ಅಂತೂ ಬೇಸಿಗೆ ರಜೆ ಬಂತು. ಹೊಸ ವಸಂತ,ಹೊಸ ಚಿಗುರು,ಹೊಸ ಗಾಳಿ,ವಸಂತನ ಸ್ವಾಗತಕ್ಕೆ ಎಲ್ಲ ಸಿದ್ದವಾಯ್ತು.ನಾವು ಸ್ಕೂಲ್ ನಲ್ಲಿ ಓದೋವಾಗ್ಲು ಬೇಸಿಗೆ ಬರ್ತ ಇತ್ತು ,ಇವಾಗ್ಲು ಬರ್ತ ಇದೆ ಅದರಲ್ಲೇನು ವಿಶೇಶ ಅಂತೀರ? ಅಲ್ಲೇ ನೋಡಿ ಇರೋದು.ನಾವು ಸ್ಕೂಲ್ ನಲ್ಲಿ ಓದೋವಾಗ ಪರೀಕ್ಷೆಗಳು ಮುಗಿಯೋದನ್ನೇ ಬಕ ಪಕ್ಷಿಗಳ ತರ ಕಾಯ್ತಾ ಇರ್ತ ಇದ್ವಿ.ಇನ್ನೇನು ನಮ್ಮ ಫಲಿತಾಂಶ (ನಾವು ಪ್ರೀತಿಯಿಂದ ಹಣೆ ಬರಹ ಅಂತ ಕರಿತಿದ್ವಿ)ಅಂತು ಕಟ್ಟಿಟ್ಟ ಬುತ್ತಿ.ಬರುದ್ರು ಪಾಸು ;ಬರೀದೆ ಇದ್ರು ಪಾಸು. ಏನೋ ಪರೀಕ್ಷೆಲಿ ಕಡೆದು ಕಟ್ಟೆ ಹಾಕಿರೋ ಹಾಗೆ ಹಿಂದೇನೆ ಎರೆಡು ತಿಂಗಳು ಬೇಸಿಗೆ ರಜ ಬೇರೆ.ಸರಿ ಶುರು ನೋಡಿ ನಮ್ಮ ಪರಾಕ್ರಮ.ಮರಕೋತಿ ಆಡೋದು,ಚಿನ್ನಿ ದಾಂಢು, ಗೋಲಿ,ಬುಗುರಿ,....ಆಡಿದ್ದೆ ಆಟ. ಹೇಳೋರಿಲ್ಲ, (ಹೇಳೋರಿದ್ರು ಕೇಳಲ್ಲ ಬಿಡಿ) ಕೇಳೋರಿಲ್ಲ. ಬೆಳಿಗ್ಗೆ ಎದ್ದು ಏನೋ ಹೊಟ್ಟೆಗೆ ಸ್ವಲ್ಪ ಮೇವು ಹಾಕಿ ಹೊರಟರೆ ಮತ್ತೆ ಬರೋ ಟೈಮ್ ಗೊತ್ತಿಲ್ಲ.ಸಂಜೇನೋ ರಾತ್ರಿನೋ ..ಇಷ್ಟಕ್ಕೂ ಎಲ್ಲಿ ಹೋಗ್ತಾ ಇದ್ವಿ? ಅದೂ ಗೊತ್ತಿಲ್ಲ.ಒಮ್ಮೊಮ್ಮೆ ಆಟ ಆಡೋಕೆ,ಒಮ್ಮೊಮ್ಮೆ ಮಾವಿನ ಕಾಯಿ ಕದಿಯೋಕೆ,ಒಮ್ಮೊಮ್ಮೆ ಸೈಕಲ್ ಸವಾರಿ,ಒಮ್ಮೊಮ್ಮೆ ಈಜಾಡೋಕೆ,ಒಮ್ಮೊಮ್ಮೆ ಬೆಟ್ಟ ಹತ್ತೊದಕ್ಕೆ,ಒಂದೆ,ಎರಡೇ?ನಾವು ಒಟ್ಟು ಸುಮಾರು ಹತ್ತು ಹದಿನೈದು ಜನ.ಎಲ್ಲ ಜೊತೆನಲ್ಲೇ.ಮಾವಿನ ಕಾಯಿ ಕದ್ದು ತಿನ್ನೋದ್ರಲ್ಲಿ ಇರೋ ಮಜಾ ತಿಂದಿರೋರ್ಗೇ ಗೊತ್ತು.ಮಾವಿನ ಕಾಯಿ ತಿಂದು ಎಳನೀರು ಕುಡಿದು, ಈಜಾಡೋಕೆ ಹೋದ್ರೆ ಬಾವಿಯಿಂದ ಮೇಲೆ ಬರ್ತಾ ಇದ್ದಿದ್ದು ಬಿಸಿಲು ಕಮ್ಮಿ ಆದ ಮೇಲೇನೆ. ಆಮೇಲೆ? ಇದ್ದೆ ಇದೆಯಲ್ಲ? ಗೋಲಿ? ಬುಗುರಿ?
ನಮ್ಮ ಸ್ನೇಹಿತರಿಗೆ ಹೋಲಿಕೆ ಮಾಡಿದ್ರೆ ನಾನೇ ಸ್ವಲ್ಪ ಅದೃಷ್ಟ ದೇವಿಯ ಮೊಮ್ಮಗ.ನಮ್ಮ ರಜಾ ಎಲ್ಲ ಪಾವಗಡದ ದೊಡ್ಡಪ್ಪನ ಮನೆ,ತುಮಕೂರಿನ ಚಿಕ್ಕಪ್ಪನ ಮನೆ,ಬೆಂಗಳೂರಿನ ಅತ್ತೆ ಮನೆ, ತೊಂಡೋಟಿಯ ಅಜ್ಜಿ ಮನೆ ,ಇಲ್ಲೇ ಕಳೆದು ಹೋಗ್ತಾ ಇತ್ತು,ಹೋದ ಕಡೆ ಎಲ್ಲ ಒಂದು ವಾರ (ಕಮ್ಮಿ ಅಂದ್ರೆ) ಠಿಕಾಣಿ.ಕೆಲ್ಸ ಇಲ್ಲ ಕಾರ್ಯ ಇಲ್ಲ.ಟೈಮ್ ಟೈಮ್ ಗೆ ತಿಂಡಿ,ಕಾಫಿ,ಒಂಥರ ಹಳೆ ಸಿನೆಮಾದಲ್ಲಿ ರಾಜ ಇರ್ತಾನಲ್ಲ ,ಅದೇ ಥರ ರಾಜೋಪಚಾರ.ಒಂದೇ ಮಾತಲ್ಲಿ ಹೇಳ ಬೇಕು ಅಂದ್ರೆ ರಜಾ ಯಾವಾಗ ಬಂತು ಯಾವಾಗ ಹೋಯ್ತು ಅಂತಾನೆ ಗೊತ್ತಾಗ್ತಾ ಇರ್ಲಿಲ್ಲ.ಅಷ್ಟು ಮಜವಾಗಿ ಇರ್ತಾ ಇತ್ತು.
ಆದ್ರೆ ಈಗ?
ಬೇಸಿಗೆ ಬಂದಿದ್ದೆ ತಡ. ಠಪಾರ್ ಅಂತ ಬರುತ್ವೆ ಸಮ್ಮರ್ ಕ್ಯಾಂಪುಗಳು.ಅದು ಎಂಥವು? ಕೇವಲ ಹಣ ಮಾಡೋದೇ ಜೀವನದ ಪರಮ ಧ್ಯೇಯ ಅಂತ ಅನ್ನೋ ಕ್ಯಾಂಪುಗಳಿವು.ಅದರಲ್ಲಿ ಸೇರೋದಕ್ಕು ಕಾಂಪಿಟೇಶನ.ಹೋಗ್ಲಿ ಅದಕ್ಕೆ ಸೇರಿಸೋದಾದ್ರು ಯಾಕೆ? ನಿಜ ಹೇಳ್ತೀನಿ ಕೇಳಿ.ರಜಾದಲ್ಲಿ ಮಕ್ಳು ಮನೇಲಿ ಇರ್ತಾರಲ್ಲ ಇವ್ರ ತೀಟೆ,ಕಾಟ,ಚೇಷ್ಟೆ ತಪ್ಪಿದರೆ ಸಾಕು ಅಂತ ಅಷ್ಟೆ.ಆ ಕ್ಯಾಂಪುಗಳು ಕಲಿಸೋದೂ ಅಷ್ಟರಲ್ಲೇ ಇರುತ್ವೆ.ನಿಸರ್ಗದತ್ತ ಆಟಗಳಾದ ಗೋಲಿ,ಬುಗುರಿ,ಮರಕೋತಿ ಗಳು ಕಲಿಸೋ ವಿದ್ಯೆಯ ಮುಂದೆ ಈ ಕ್ಯಾಂಪುಗಳು? ????? ಇನ್ನು ಕ್ಯಾಂಪುನಿಂದ ಬಂದ ಕೂಡಲೇ ಇದ್ದೆ ಇದೆಯಲ್ಲ ಮಕ್ಕಳ ಮಿತ್ರ ಟಿ.ವಿ.ಅದರ ಮಧ್ಯೆ ಆಗಾಗ ಕೆರಂ,ಮೊಬೈಲ್ ಗೇಮ್,ವಿಡಿಯೋ ಗೇಮ್,ಇಂಟರ್ನೆಟ್,ಕಂಪ್ಯೂಟರ.ಇನ್ನು ಹೊರಗೆ ಓಡಾಡೋ ಹಾಗಿಲ್ಲ. ಎಲ್ಲಿ ಹೋದರು ಟ್ರಾಫಿಕ್ ಗೋಳು,ಮನೆ ಮೇಲಿನ ಟೆರೆಸೆ ಇವರ ಮೈದಾನ.ಅದರ ನಡುವೆ ಡೈಲಿ ಸಾಯಂಕಾಲ ಟ್ಯೂಶನ ಬೇರೆ.ಇದರ ನಡುವೆ ಮನರಂಜನೆಗೆ ಅಂತ ಚುನಾವಣೆ, ಕ್ರಿಕೆಟ್,wwf ,????????????????
ಆ....ಇಷ್ಟು ಬೇಗ ರಜಾ ಮುಗಿದು ಹೋಯ್ತಾ? ಈ ಸಲ ಅಜ್ಜಿ ಮನೆಗೆ ಹೋಗೋಕೆ ಆಗ್ಲಿಲ್ಲ.ಇನ್ನು ಒಂದು ಎರಡು ದಿನ ರಜಾ ಕೊಟ್ಟಿದ್ರೆ ಈ ಮೇಷ್ಟ್ರಿಗೆ ಏನಾಗ್ತಾ ಇತ್ತಂತೆ?ಎಲ್ಲಿ? ಈ...ಸಧ್ಯ ಹೇಗೋ ಒಂದು ರಜಾ ಮುಗಿದರೆ ಸಾಕಪ್ಪಾ ಭಗವಂತ.ಸ್ಕೂಲೇ ಮೇಲು......ಎಲ್ಲಿ?ನಿಮ್ಮ ಬೇಸಿಗೆ ರಜಾವನ್ನು ಕೂಡ ಒಮ್ಮೆ ನೆನಪಿಸಿಕೊಳ್ಳಿ..
No comments:
Post a Comment