ಲಲಿತಾಂಬ : ನಾನೇ ಸಮಾಜಸೇವಕಿ ಲಲಿತಾಂಬಾ ನನ್ನ ನಂಬಿ ಪ್ಲೀಸ್...ಪ್ಲೀಸ್...ಮಹನೀಯರೆ
ಮತ್ತು ಮಹಿಳೆಯರೆ... ಮುತ್ತೈದೆ ನಗರಕ್ಕೆ ಕಾವೇರಿ ನೀರು ತರೋಕೆ ನಾನು ಹೋರಾಟ ಮಾಡ್ತೀನಿ
ನನ್ನ ನಂಬಿ ಪ್ಲೀಸ್ ಪ್ಲೀಸ್......
ಕಾಂಪೋಂಡರ್ ಗೋವಿಂದ : ಡಾಕ್ಟ್ರೆ..
ತಾವ್ ತಪ್ ತಿಳ್ಯಲ್ಲ ಅಂದ್ರೆ ಒಂದ್ ಮಾತು.....ನನಗೆ ಬರಬೇಕಾದ ಎರಡು ವರ್ಷದ ಬೋನಸ್
ಬಂದಿಲ್ಲ ಅಂದ್ರೂ ಪರ್ವಾಗಿಲ್ಲ.....ನೀವ್ಯಾಕೆ ಲಾಸಲ್ಲಿ ನಡೀತಿರೊ ಕ್ಲಿನಿಕ್ ನ ಮುಚ್ಚಿ
ಕಾವೇರಿ ಪ್ರತಿಭಟನೆ ಮಾಡ್ಬಾರ್ದು???
ಡಾಕ್ಟರ್ ವಿಠಲ್ ರಾವ್ : ಗೋವಿಂದಾ.....ಸುಮ್ನೆ ಕೂತ್ಕೊಳೋ
ಗೋವಿಂದ : ಅರ್ಥವಾಯಿತು ಬಿಡಿ
ಎನ್ನೆಮ್ಮೆಲ್ : ಡಾಕ್ಟ್ರೆ ನೀವ್ ಬನ್ನಿ....ಕಾರ್ ಶೆಡ್ಡಲ್ಲಿ ನಾವಿಬ್ರೂ ಪ್ರತಿಭಟನೆ ಮಾಡಾಣ.....
ಲಲಿತಾಂಬ : ಸಿಲ್ಲೀ......
ಎನ್ನೆಮ್ಮೆಲ್ : ತಪ್ಪಾಯ್ತಕ್ಕಾ.....
ವಿಠಲ : ಲೋ ರಂಗನಾಥ.....ಅದೆಷ್ಟೋ ಮನೆಹಾಳ್ ಐಡಿಯಾ ಕೊಟ್ಟಿದೀಯ...ಕಾವೇರಿ ಇಷ್ಯೂ ಗು ಏನಾದ್ರು ಐಡಿಯಾ ಕೊಡೋ
ರಂಗನಾಥ : ವಿಠಲಾ.... ನಿನ್ನ ಹೃದಯ ಗೆದ್ದ ಗೆಳೆಯ ನಾನಿರ್ಬೇಕಾದ್ರೆ ಯಾಕೋ ಯೋಚನೆ
ಮಾಡ್ತೀಯ? ಜಸ್ಟ್ ಟೂ ಥೌಸಂಡ್ ಫೈವ್ ಹಂಡ್ರೆಡ್ ಕೊಡು ಅಷ್ಟೆ....ಹದಿನಾರು ಟಿಎಂಸಿ ಅಲ್ಲ
ಅರ್ಧ ಟಿಎಂಸಿ ಕೂಡಾ ಕೇಳ್ಬಾರ್ದು ಹಂಗ್ ಮಾಡ್ತೀನಿ.....
ಜಾಣೇಶ : ಅಯ್ಯೋ ಎಷ್ಟ್ ಟಿಎಂಸಿ ಆದ್ರೂ ಕೊಟ್ಕೊಳ್ರಿ.. ಆದ್ರೆ ಹದ್ನಾರು ಅಂತ ಲೆಕ್ಕ ಮಾತ್ರ ಹೇಳ್ಬೇಡಿ....
ಪಲ್ಲಿ : ಹೇ ಜಾಣೇಶಾ.......ಹೋಗೋ ಒಳಗ್ಹೋಗೋ.....ಏನೇ ಸೂಜಿ...ಅವ್ರಿಗೆ ನೀರ್
ಕೊಟ್ರೆ ನಮ್ಗೆ ಕುಡ್ಯೋಕೆ ನೀರಿರಲ್ವಂತೆ..ಆಮೇಲೆ ನಾವ್ ಮದ್ವೆ ಹೇಗೇ ಆಗೋದು??? ನಡ್ಯೇ
ಪ್ರತಿಭಟನೆ ಮಾಡೋಣಾ...
ಸೂಜಿ : ಹೌದೇನೋ.....ನಿಜನೇನೋ.....ನೆಡ್ಯೋ ಕುಂಟೆಬಿಲ್ಲೆ ಆಡ್ತಾ ಪ್ರತಿಭಟನೆ ಮಾಡೋಣ...ಐ ಲವ್ ಯೂ ಕಣೊ ಪಲ್ಲಿ...
ಪಲ್ಲಿ : ಮೀಟೂ ಕಣೆ....ಸೂಜಿ....
ವಿಠಲ : ಅಯ್ಯೋ ನೀವ್ ಸ್ವಲ್ಪ ಸುಮ್ನೆ ಇರ್ತೀರಾ.....ಲೋ ರಂಗನಾಥಾ.. ಕಾವೇರಿ ನೀರ್ ನಿಲ್ಸೋಕೆ ಏನಾದ್ರೂ ಐಡಿಯಾ ಕೊಡೋ....
ಸಿಲ್ಲಿ : ಕಾವೇರಿ ಅಂತಿದ್ದಾಗೆ ನಾನ್ ಬರೀತಿರೋ ಕಥೆ ನೆನಪಿಗೆ ಬಂತು.. ಕಥೆ ಹೆಸ್ರು ಕಾವೇರಿ ಅಲ್ಲ ಹಾವೇರಿ.....
ರಂಗನಾಥ : ಅಯ್ಯೋ ಸಿಲ್ಲಿ .....ನೀನ್ ಸ್ವಲ್ಪ ಸುಮ್ನಿರಮ್ಮಾ... ಲೋ ವಿಠಲಾ... ನನ್
ಹತ್ರ ಒಂದು ಸೂಪರ್ ಸುಪ್ರೀಂ ಐಡಿಯಾ ಇದೆ....ನೋಡೋ ವಿಠಲಾ.........ಒಂದ್ ಕೆಲ್ಸ
ಮಾಡಾಣ..... ನಾವೇ ಹೋಗ್ಬಿಟ್ಟು ಡ್ಯಾಮ್ ಗೇಟ್ ಮುಚ್ಬಿಟ್ಟು ಬರೋಣ...
ವಿಶಾಲೂ :::::ವಾವ್.... ಚಪ್ಪಾಳೆ
ಪೋಲೀಸ್ : ಹೇತ್ತರಿಕೇ... ಏರೋಪ್ಲೇನ್ ಮೆ ಚಪಾತಿ ಕರೇಗಾರೆ....
ಪಿಸಿ : ರಾಗಿ ರೊಟ್ಟೀನೂ ಕರೇಗರೇ....
ಲಲಿತಾಂಬ : ಓ ಸುವ್ವರ್ ಕೇ ಬಚ್ಚೇ ಇನ್ಸ್ಪೆಕ್ಟ್ರೇ....ಬನ್ನೀ ಬನ್ನೀ
ಪೋಲೀಸ್ : ಸುಮ್ನಿರಮ್ಮಾ... ನಾವ್ ಹೆಂಗ್ಸುರ್ನ ಆಥರ ಕರ್ಯಲ್ಲಾ........ಡ್ಯಾಮ್ ಹತ್ರ
ಹೋಗಿ ಗೇಟ್ ಕ್ಲೋಸ್ ಮಾಡಿ, ಬರೋಕೆ ಸ್ಕೆಚ್ ಹಾಕ್ತಾ ಇದೀರ ಅಂತ ನಮ್ಗೆ ಇನ್ಫರ್ಮೇಷನ್
ಬಂದಿದೆ. ಹಾಗಾಗಿ ಐಸಿಸಿ ಸೆಕ್ಷನ್ ಪ್ರಕಾರ ಸುರಕ್ಷತೆ ದೃಷ್ಟಿಯಿಂದ ನಿಮ್ಮೆಲ್ಲಾರ್ನ
ಅರೆಸ್ಟ್ ಮಾಡ್ತಾ ಇದೀನಿ.....
ಎಲ್ಲಾರೂ : ಹಾ.........
No comments:
Post a Comment