Sunday, April 14, 2019
ಶ್ರೀ ಬ್ಯಾಂಕಾಕೋಪಾಖ್ಯಾನ ಮೂರನೆಯ ಅಧ್ಯಾಯ (ನಿನ್ನೆಯಿಂದ ಮುಂದುವರೆದಿದೆ)
ಮಹರ್ಷಿಗಳು ಮುಂದುವರೆದು ಹೇಳುತ್ತಾರೆ. ಎಲೈ ಮುನಿಶ್ರೇಷ್ಟರೆ ನಿಮಗೆ ಮೂರನೆಯ ದಿನದ
ಕಥೆಯನ್ನು ಹೇಳುತ್ತೇನೆ ಕೇಳಿ. ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡು
ಸುರೇಶ ಅವರು ಪತ್ನೀ ಸಮೇತರಾಗಿ ಫ್ಲೋಟಿಂಗ್ ಮಾರ್ಕೆಟನ್ನು ನೋಡಲು ಹೋದರು ಎನ್ನಲಾಗಿ
ಪೂತರು ಕೇಳುತ್ತಾರೆ. ಸ್ವಾಮಿ ಈ ಫ್ಲೋಟಿಂಗ್ ಮಾರ್ಕೆಟ್ ಎಂದರೇನು? ಇದರ ಬಗ್ಗೆ
ಸವಿಸ್ತಾರವಾಗಿ ಹೇಳಿ ಎನ್ನಲು ಮಹರ್ಷಿಗಳು ಮುಂದುವರೆಸುತ್ತಾರೆ. ಬ್ಯಾಂಕಾಕಿನಲ್ಲಿ
ತುಂಬಾ ಪ್ರಸಿದ್ಧವಾದ ಸ್ಥಳ ಫ್ಲೋಟಿಂಗ್ ಮಾರ್ಕೆಟ್. ಇಂತಿಷ್ಟು ಹಣವನ್ನು ಕೊಟ್ಟು
ಬಾಡಿಗೆಗೆ ಬೋಟೊಂದನ್ನು ಪಡೆದು, ಆ ಬೋಟಿನಲ್ಲಿ ಕುಳಿತು ನದಿಯಲ್ಲಿ ಪ್ರಯಾಣಿಸಬೇಕು. ಆ
ನದಿಯ ಎರಡೂ ಕಡೆ ನೂರಾರು ವರ್ತಕರ ಅಂಗಡಿಗಳು. ಅಷ್ಟೇ ಅಲ್ಲದೇ ದೋಣಿಯಲ್ಲೇ ಅಂಗಡಿಗಳ
ಮೂಲಕ ವ್ಯಾಪಾರ ಮಾಡುತ್ತಿರುವ ವರ್ತಕರು ಒಂದಷ್ಟು ಜನ. ಇಲ್ಲಿನ ಅಂಗಡಿಗಲಾದರೋ ಸುಂದರವಾದ
ಕನ್ಯೆಯರಿಂದ ಸುತ್ತುವರೆದಿದೆ. ವಿಧವಿಧವಾದ ವೇಷಭೂಷಣಗಳನ್ನು ತೊಟ್ಟ ಲಲನೆಯರನ್ನು
ನೋಡಲಂತೂ ಕಣ್ಣುಗಳೇ ಸಾಲದು.ಬ್ರೆಡ್ ಇಂದ ಹಿಡಿದು ಸೀಫುಡ್ ವರೆಗೆ, ಕನ್ನಡಿಯಿಂದ ಎಲೆ
ಅಡಿಕೆಯ ಕುಟ್ಟಣಿವರೆಗೆ ವಿಧವಿಧವಾದ ವಸ್ತುಗಳನ್ನು ಆ ವರ್ತಕರು ಮಾರುತ್ತಿರುತ್ತಾರೆ.
ನಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡಿ ಮುಗಿಸಬಹುದು.
ಈ ರೀತಿಯ ಶಾಪಿಂಗ್ ಮುಗಿಸಿ ಹೊರಟ ಸುರೇಶ ಅವರು ಬ್ಯಾಂಕಾಕಿನ ಪ್ರಸಿದ್ಧ ವಿಕ್ಟರಿ
ಮಾನುಮೆಂಟ್ ನೋಡಿಕೊಂಡು ಹೋಟೆಲಿಗೆ ಬಂದು ರಾತ್ರಿ ಪವಡಿಸಿದರೆಂಬಲ್ಲಿಗೆ ಮೂರನೆಯ
ಅಧ್ಯಾಯವು ಮುಗಿಯಿತು
Subscribe to:
Post Comments (Atom)
ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?
ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...
-
ನಮ್ ಬಸ್ಯಾ ಇದಾನಲ್ವ ಅವ್ನು ಮೊನ್ನೆ ಅವ್ರ ಕಾಲೇಜಲ್ಲಿ ಇಂಗ್ಲೀಷ್ ಲೆಕ್ಚರರ್ನ ಕೇಳ್ದ ಸಾರ್.. ಇಂಗ್ಲೀಷಲ್ಲಿ "ನಟುರೆ" ಅಂತ ಒಂದ್ ಪದ ಇದೆ ಹಂಗಂದ್ರೆ ಕನ್ನ...
-
ಒಂದು ಕಾಲದಲ್ಲಿ ಹಾವುಗಳ ಬಗ್ಗೆ ನನಗಿದ್ದ ಜ್ಞಾನ ಕೂಡ ಮಾಮೂಲಿ ಎಲ್ಲರಿಗೂ ಇರುವಷ್ಟೇ ಇತ್ತು. ಪುಂಗಿ ನಾದಕ್ಕೆ ಹಾವು ತಲೆದೂಗುತ್ತೆ, ಎಲ್ಲಾ ಹಾವುಗಳೂ ವಿಷಕಾರಿ, ಹಾ...
No comments:
Post a Comment