Sunday, April 14, 2019

ಶ್ರೀ ಬ್ಯಾಂಕಾಕೊಪಖ್ಯಾನ - ನಾಲ್ಕನೆಯ ಅಧ್ಯಾಯ

ಶ್ರೀ ಬ್ಯಾಂಕಾಕೊಪಖ್ಯಾನ - ನಾಲ್ಕನೆಯ ಅಧ್ಯಾಯ (ನಿನ್ನೆಯಿಂದ ಮುಂದುವರೆದಿದೆ) ಶ್ವಾನಕಾದಿ ಮಹರ್ಷಿಗಳು ಮುಂದುವರೆದು ಹೇಳುತ್ತಾರೆ " ಎಲೈ ಮುನಿವರ್ಯರೆ ನಾಲ್ಕನೆಯ ದಿನ ಮುಂಜಾನೆ ಬೇಗನೆ ಎದ್ದು ಸುರೇಶ ಅವರು ತಮ್ಮ ನಿತ್ಯಕರ್ಮಗಳನ್ನೆಲ್ಲ ಮುಗಿಸಿ, ಪತ್ನೀ ಸಮೇತರಾಗಿ ಬೆಳಿಗ್ಗೆ ಒಂಭತ್ತು ಗಂಟೆಯ ವಿಮಾನವನ್ನೇರಿ, ವಾಪಸ್ಸು ಮಲೇಷಿಯಾಗೆ ಹೋದರು. ಇಲ್ಲಿಗೆ ಅವರ ಬ್ಯಾಂಕಾಕಿನ ಪ್ರವಾಸ ಕಥನ ಮುಗಿಯಿತು ಎನ್ನಲಾಗಿ, ಪೂತರು ಕೇಳುತ್ತಾರೆ " ಎಲೈ ಮುನಿವರ್ಯನೆ ಥಾಯ್ ಜನರ ಜೀವನ ಶೈಲಿ, ಸಂಸ್ಕೃತಿ, ಆಚಾರ - ಧರ್ಮ ಎಂತಹದು? ಅವುಗಳನ್ನೆಲ್ಲ ಸವಿಸ್ತಾರವಾಗಿ ಹೇಳಿ ಎನ್ನಲು, ಮುನಿಗಳು ಹೇಳುತ್ತಾರೆ " ಅಯ್ಯಾ ಕೇಳು. ಬೌದ್ಧ ಧರ್ಮೀಯರೆ ಹೆಚ್ಚಾಗಿರುವ ಈ ದೇಶದಲ್ಲಿ ಹೆಜ್ಜೆಗೊಂದು ಬುದ್ಧನ ದೇವಾಲಯ ಕಂಡರೂ ಆಶ್ಚರ್ಯವೇನಿಲ್ಲ. ಬುದ್ದನಷ್ಟೇ ಆರಾಧಿಸಲ್ಪಡುವ ಇನ್ನೊಂದು ದೇವರೆಂದರೆ ಗಣಪತಿ. ಭರತ ಖಂಡವನ್ನು ಆಳುತ್ತಿದ್ದ ಶ್ರೀ ರಾಮಚಂದ್ರನ ಬಗ್ಗೆ ಕೇಳಿದ್ದೀಯಲ್ಲವೇ? ಆ ಶ್ರೀರಾಮನಂತೂ ಇವರ ಆರಾಧ್ಯ ದೈವ. ಇಂದಿಗೂ ಇಲ್ಲಿನ ರಾಜನನ್ನು ಜನರು ರಾಮ ನೆಂದೇ ಕರೆಯುತ್ತಾರೆಯೇ ಹೊರತು ಬೇರಾವುದೇ ಹೆಸರಿನಿಂದಲ್ಲ. ಇಲ್ಲಿನ ಸೇತುವೆಗಳಿಗೂ ಸಹ ರಾಮಸೇತು (ರಾಮಾ ಬ್ರಿಡ್ಜ್) ಎಂದೇ ಹೆಸರು. ರಾಮನೆಂಬುದು ಇಲ್ಲಿನ ಜನರಿಗೆ ಕೇವಲ ಹೆಸರಲ್ಲ. ಅವನೊಬ್ಬ ಶ್ರೇಷ್ಠ ವ್ಯಕ್ತಿ. ಪೂತರು ಮುಂದುವರೆದು ಕೇಳುತ್ತಾರೆ " ಎಲೈ ಮುನಿವರ್ಯನೆ, ಈ ಕ್ಷೇತ್ರಕ್ಕೆ ಯಾರ್ಯಾರು ಹೋಗಬಹುದು ? ಇಲ್ಲಿಗೆ ಹೋಗಬಹುದಾದ ವಿಧಾನವಾರೂ ಹೇಗೆ ? ಈ ಬಗ್ಗೆ ಸವಿಸ್ತಾರವಾಗಿ ಹೇಳಿ " ಎನ್ನಲು, ಮಹರ್ಷಿಗಳು ಹೇಳುತ್ತಾರೆ " ಜಾತಿ, ವಯಸ್ಸು, ಅಂತಸ್ತು, ಧರ್ಮ, ಲಿಂಗ ಬೇಧವಿಲ್ಲದೆ ಯಾರು ಬೇಕಾದರೂ ಈ "ತೀರ್ಥ" ಕ್ಷೇತ್ರವನ್ನು ಸಂದರ್ಶಿಸಬಹುದಾದರೂ, ವಯಸ್ಸಿನಲ್ಲಿರುವ ಯುವಕರಿಗೆ ಈ ಊರು ವಿಶೇಷವಾದ ಫಲಗಳನ್ನು ನೀಡುವುದು. ತಮ್ಮ ಧರ್ಮಪತ್ನಿಯೋದನೆ ಯಾವಾಗ ಬೇಕಾದರೂ ಈ ಕ್ಷೇತ್ರವನ್ನು ಸಂದರ್ಶಿಸಬಹುದು.ಒಂದು ವೇಳೆ ಧರ್ಮ ಪತ್ನಿಯನ್ನು ಜೊತೆಯಲ್ಲಿ ಕೊಂಡೊಯ್ದಿಲ್ಲವಾದಲ್ಲಿ, ಒಂದೆರಡು ದಿನದ ಮಟ್ಟಿಗೆ ಇಲ್ಲಿ ಪತ್ನಿಯರು ಕೂಡ ದೊರೆಯುತ್ತಾರೆ. ಈ ಕ್ಷೇತ್ರದಲ್ಲಿ ಇದ್ದಷ್ಟು ದಿನ ಬ್ರಹ್ಮಚರ್ಯವನ್ನು ಕಡಾಖಂಡಿತವಾಗಿ ಪಾಲಿಸಬಾರದು. ಅಷ್ಟೇ ಅಲ್ಲ ಇಲ್ಲಿ ತಂತಮ್ಮ ಶಕ್ತಿಗನುಸಾರವಾಗಿ, ಪೂರ್ತಿ ಬಾಡಿ ಮಸಾಜ್ ಮಾಡಿಸಿಕೊಳ್ಳಬಹುದು.ಇಲ್ಲಿಗೆ ಭೇಟಿಯಿತ್ತಾಗ, ಆದಿಯಲ್ಲಿ ಆಗಲಿ, ಮಧ್ಯದಲ್ಲಿ ಆಗಲಿ, ಅಂತ್ಯದಲ್ಲೇ ಆಗಲಿ, ಪೂರ್ತಿ ಮಸಾಜ್ ಮಾಡಿಸಬೇಕು. ಶಕ್ತವಿಲ್ಲದಿದ್ದಲ್ಲಿ ಅರ್ಧ ಬಾಡಿ ಮಸಾಜ್, ಅದೂ ಸಾಧ್ಯವಾಗದಿದ್ದಲ್ಲಿ ಫುಟ್ ಮಸಾಜ್ ಆದರೂ ಸರಿ ಮಾಡಿಸಿಕೊಳ್ಳಬಹುದು.ರಾತ್ರಿ ಹತ್ತರ ನಂತರ ಮಾತ್ರ ಆರಂಭಗೊಂಡು, ಮಧ್ಯರಾತ್ರಿ ಎರಡರ ವರೆಗೆ ಸ್ವರ್ಗವೇ ಧರೆಗಿಳಿದು ಬಂದಂತೆ ಕಂಗೊಳಿಸುವ ಖಾವೋ ಸ್ಯಾನ್ ರಸ್ತೆಯಂತೂ "ತೀರ್ಥ" ಪ್ರಿಯರಿಗೆ ವಿಶೇಷವಾದ ಫಲಗಳನ್ನು ಕೊಡತಕ್ಕದ್ದು.ಇಲ್ಲಿನ ಸುಂದರಿಯರಾದರೋ ವಿಶೇಷವಾದ ಧಿರಿಸುಗಳನ್ನು, ಆಭರಣಗಳನ್ನು ಧರಿಸಿ ಕಂಗೊಳಿಸುತ್ತಾರೆ. ಯಾರು ಈ ಕ್ಷೇತ್ರವನ್ನು ಸಂದರ್ಶಿಸಿ, ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಾರೋ, ಅವರ ದೇಹದ ನೋವುಗಳೆಲ್ಲ ಮಾಯವಾಗಿ, ಉತ್ತಮ ರೀತಿಯ ಆರೋಗ್ಯ ಉಂಟಾಗುವುದು. ಇದು ಸತ್ಯ ಎಂದು ಶ್ವಾನಕಾದಿ ಮಹರ್ಷಿಗಳು ಪೂತ ಮುನಿಗಳಿಗೆ ಹೇಳಿದರು ಎಂಬಲ್ಲಿಗೆ ಏಷ್ಯಾ ಖಂಡದ ಥಾಯ್ ದೇಶದ "ತೀರ್ಥ" ಕ್ಷೇತ್ರ ಮಹಿಮೆಯ ಕಥೆ ಸಂಪೂರ್ಣವಾದುದು... ಕಲಿಯುಗೆ, ಪ್ರಥಮ ಪಾದೇ, ಜಂಭೂ ದ್ವೀಪೇ, ಏಷ್ಯಾ ವರ್ಷೆ,ಏಷ್ಯಾ ಖಂಡೇ, ದಕ್ಷಿಣ ದಿಕ್ಭಾಗೆ ,ಥಾಯ್ "ತೀರ್ಥ" ಕ್ಷೇತ್ರೇ ಪ್ರವಾಸ ಕಥನೆ ಸಂಪೂರ್ಣಂ.. ಮಮ (ಎಲ್ಲರೂ ಮಮ ಅಂತ ಹೇಳಿ)ಶೀಘ್ರಸ್ಯೆ ಥಾಯ್ ದೇಶೆ ಕ್ಷೇತ್ರೇ ದರ್ಶನೆ ಭಾಗ್ಯೆ ಕರಿಷ್ಯೇ... *********** ಮಂಗಳಂ ***************

No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...