Sunday, April 14, 2019
December 5 ರಂದು ಹೆಂಡತಿ ತವರುಮನೆಗೆ ಹೋದ ಖುಷಿ, ಸಾರೀ... ದುಃಖದಲ್ಲಿ ಬರೆದದ್ದು
ನನ್ನ ಪ್ರೀತಿಯ ಒಬ್ಬಳೇ ಹೆಂಡತಿಯಾದ @[100001636994958:2048:Akshaya Rao] ,
ನೀನೇನೋ ಬೆಂಗಳೂರಿಗೆ ಹೋಗಿ ನಿಮ್ಮಮ್ಮನ ಮನೆಯಲ್ಲಿ ತಿಂದುಂಡು ಕಾಲ ಕಳೆಯುತ್ತಿರುವೆ.
ಆದರೆ ನೀನಿಲ್ಲದೆ ನನಗೆ ಊಟ ರುಚಿಸುತ್ತಿಲ್ಲ. ನಿದ್ರೆ ಬರುತ್ತಿಲ್ಲ...ಊಟ ತಿಂಡಿ
ಇಲ್ಲದೆ ತುಂಬಾ ಒಣಕ್ಕೊಂದು ಹೋಗಿದೀನಿ.ಎಷ್ಟು ಒಣಕ್ಕೊಂದು ಹೋಗಿದೀನಿ ಅಂದ್ರೆ, ಹೊರಗೆ
ಎಲ್ಲೇ ಹೋದರು ಸಹ ನನ್ನ ಸ್ನೇಹಿತರೆಲ್ಲ ವಣಕ್ಕಂ ವಣಕ್ಕಂ ಅಂತ ನಾನು ಒಣಕ್ಕೊಂದು
ಹೋಗಿರೋದರ ಬಗ್ಗೆನೇ ವಿಚಾರಿಸ್ತಾ ಇದಾರೆ..
ನೀನಿಲ್ಲದೆ ಇರೋ ಊಟ ಎಂಥಹ ಊಟ ಅಂತ ನಿನ್ನೆ ಅಡಿಗೆನೆ ಮಾಡಿರಲಿಲ್ಲ. ಹೋಟೆಲ್ ನಲ್ಲಿ
ತಿಂದ್ಕೊಂಡು ಬಂದೆ.ಇವತ್ತು ಶನಿವಾರ ರಜಾ ಮನೇಲೆ ಇದ್ದೆ ಆಲ್ವಾ.. ಆದ್ರೂನು ನೀನಿಲ್ಲದೆ
ಊಟ ಎಂಥಹ ಊಟ ಅಂತ ಅಡಿಗೆ ಮಾಡ್ಲಿಲ್ಲ.. ಏನೋ ಸ್ವಲ್ಪ ಟೊಮೇಟೊ, ಆಲೂ ಗಡ್ಡೆ,
ಹುರುಳಿಕಾಯಿ, ಶುಂಟಿ, ಕ್ಯಾರೆಟ್ ಹಾಗೆ ಸ್ವಲ್ಪ ಬಟಾಣಿ ಹಾಕಿ ಉಪ್ಪಿಟ್ಟು ಮಾಡ್ಕೊಂಡೆ
ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು, ತುಪ್ಪ, ಕಾಯಿ ತೂರಿ ಹಾಕ್ಕೊಂಡು ತಿನ್ನೋಣ
ಅಂದ್ಕೊಂಡೆ..ನೆಂಚಿ ಕೊಳ್ಳೋಕೆ ಪ್ರಿಯ ಉಪ್ಪಿನಕಾಯಿ ಹೇಗೂ ಮನೇಲಿ ಇದೆ.. ಹಾಗೇ
ನೀನಿಲ್ಲದೆ ಇರೋ ಎಂತಾ ಊಟ ಅಲ್ವಾ ಉಪ್ಪಿಟ್ಟು ನ ಹಾಗೆ ತಿನ್ನೋಕೆ ಮನಸಾಗಲಿಲ್ಲ.ಹಾಗಾಗಿ
ಆಲೂ ಗಡ್ಡೆ ಬಜ್ಜಿ ಮಾಡ್ಕೊಂಡೆ. ಲೈಟ್ ಆಗಿ ಮಳೆ ಬೇರೆ ಬರ್ತಿದೆ..ಹೇಗೂ ಕಡ್ಲೆ ಹಿಟ್ಟು
ಕಲ್ಸಿದೀನಿ ಅಂತ ಒಂದೆರಡು ಮೆಣಸಿನಕಾಯಿ ಬಜ್ಜಿ ಮಾಡ್ಕೊಂಡೆ.. ಇನ್ನು .. ಬೋಂಡ ಮಾಡಿದ
ಎಣ್ಣೆ ಹಾಗೆ ಕಾದಿತ್ತಲ್ವಾ ಅದಕ್ಕೆ ಎರಡು ಹಪ್ಪಳ ಹಾಕಿ ಹಪ್ಪಳ ಕರ್ಕೊಂಡೆ. ಬೆಳಿಗ್ಗೆ
ತಂದಿದ್ದ ಬೂಂದಿ, mixture ಸ್ವಲ್ಪ ಇತ್ತಲ್ವಾ ಅದುನ್ನೇ ನೆಂಚಿಕೊಂಡು ತಿನ್ನೋಣ
ಅಂದ್ಕೊಂಡೆ. ಆದ್ರೆ ನೀನಿಲ್ದೆ ಇರೋ ಊಟ ಅದೂ ಉಪ್ಪಿಟ್ಟು ಬೇರೆ, ತಿಂದ್ರೆ ಬಾಯಾರಿಕೆ
ಜಾಸ್ತಿ ಆಗುತ್ತಲ್ವಾ ಹಾಗಾಗಿ ಚಿಕ್ಕದು ಬರೀ ೧ ರಿನ್ಗೆಟ್ ಪೆಪ್ಸಿ ಕ್ಯಾನ್ ತಗೊಂಡು
ಬಂದೆ.ನಿನಗೆ ಕೊಟ್ಟ ಮಾತಿನಂತೆ ಒಬ್ನೇ ಇದ್ದೀನಿ ಅಂತ ನಾನು ಕುಡೀತ ಇಲ್ಲ.. ನೋಡು
ಬೇಕಾದ್ರೆ ಈ ಫೋಟೋದಲ್ಲಿ ಎಲ್ಲಾದ್ರೂ ಬಿಯರ್ ಬಾಟಲ್ ಕಾಣುಸ್ತಾ ಇದ್ಯಾ ನಿಂಗೆ ಇಲ್ಲಾ
ತಾನೇ.... ಇದೇ ಸಾಕ್ಷಿ ನಿನ್ನ ನಾನು ಎಷ್ಟು ಪ್ರೀತಿ ಮಾಡ್ತೀನಿ ಅಂತಾ..
ನೀನಿಲ್ಲದೆ ನನಗೆ ತಿಂಡಿ ಊಟ ಸೇರ್ತಾ ಇಲ್ಲ ...ತುಂಬಾ ಒಣಕ್ಕೊಂದು ಹೋಗಿದೀನಿ.. ನಿಂದೆ
ಚಿಂತೆ ಮಾಡ್ತಾ ಇದ್ದೀನಿ...ಈ ಕಾಗದ ಕಂಡ ತಕ್ಷಣ ವೆರಿ ನೆಕ್ಸ್ಟ್ ಫ್ಲೈಟ್ ಹತ್ಕೊಂಡು
ಬಂದ್ಬಿಡು ಪ್ಲೀಸ್... ಹಾ.. ಅಂದ ಹಾಗೆ ಬರೋಕೆ ಮುಂಚೆ ನಂಗೆ ಫೋನ್ ಮಾಡಿ ಇಂತಾ ದಿನ
ಬರ್ತಾ ಇದ್ದೀನಿ ಅಂತ ಹೇಳ್ಬಿಟ್ಟು ಬಾ. ನಂಗೆ ಸರ್ಪ್ರೈಸ್ ಕೊಡ್ಬೇಕು ಅಂತ ನೀನೇನಾದ್ರೂ
ಹೇಳ್ದೆ ಕೇಳ್ದೆ ಬಂದ್ಬಿಟ್ರೆ ಆಮೇಲೆ ನೀನು ಸರ್ಪ್ರೈಸ್ ಆಗ್ಬಿಡ್ತೀಯ...
ಇಂತಿ ನಿನ್ನ ಬರುವಿಕೆಯನ್ನೇ ಎದುರು ನೋಡ್ತಾ ಇರುವ ನಿನ್ನ ಗಂಡ.....
Subscribe to:
Post Comments (Atom)
ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?
ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...
-
ನಮ್ ಬಸ್ಯಾ ಇದಾನಲ್ವ ಅವ್ನು ಮೊನ್ನೆ ಅವ್ರ ಕಾಲೇಜಲ್ಲಿ ಇಂಗ್ಲೀಷ್ ಲೆಕ್ಚರರ್ನ ಕೇಳ್ದ ಸಾರ್.. ಇಂಗ್ಲೀಷಲ್ಲಿ "ನಟುರೆ" ಅಂತ ಒಂದ್ ಪದ ಇದೆ ಹಂಗಂದ್ರೆ ಕನ್ನ...
-
ಒಂದು ಕಾಲದಲ್ಲಿ ಹಾವುಗಳ ಬಗ್ಗೆ ನನಗಿದ್ದ ಜ್ಞಾನ ಕೂಡ ಮಾಮೂಲಿ ಎಲ್ಲರಿಗೂ ಇರುವಷ್ಟೇ ಇತ್ತು. ಪುಂಗಿ ನಾದಕ್ಕೆ ಹಾವು ತಲೆದೂಗುತ್ತೆ, ಎಲ್ಲಾ ಹಾವುಗಳೂ ವಿಷಕಾರಿ, ಹಾ...
No comments:
Post a Comment