ಕಿದ್ದಂತೆ ನೀರು ಹರಿಯತೊಡಗಿತು. ನಾಲ್ಕೂ ದಿಕ್ಕಿನಿಂದ ಒಮ್ಮೆಲೆ ನೀರು ಹರಿಯುತ್ತಲೇ ಅಲ್ಲಿ ದೊಡ್ಡದಾದ ನೀರಿನ ಸುಳಿ ಉಂಟಾಯಿತು. ಒಂದೆರಡು ಹಡಗುಗಳು ಸುಳಿಯ ಆರ್ಭಟಕ್ಕೆ ಸಿಕ್ಕು ದಿಕ್ಕುತಪ್ಪಿ ಅತ್ತಿತ್ತ ಓಲಾಡತೊಡಗಿದವು. ನೀರಿನ ಅಲೆಗಳು; ಅದರ ಜೊತೆಗೆ ಹೊಸದಾಗಿ ಸೃಷ್ಟಿಯಾದ ದೊಡ್ಡ ಸುಳಿ; ಹೆಚ್ಚಾದ ನೀರಿನ ಸೆಳೆತ; ಫ್ರಾಗೇಶನ ಕಡೆಯಿಂದ ಹಾರಿ ಬಂದು ಬೀಳುತ್ತಿರುವ ಬೆಟ್ಟ-ಗುಡ್ಡ ಬಂಡೆಗಳು; 'ಅಯ್ಯಯ್ಯೋ ನಾ ಸತ್ತೇ' ಎಂಬ ಬುಡಬುಡಕೆಸ್ತಾನ  ಸೈನಿಕರ ಚೀತ್ಕಾರ, ಆಕ್ರಂದನ; ಏನಾಗುತ್ತಿದೆ ಎಂದೂ ಸಹ ತಿಳಿಯದೆ ದಿಕ್ಕೆಟ್ಟ ಮೀನು - ತಿಮಿಂಗಲಗಳು; ಸೈನಿಕರ ರಕ್ತದಿಂದ ತೋಯ್ದು ಕೆಂಪಾದ ಸಮುದ್ರದ ನೀರು; ಹಬ್ಬದೂಟದ ಸವಿಯನ್ನು ಸವಿಯಲೆಂದು ಮೇಲೆ ಹಾರಾಡುತ್ತಿರುವ ರಣಹದ್ದುಗಳು; ಇವೆಲ್ಲಕ್ಕೂ ಮಿಗಿಲಾಗಿ ಆಕಾಶವೇ ಕಳಚಿ ಬೀಳುತ್ತಿದೆಯೇನೋ ಎಂಬಂತೆ ಆರ್ಭಟಿಸುತ್ತಿದ್ದ ಫ್ರಾಗೇಶನಗುಟುರ್ ಗುಟುರ್’ ಎಂಬ ರಣೋತ್ಸಾಹದ ಕೇಕೆ - ಒಟ್ಟಿನಲ್ಲಿ ಕೇವಲ ಹತ್ತು ನಿಮಿಷಗಳ ಹಿಂದಷ್ಟೇ  ಪ್ರಶಾಂತವಾಗಿದ್ದ ಸಮುದ್ರ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು.


ಫ್ರಾಗೇಶ - ಭಾಗ ಐದು


 

ಜೇಬಿನಿಂದಧಮಾಲ್ ಧಿಮೀಲ್’ ಔಷಧಿಯನ್ನು ಹೊರತೆಗೆದು ಬಾಟಲಿನಲ್ಲಿ ಇದ್ದ ಅಷ್ಟೂ ಔಷಧಿಯನ್ನು ಒಂದೇ ಗುಟುಕಿಗೆ ಕುಡಿದು ಮುಗಿಸಿದ ಫ್ರಾಗೇಶ. ಧಮಾಲ್ ಧಿಮೀಲ್ ಶಕ್ತಿವರ್ಧಿನಿ ದೇಹದ ಒಳಗೆ ಹೋದದ್ದೇ ಹೋದದ್ದು - ಫ್ರಾಗೇಶನ ದೇಹ ಹಿಗ್ಗತೊಡಗಿತು. ಸಾಮಾನ್ಯ ಕಪ್ಪೆಯಷ್ಟಿದ್ದ ಫ್ರಾಗೇಶ ಬರುಬರುತ್ತಾ ಬೆಕ್ಕಿನಷ್ಟಾದ; ನಾಯಿಯಷ್ಟಾದ; ಹುಲಿಯಷ್ಟಾದ. ಬರಬರುತ್ತಾ ಆನೆಗಾತ್ರ ಬೆಳೆದ. ನೋಡನೋಡುತ್ತಿದ್ದಂತೆ ಹಿಮಾಲಯ ಪರ್ವತದಷ್ಟು ಬೃಹತ್ತಾಗಿ ಬೆಳೆದಿದ್ದ. ಜ್ವಾಲಾಮುಖಿಯಂತಾಗಿದ್ದ  ಅವನ ಕಣ್ಣುಗಳಿಂದ ಬೆಂಕಿಯ ಉಂಡೆಗಳು ಸುರಿಯುತ್ತಿದ್ದವು. ‘ಗುಟುರ್ ಗುಟುರ್’ ಎಂಬ ಅವನ ಆವೇಶಭರಿತ ಕೂಗಿಗೆ ಸಮುದ್ರವೇ ಅಲ್ಲೋಲಕಲ್ಲೋಲವಾಗಿತ್ತು. ಆಳವಾಗಿ ಒಮ್ಮೆ ಉಸಿರನ್ನು ಒಳಕ್ಕೆ ಎಳೆದುಕೊಂಡು ಹಿಡಿದು ಎಳೆದಿದ್ದ ಅಷ್ಟೂ ಉಸಿರನ್ನು ಒಮ್ಮೆಲೆಉಸ್ಸ್’ ಎಂದು ಹೊರಬಿಟ್ಟ. ಹೊರಬಿಟ್ಟ ಉಸಿರಿನ ಅಬ್ಬರಕ್ಕೆ ಸಿಕ್ಕ ಸಾಗರದ ಅಲೆಗಳು ಮುಗಿಲೆತ್ತರಕ್ಕೆ ಎದ್ದವು. ಅಲೆಗಳ ರಭಸದ ಹೊಡೆತಕ್ಕೆ ಸಿಕ್ಕ ಹಡಗುಗಳು ಉಯ್ಯಾಲೆಯಂತೆ ನೀರಮೇಲೆ ಅತ್ತಿಂದಿತ್ತ ತೂಗಾಡಹತ್ತಿದವು. ಹಡಗಿನಲ್ಲಿದ್ದ ಬುಡಬುಡಕೆಸ್ಥಾನದ ಸೈನಿಕರು ಒಬ್ಬರ ಮೇಲೊಬ್ಬರು ಬಿದ್ದರು. ಆಕಡೆ ಈಕಡೆ ತೂರಾಡದಂತೆ ಕೈಗೆ ಸಿಕ್ಕಿದ ಕಂಬಿಗಳನ್ನು ಆಧಾರವಾಗಿ ಹಿಡಿದು ನಿಂತರು. ಹಡಗಿನಲ್ಲಿದ್ದ ಆಯುಧಗಳು ಕ್ಷಿಪಣಿಗಳು ಮದ್ದುಗುಂಡುಗಳು ಕಡೆಯಿಂದ ಕಡೆಗೆ, ಈಕಡೆಯಿಂದ ಕಡೆಗೆ ಜಾರತೊಡಗಿತ್ತು. ಹಡಗಿನ ಕ್ಯಾಪ್ಟನ್ ಗಳಂತೂ ಹಡಗುಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಬಾರಿಬಾರಿಗೂ ಸಮುದ್ರದ ಮೇಲೆ ಏರಿ ಬರುತ್ತಿರುವ ದೈತ್ಯ ಅಲೆಗಳ ವೇಗ ಬರುಬರುತ್ತಾ ಹೆಚ್ಚಾಗುತ್ತಿದೆಯೇ  ಹೊರತು ಕಡಿಮೆಯಾಗುತ್ತಿರಲಿಲ್ಲ. ಬುಡಬುಡಿಕೆ ಸ್ಥಾನದ ಸೈನಿಕರಅಯ್ಯೋ ನಾ ಸತ್ತೇ’ ಎಂಬ ಕೂಗು ದೂರದ ನೂರು ಕಿಲೋಮೀಟರ್ ವರೆಗೂ ಕೇಳಿಸುತ್ತಿತ್ತು. ಸೇನಾಧಿಪತಿ ಶಿಂಗ್ ಪಾಂಗ್ ಅಂತೂ ಅತ್ತಿತ್ತ ತೂರಾಡದಂತೆ ಆಸರೆಯಾಗಿ, ಕೈಗೆ ಸಿಕ್ಕಿದ ಕಂಬಿಯನ್ನು ಬಲವಾಗಿ ಹಿಡಿದು ನಿಂತಿದ್ದ.

ದೈತ್ಯಾಕಾರವಾಗಿ ಬೆಳೆದಿದ್ದ ಫ್ರಾಗೇಶಗುಟುರ್ ಗುಟುರ್’ ಎಂದು ಹೂಂಕರಿಸುತ್ತಾ ಜೋರಾಗಿ ಕುಪ್ಪಳಿಸಿದ. ಕ್ಷಣಕ್ಷಣಕ್ಕೂ ಅವನಲ್ಲಿ ಆವೇಶ - ರೋಷ ಹೆಚ್ಚಾಗುತ್ತಿತ್ತು. ತನ್ನ ಎರಡೂ ಕೈಗಳಿಂದ ನೀರಿನ ಮೇಲೆ ಬಲವಾಗಿ ಬೀಸಿ, ಬೃಹತ್ತಾದ ದೈತ್ಯ ಅಲೆಗಳನ್ನು ಸೃಷ್ಟಿಸುತ್ತಲೇ ಇದ್ದ. ಹಾಗೆಯೇ ಕುಪ್ಪಳಿಸುತ್ತಲೇ ಬುಡಬುಡಕೆ ಸ್ಥಾನದ ಹಡಗುಗಳ ಸಮೀಪಕ್ಕೆ ಬಂದ. ಫ್ರಾಗೇಶ ಹತ್ತಿರ ಹತ್ತಿರ ಬರುತ್ತಿದ್ದ ಹಾಗೆಯೇ, ಅಲೆಗಳ ರಭಸ ಇನ್ನೂ ಜಾಸ್ತಿಯಾಗುತ್ತಿತ್ತು. ಹಾಗೆಯೇ ಕುಪ್ಪಳಿಸುತ್ತಾ ಬಂದ ಫ್ರಾಗೇಶ ಕೈಗೆ ಸಿಕ್ಕ ಹಡಗೊಂದನ್ನು ಜೋರಾಗಿ ಜಾಡಿಸಿ ತನ್ನ ಎರಡೂ ಕಾಲುಗಳಿಂದ ಒದ್ದ. ಫ್ರಾಗೇಶನ ಒದೆತದ ರುಚಿಯ ಬಗ್ಗೆ ಹೇಳಬೇಕೇ? ಅಷ್ಟು ದೊಡ್ಡ ಸಾವಿರಾರು ಕಿಲೋ ತೂಗುವ ಹಡಗು ಕೂಡ, ಜೋರು ಮಳೆಗೆ ಸಿಕ್ಕ ತರಗೆಲೆಯ ಹಾಗೆ, ಭೂಸವಕಳಿಗೊಂಡ ಜಾರುವ ಮಣ್ಣಿನಂತೆ ನೀರಮೇಲೆ ಜಾರುತ್ತಾ ಹೋಗಿ ಸುಮಾರು ಎರಡು ಕಿಲೋಮೀಟರ್ ದೂರಕ್ಕೆ ಜಾರುತ್ತಾ ಹೋಯಿತು.

ಹಾಗೂ ಹೀಗೂ ಮಾಡಿ ಸಾವರಿಸಿಕೊಂಡು ಎದ್ದು, ದೇಹವನ್ನು ನಿಧಾನವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ಶಿಂಗ್ ಪಾಂಗ್. ಒಂದು ಕೈಲಿ ಭದ್ರವಾಗಿ ಕಂಬಿಯನ್ನು ಆಧಾರವಾಗಿ ಹಿಡಿದುಕೊಂಡು ಇನ್ನೊಂದು ಕೈಯಿಂದ ಹೇಗೋ ಕಷ್ಟಪಟ್ಟು ಕೈಗೆ ಸಿಕ್ಕಿದ ದೊಡ್ಡದಾದ ಬದುಕೊಂದನ್ನು ಹಿಡಿದುಕೊಂಡು, ಫ್ರಾಗೇಶ ನಿಂತ ಜಾಗದೆಡೆಗೆ ಗುರಿಮಾಡಿ ಟ್ರಿಗರ್ ಅದುಮಿದ. ಊಹೂ! ಆರೀತಿ ಉಯ್ಯಾಲೆ ಆಡುತ್ತಿರುವ ಹಡಗಿನಿಂದ ನಿಖರವಾಗಿ ಗುರಿ ಮಾಡಲು ಸಾಧ್ಯವೇ? ಖಂಡಿತ ಇಲ್ಲ! ಶಿಂಗ್ ಪಾಂಗ್ ಗುರಿ ಇಟ್ಟು ಹೊಡೆದ ಗುಂಡು ಫ್ರಾಗೇಶನಿಗೆ ತಾಕದೆ ಮತ್ತೆಲ್ಲೋ ಹೋಗಿ ಬಿತ್ತು. ಹಾಗೂ ಹೀಗೂ ಮಾಡಿ ಕಂಬಿಯನ್ನು ಇನ್ನೂ ಗಟ್ಟಿಯಾಗಿ ಆಸರೆಯಾಗಿ ಹಿಡಿದು, ಹಿಡಿದು ಮತ್ತೊಂದು ಕೈಯ್ಯಲ್ಲಿ ಇನ್ನೂ ಗಟ್ಟಿಯಾಗಿ ಬಂದೂಕನ್ನು ಹಿಡಿದು ಸಾವರಿಸಿಕೊಂಡು ಎದ್ದು ನಿಂತು ಛಲಬಿಡದ ತ್ರಿವಿಕ್ರಮನಂತೆ ಫ್ರಾಗೇಶನೆಡೆಗೆ ನಿರಂತರವಾಗಿ ಗುಂಡುಗಳ ಮಳೆಯನ್ನೇ ಸುರಿಸತೊಡಗಿದ.  ಅಲೆಗಳ ಹೊಡೆತಕ್ಕೆ ಸಿಕ್ಕ ಹಡಗು ಜೋರಾಗಿ ಅತ್ತಿಂದಿತ್ತ ಉಯ್ಯಾಲೆಯಾಡುತ್ತಲೇ ಇದೆ. ಫ್ರಾಗೇಶನೂ ಅಷ್ಟೇ, ಅತ್ತಿಂದಿತ್ತ ಕುಪ್ಪಳಿಸುತ್ತಾ, ತನ್ನೆರಡೂ ಕೈಗಳನ್ನು ನೀರಿನ ಮೇಲೆ ಬಡಿಯುತ್ತಾ, ದೈತ್ಯ ಅಲೆಗಳನ್ನು ಸೃಷ್ಟಿಸುತ್ತಲೇ ಇದ್ದಾನೆ.  ಐದು ನಿಮಿಷಗಳ ಕಾಲ ದಿಟ್ಟಿಸಿ ನೋಡಿ, ನಿಖರವಾಗಿ ಗುರಿಮಾಡಿ ಫ್ರಾಗೇಶನೆಡೆಗೆ ಗುರಿಮಾಡಿ ಕಡೆಗೂ ಟ್ರಿಗರ್ ಅದುಮಿಯೇ ಬಿಟ್ಟ ಶಿಂಗ್ ಪಾಂಗ್.


ಫ್ರಾಗೇಶ - ಭಾಗ ನಾಲ್ಕು

 



ಪ್ರಶಾಂತವಾಗಿದ್ದ ಸಮುದ್ರ ಒಮ್ಮೆಲೆ ರುದ್ರನರ್ತನ ಮಾಡತೊಡಗಿತ್ತುಸಮುದ್ರದ ಆಳದಿಂದ ಎತ್ತರದ ಅಲೆಗಳು ಏಳತೊಡಗಿದವುಆಳೆತ್ತರದ ಅಲೆಗಳಿಗೆ ಸಿಕ್ಕಿದ ಮೀನುಗಳು ಅಲೆಗಳ ಜೊತೆ ಬಾನೆತ್ತರಕ್ಕೆ ಚಿಮ್ಮತೊಡಗಿದವುಅಲೆಗಳ ಹೊಡೆತದ ರಭಸಕ್ಕೆ ಸಿಕ್ಕಿದ ತಿಮಿಂಗಲಗಳುಶಾರ್ಕುಗಳು ಹಾರಿಬಿಟ್ಟ ಗಾಳಿಗೆ ಸಿಕ್ಕ ಗಾಳಿಪಟಗಳಂತೆ ಮೇಲಕ್ಕೆ ಚಿಮ್ಮಿ ಮೀನುಗಾರರ ದೋಣಿಗಳ ಮೇಲೆ ಬಿದ್ದವುತಿಮಿಂಗಲ  ಒಂದು ಬಂದು ದೊಡ್ಡ ಹಡಗಿನೊಂದರ ಮೇಲೆ ಬಿದ್ದರೆ ಏನಾಗಬೇಡಎಷ್ಟೋ ದೋಣಿಗಳು  ರಭಸಕ್ಕೆ ಮುಳುಗಿ ಹೋದವುಕೆಲವು ದೋಣಿಗಳು ದಿಕ್ಕುತಪ್ಪಿ ಉಳಿದ ದೋಣಿಗಳಿಗೆ ಡಿಕ್ಕಿ ಹೊಡೆದವುಡಿಕ್ಕಿ ಹೊಡೆದ ವೇಗಕ್ಕೆ ಮುರಿದು ಬಿದ್ದ ದೋಣಿಗಳು ಎಷ್ಟುಬುರ್ರ್ ಎಂದು ಬೀಸುವ ಗಾಳಿಯು ಅಲೆಗಳ ವೇಗವನ್ನು ಇಮ್ಮಡಿಗೊಳಿಸುತ್ತಿತ್ತು.

ಆಳೆತ್ತರಕ್ಕೆ ಎದ್ದು ತೀರಕ್ಕೆ ಬಡಿದ ಅಲೆಗಳಿಂದಾಗಿ ನೂರಾರು ತೆಂಗು ಅಡಿಕೆ ಮರಗಳು ಬುಡಸಮೇತ ಧರೆಗುರುಳಿದವುಮನೆಯ ಮೇಲಿನ ಹೆಂಚುಗಳು ಗಾಳಿಪಟದಂತೆ ಆಕಾಶಕ್ಕೆ ಚಿಮ್ಮಿ ಅಲ್ಲೇ ಮೇಲೆ ಗಾಳಿಯಲ್ಲೇ ತೇಲಾಡುತ್ತಿದ್ದವುಸಮುದ್ರತೀರದ ಮೂರ್ನಾಕು ಮೈಲಿಗಳ ತುಂಬೆಲ್ಲ ನೀರು ನೀರು ನೀರುಮನೆಯ ಒಳಗೂ ನೀರುಮನೆಯ ಹೊರಗೂ ನೀರುದಡದಲ್ಲಿ ಕಟ್ಟಿಹಾಕಿದ ದೋಣಿಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಬೆಂಕಿ ಉಂಟಾಯಿತುದಡದಲ್ಲಿದ್ದ ಮೀನುಗಾರರ ಕೈಗೆ ಸಿಕ್ಕ ವಸ್ತುಗಳನ್ನು ಆಶ್ರಯವಾಗಿ ಹಿಡಿದರುಕೆಲವರು ತೆಂಗಿನ ಮರದ ಅಡಿಗೆ ಓಡಿದರುಕೆಲವರು ಯಾವುದೋ ಪಾಳುಬಿದ್ದ ಹಳೆಯ ಮನೆಯ ಒಳಗೆಏನಿದುಇಷ್ಟು ಅಲೆಗಳ ರಭಸಹಿಂದೆಂದೂ ಕಂಡಿಲ್ಲಕೇಳಿಲ್ಲಇದ್ದಕ್ಕಿದ್ದಂತೆ ಸೃಷ್ಟಿಯಾದ ಚಂಡಮಾರುತವೇಅಥವಾ ಸಾಗರದಡಿಯ ಭೂಕಂಪವೇಇಂತಹ ಅಲೆಗಳನ್ನು ಅಡ್ಡಗಟ್ಟಿ ಬದುಕುಳಿಯುವುದು ಸಾಧ್ಯವೇ?

ಬುಡಬುಡಿಕೆಸ್ತಾನ ಸೈನಿಕರೆಲ್ಲರ  ಜೀವ ಕೈಗೆ ಬಂದಂತಿತ್ತುಇದ್ದಕ್ಕಿದ್ದಂತೆ ಏಲ್ ಉಂಟಾಗಿದ್ದರೂ ಎಲ್ಲಿಂದಏನಾಗುತ್ತಿದೆಎಂದು ಏನೂ ತಿಳಿಯದವನಂತೆ ಕೂಗುತ್ತಿದ್ದ ಸೇನಾದಿಪತಿಅಷ್ಟರಲ್ಲೇ ಸೇನಾಧಿಪತಿಯ ಹತ್ತಿರ ಹೋದ ಸೈನಿಕನೊಬ್ಬ ಭಯದಿಂದ ನಡುಗುತ್ತಿದ್ದ ತನ್ನ ಕೈಯನ್ನು ಇನ್ನೊಂದು ದಿಕ್ಕಿಗೆ ತೋರಿಸಿ 'ಸರ್ಸೀ ದೇರ್!' ಎಂದು ಎಂದು ಹೇಳಿ ಹಾಗೆಯೇ ನೆಲಕ್ಕುರುಳಿದ್ದಅವನು ತೋರಿಸಿದ ಕಡೆ  ಕಣ್ಣು ಹಾರಿಸಿದ ಸಾವಿರಾರು ಸೈನಿಕರುಅಲ್ಲಿನ ದೃಶ್ಯವನ್ನು ನೋಡಿ, 'ಮೈಗಾಡ್ಎಂದು ಪ್ರಜ್ಞೆ ತಪ್ಪಿ ಬಿದ್ದರು.

ಸೈನಿಕ ತೋರಿಸಿದೆಡೆಗೆ ಕಣ್ಣುಹಾಯಿಸಿದ ಸೇನಾಪತಿ. ಅಲ್ಲಿನ ದೃಶ್ಯವನ್ನು ಕಂಡು ಧಸಕ್ಕನೆ ಜೀವ ಕೈಗೆ ಬಂತು. ಅಡಿಯಿಂದ ಮುಡಿಯವರೆಗೂ ದೇಹ ನಡುಗುತ್ತಿತ್ತು. ದೇಹದ ತುಂಬೆಲ್ಲ ಜ್ವರ ವ್ಯಾಪಿಸಿತ್ತು. ಕಣ್ಣು ಮಂಜಾಗಿತ್ತು. ತಲೆ ಗಿರ್ರನೆ ತಿರುಗುತ್ತಿತ್ತು. ಹೃದಯ ಬಡಿತ ನಿಂತು ಹೋದಂತಾಯಿತು. ಹೇಗೂ ಸಾವರಿಸಿಕೊಂಡು ಮೈಯಲ್ಲಿನ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ 'ನೋ!' ಎಂದು ಜೋರಾಗಿ ಕೂಗಿ ಜ್ಞಾನ ತಪ್ಪಿ ಬಿದ್ದ. - ದೂರದ ಸಮುದ್ರದ ಮಧ್ಯದಿಂದ ಪ್ರಳಯರುದ್ರನಂತೆ ಕೆಂಡಕಾರುತ್ತಾ, ರೋಷಾವೇಶದಿಂದ ಫ್ರಾಗೇಶ ಇವರೆಡೆಗೆ ನುಗ್ಗಿ ಬರುತ್ತಿದ್ದ.

ಫ್ರಾಗೇಶ - ಭಾಗ ಮೂರು

 




"ಸರ್ ಒಂದು ಬ್ಯಾಡ್! ನ್ಯೂಸ್ ಬುಡುಬುಡುಕಿಸ್ಥಾನದ ಹಡಗುಗಳು ನಮ್ಮ ದೇಶದ ಸರಹದ್ದಿನವರೆಗೂ ಬಂದಿವೆ. ಇನ್ನೊಂದು ಹತ್ತು ನಿಮಿಷದಲ್ಲಿ ಹಡಗಿನಿಂದ ಹೊರಟ ಬಾಂಬು ಸೀದಾ ನಮ್ಮ ದೇಶದೆಡೆಗೆ  ಬರಲಿದೆ. ಏನು ಮಾಡೋದು ಅಂತ ಗೊತ್ತಾಗ್ತಿಲ್ಲ ಸರ್" ಅಂದರು ಕ್ಯಾಪ್ಟನ್ ಅಭಿಷೇಕ್ ಸಿಂಗ್.

"ಫ್ರಾಗೇಶ್ ಗೆ ಫೋನ್ ಮಾಡ್ತೀನಿ ಅಂದ್ರಿ. ಎಲ್ಲಿದ್ದಾನೆ ಅವ ಏನ್ ಮಾಡ್ತಾ ಇದ್ದಾನೆ?" ಅಂದ್ರು ಪಿಎಂ. ಸರ್ ಅದು ಏನಂದ್ರೆ ಮುಂಚೆ ಅವರು ನಮ್ಮ ಸರ್ವರ್ ಗಳನ್ನು ಮಾತ್ರ ಹಾಕ್ ಮಾಡಿದ್ದರು. ಆದರೆ ಇವತ್ತು ಬೆಳಗ್ಗೆಯಿಂದ ನಮ್ಮ ಕಮ್ಯುನಿಕೇಶನ್ ಸಿಸ್ಟಮ್ ಕೂಡ ಹ್ಯಾಕ್ ಮಾಡಿದ್ದಾರೆ. ಯಾವುದೇ ಫೋನ್ - ಮೊಬೈಲ್/ ವಾಕಿ ಟಾಕಿ ಕೂಡ  ಕೆಲಸ ಮಾಡ್ತಾ ಇಲ್ಲ. ನಿನ್ನೇನೆ ಫ್ರಾಗೇಶ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆದರೆ ಆಮೇಲೆ ಏನಾಯ್ತು ಏನಾಗಿದೆ ಮುಂದೆ ಏನಾಗುತ್ತೆ ಅಂತ ತಿಳ್ಕೊಳ್ಳೋಕೆ ಯಾವುದೇ ಅವಕಾಶ ಇಲ್ಲ. ಏನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಸಾರ್" ಅಂದರು ಕ್ಯಾಪ್ಟನ್ ಅಭಿಷೇಕ್ ಸಿಂಗ್ ತಲೆತಗ್ಗಿಸಿ. ಪಿಎಂ ಕೂಡ ಏನೂ ಮಾತನಾಡದೆ ಸುಮ್ಮನಾದರು. ಗೃಹ ಮಂತ್ರಿಗಳಂತೂ 'ಅರೆ ಭಗವಾನ್!' ಎಂದು ತಲೆ ಮೇಲೆ ಕೈ ಹೊತ್ತು ಕುಳಿತರು. ಮಿಲಿಟರಿಯ ಹಿರಿಯ ಅಧಿಕಾರಿಗಳು ಒಬ್ಬರು ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತರು. ಆದರೂ ಆಗಲೇ ಫ್ರಾಗೇಶ್ ಗೆ ವಿಷಯ ತಿಳಿಸಿರುವುದರಿಂದ  ಅವನು ಹೇಗಾದರೂ ಸರಿ, ಬಂದೆ ಬರುತ್ತಾನೆ, ನಮ್ಮ ದೇಶವನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಮಾತ್ರ ಅವರಲ್ಲಿ ಅಚಲವಾಗಿತ್ತು.

******

"ಮೈ ಡಿಯರ್ ಸೋಲ್ಡ್ಜರ್ಸ್!  ಇವತ್ತು ತುಂಬಾ ಪವಿತ್ರದಿನ. ನಮ್ಮ ದೇಶದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ದಿನ. ಕಳೆದ ನೂರು ವರ್ಷಗಳಿಂದ ನಾವು ಸತತವಾಗಿ ಟ್ರೈ ಮಾಡ್ತಾ ಇದ್ದರೂ ಸಹ ಆಗದ ಕೆಲಸ ಇವತ್ತು ನಿಮ್ಮೆಲ್ಲರಿಂದ ಆಗಿದೆ. ದೇಶದ ಮೇಲೆ ಈಗಾಗಲೇ ಎರಡು ಬಾರಿ ಯುದ್ಧ ಮಾಡಿದಾಗಲೂ ಫ್ರಾಗೇಶ್ ಫ್ಯಾಮಿಲಿಯಿಂದಾಗಿ ನಮ್ಮ ಸೈನ್ಯ ಸೋತು ಬಂದಿತ್ತು. ಫ್ರಾಗೇಶ್ ಬದುಕಿರುವವರೆಗೂ ನಾವು ದೇಶವನ್ನು ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿಯೇ ಉಪಾಯ ಮಾಡಿ, ಅವನ ಮೇಲೆ  ದೇಶದ್ರೋಹದ ಆರೋಪ ಹೊರಿಸಿ ಅವನ ದೇಶದಿಂದ ಗಡೀಪಾರು ಮಾಡಿಸಿಬಿಟ್ವಿ. ಆಮೇಲೆ ಅವರ ಸರ್ವರ್ ಗಳನ್ನು ಹ್ಯಾಕ್ ಮಾಡಿ ಅವರ ಇಡೀ ಮಿಲಿಟರಿಯನ್ನು ನಮ್ಮ ಕಂಟ್ರೋಲ್ ಗೆ ತೆಗೆದುಕೊಂಡುಬಿಟ್ವಿ. ಈಗ ಅವರ ಪೂರ್ತಿ ಕಮ್ಯುನಿಕೇಶನ್ ಸಿಸ್ಟಮ್ ಕೂಡ ನಮ್ಮ ಕಂಟ್ರೋಲ್ನಲ್ಲಿ ಇವೆ. ಫ್ರಾಗೇಶ ಕೂಡ ಅಲ್ಲಿಲ್ಲ. ಹಾಗಾಗಿ ಸಲ ನಮಗೆ ಜಯ ಕಟ್ಟಿಟ್ಟ ಬುತ್ತಿ. ಈಗ ದೇಶ ನಮ್ಮ ಅಡಿಯಾಳಾಗುವುದನ್ನು ತಪ್ಪಿಸೋಕೆ ಯಾರಿಗೂ ಸಾಧ್ಯವಿಲ್ಲ. ಬನ್ನಿ ಹೋಗೋಣ, ಹೋರಾಡೋಣ. ದೇಶವನ್ನು ಸುಟ್ಟು ಬೂದಿಮಾಡಿ ಅದೇ ಬೂದಿಯಲ್ಲಿ ಸ್ನಾನ ಮಾಡೋಣ. ನೂರು ವರ್ಷಗಳ ನಮ್ಮ ಸೋಲಿಗೆ ಸೇಡು ತೀರಿಸಿಕೊಳ್ಳೋಣ. ಇಡೀ ದೇಶವನ್ನು ಸುಟ್ಟು ಬೂದಿ ಮಾಡುವವರೆಗೂ ನಮ್ಮ ಹೋರಾಟ ನಿಲ್ಲದು. ನಮ್ಮ ಪ್ರಾಣ ಹೋದರೂ ಸರಿ. ಜೈ ಬುಡಬುಡಕೆ ಸ್ಥಾನ.”

ಹಡಗಿನಲ್ಲಿದ್ದ ಎಲ್ಲಾ ಸೈನಿಕರು ಒಮ್ಮೆಲೆ ಜೈ ಬುಡಬುಡಕೆಸ್ಥಾನ ಎಂದು ಕೇಕೆ ಹಾಕಿದರು. ಸದ್ದಿನ ಕಂಪನಕ್ಕೆ ಇಡೀ ಹಡಗೇ ಗಾಳಿಯಲ್ಲಿ ಹಾರಿ ಹೋಗುವಂತಿತ್ತು

********

ಅದು ಬುಡುಬುಡಿಕೆ ಸ್ಥಾನ ದೇಶಕ್ಕೆ ಸೇರಿದ ಹಡಗು.ಅಂತಹ 20 ಹಡಗುಗಳು. ಒಂದೊಂದರಲ್ಲೂ 10 ಸಾವಿರ ಜನ ಸೈನಿಕರು. ಹಡಗಿನ ತುಂಬಾ ಅಪಾರ ಪ್ರಮಾಣದ ಕ್ಷಿಪಣಿಗಳು, ಮದ್ದುಗುಂಡುಗಳು. ಕೈಗೆ ಸಿಕ್ಕವರನ್ನು ಹಾಗೆಯೇ ತಿಂದು ಹಾಕಬಲ್ಲಂತಹ ರಾಕ್ಷಸ ಸ್ವರೂಪಿ ಸೈನಿಕರು. ಅವರ ಸೇನಾಧಿಪತಿ ಹೇಳಿದ ಮಾತುಗಳು ಅವರಲ್ಲಿ ಇನ್ನಷ್ಟು ರೋಷಾವೇಶಗಳನ್ನು ಉಂಟುಮಾಡಿತ್ತು.ಇನ್ನೇನು ಹತ್ತು ನಿಮಿಷದಲ್ಲಿ ಅವರಂದುಕೊಂಡ ಕಾರ್ಯ ಶುರುವಾಗುತ್ತದೆ. ಎಲ್ಲರೂ ಅವರವರ ಜಾಗಕ್ಕೆ ಹೋಗಿ, ಬಾಂಬು, ಕ್ಷಿಪಣಿಗಳನ್ನೆಲ್ಲ ಪರೀಕ್ಷಿಸಿ ಸೇನಾಪತಿಯ ಆದೇಶಕ್ಕೆ ಸಿದ್ಧವಾಗಿ ನಿಂತರು.  ಅಂದುಕೊಂಡಂತೆ ನಡೆದಿದ್ದರೆ ಅರ್ಧಗಂಟೆಯಲ್ಲೇ ಅವರ ಯುದ್ಧ ಮುಗಿದು ಅವರ ವಿಜಯೋತ್ಸಾಹ ಹಡಗುಗಳ ತುಂಬೆಲ್ಲ ತುಂಬಿರಬೇಕಿತ್ತು. ಆದರೆ ನಡೆದಿದ್ದೇ ಬೇರೆ. ನೂರಲ್ಲ ಸಾವಿರ ಹಡಗುಗಳು ಬಂದರೂ ಕೂಡ, ಅವರನ್ನೆಲ್ಲ ಎದುರಿಸಬಲ್ಲ ಆಯುಧವೊಂದಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಆಯುಧವೇ ಫ್ರಾಗೇಶ್.


ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...