Wednesday, November 5, 2008

ಕವಿನಮನ


ಸ್ನೇಹಿತರೇ,
ನವಂಬರ್ ೧ ರಂದು ಯಾವುದೋ ಖಾಸಗಿ ಚಾನಲ್ ಒಂದರಲ್ಲಿ ಪ್ರಸಾರವಾದ ಕವಿನಮನ ಕಾರ್ಯಕ್ರಮ ನಿಮ್ಮಲ್ಲಿ ಯಾರಾದರು ನೋಡಿದ್ದೀರ? ಸಂತೆಗೆ ಒಂದು ಮೊಳ ಎಂಬಂತೆ ವಿಶೇಷ ದಿನಗಳಿಗೆಂದೇ ತರಾತುರಿಯಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಹೋಲಿಸಿದರೆ ತುಂಬ ವಿಭಿನ್ನವಾಗಿತ್ತು ಹಾಗು ಅಷ್ಟೆ ಸೊಗಸಾಗಿತ್ತು ಕೂಡ .
ಹೆಚ್ ಎಸ್.ವೆಂಕಟೇಶ ಮೂರ್ತಿ, ಎಂ.ಏನ್.ವ್ಯಾಸರಾವ್,ಕಂಬಾರ,ಲಕ್ಷ್ಮಿ ನಾರಾಯಣ ಭಟ್ಟರು ..... ಇವರನ್ನೆಲ್ಲಾ ಬಹುದೇಕ ಮರೆತೆಬಿಟ್ಟುರುವ ನಮ್ಮಂಥ ಕನ್ನಡಿಗರಿಗೆ ಅವರ ಕನ್ನಡ ದಿನದ ದಿನ ಅವರ ಪರಿಚಯ ಮಾಡಿಕೊಟ್ಟಿದ್ದು ನಿಜಕ್ಕೂ ಗ್ರೇಟ್.
ಅವರ ಬಾಲ್ಯ,ವಿದ್ಯಾಭ್ಯಾಸ,ಜೀವನ ಶೈಲಿ, ರಚನೆಗಳು, ಬಾಳ ಪಯಣದ ಹಾದಿಯಲ್ಲಿ ಎದುರಾದ ಘಟನೆಗಳು,......... ಹೀಗೆ ಹಿರಿಯ ಕವಿಗಳ ಸಮಗ್ರ ಚಿತ್ರದ ದರ್ಶನ ಮಾಡಿದಂತಾಯಿತು
ಇನ್ನು ರವಿಬೆಳಗೆರೆ. ಕೇವಲ ಕ್ರೈಂ ಆಧಾರಿತ ಲೇಖನಗಳು,ಕತೆಗಳಿಗಷ್ಟೇ ಸಮರ್ಥ-ಎಂಬುದು ಎಷ್ಟೋ ಮಂದಿ ರವಿಗೆ ಕೊಟ್ಟಿರುವ ಬಿರುದು.ಅಂಥಹವರು ಒಮ್ಮೆ ಈ ಕಾರ್ಯಕ್ರಮವನ್ನು ಖಂಡಿತ ನೋಡಿರಬೇಕಿತ್ತು.ರವಿಯ ನಿರೂಪಣ ಶೈಲಿ,ಪದಪ್ರಯೋಗ,ಭಾಷೆಯ ಮೇಲಿನ ಹಿಡಿತ,ಮುಖ್ಯವಾಗಿ ಒಬ್ಬಬ್ಬ ಲೇಖಕರ ಬಗ್ಗೆಯೂ ಕೊಡುತ್ತಿದ್ದ ಮುನ್ನುಡಿ,ಅವರ ಸಮಗ್ರ ಪರಿಚಯ....ವಾವ್.... ನಿಜವಾಗಿಯು ಕ್ರೈಂ ಪತ್ರಕರ್ತನ ಒಳಗೊಬ್ಬ ಭಾವಜೀವಿಯ ದರ್ಶನ ಮಾಡಿಸಿತು.
ಇನ್ನು ರವಿಗೆ ತಕ್ಕ ಸಾಥ್ ನೀಡಿದವರು ಗಾನಬ್ರಹ್ಮ ಎಸ್.ಪಿ.ಬಿ.ಆಹಾ.ಭಾವಗಿತೆಗಳನ್ನು ಹಾಡುವಾಗ ಆತನ ತನ್ಮಯತೆ ,ಹೊಸ ಗಾಯಕರಿಗೆ ತುಂಬುತ್ತಿದ್ದ ವಿಶ್ವಾಸ,ತಾನೆ ಮಾಡುತ್ತಿದ್ದ ಹಾಸ್ಯ,ಒಂದಕಿಂತ ಒಂದು....ಗ್ರೇಟ್..........
ಎಲ್ಲೋ ಎಸ್ಟೋ ದಿನಗಳ ಹಿಂದೆ ದೂರದರ್ಶನದಲ್ಲಿ ಎಂ.ಎಸ್.ಐ.ಎಲ್ .ನಿತ್ಯೋತ್ಸವ ಎಂಬ ಕಾರ್ಯಕ್ರಮ ನೋಡಿದ್ದರ ನೆನಪು.
ಬಹಳ ದಿನಗಳ ನಂತರ ಮತ್ತೆ ಭಾವ ಗೀತೆ ಗಳ ಕಾರ್ಯಕ್ರಮೊಂದನ್ನು ನೋಡಿದ ಖುಷಿ.......


ನಿಮ್ಮಲ್ಲಿ ಯಾರಾದರು ಇದನ್ನು ನೋಡಿದ್ದರೆ ನಿಮಗೆ ಇಸ್ತವಾಯಿತೆ.... ನಿಮ್ಮ ಅನಿಸಿಕೆ ತಿಳಿಸಿ ..............

No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...