Monday, February 7, 2011

ಬರೀ ತರ್ಲೆ ಅಲ್ಲ, ಸಿಕ್ಕಾಪಟ್ಟೆ ತರ್ಲೆ ಜೋಕ್ಸ್!

ಟೀಚರ್ (ಸಿಟ್ಟಿನಿಂದ) : ಲೇ ಗುಂಡ, ನೀನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟು.
ಗುಂಡ (ಮನಸ್ಸಿನಲ್ಲೇ) : ನೀವು ಮುಂದಿನ ಜನ್ಮದಲ್ಲಿ ಲೈಟ್ ಕಂಬವಾಗಿ ಹುಟ್ಟಿ, ಆವಾಗ ನೋಡ್ಕೋತೀನಿ.

***


ಅಮೆರಿಕನ್ನರ ಜೀವನದ ಶೈಲಿ...
ಮಗಳು : ಸಾರಿ ಡ್ಯಾಡ್, ನನಗೆ ನಿನ್ನೆ ಮದುವೆ ಆಯಿತು. ನಿನಗೆ ಹೇಳಲು ಮರೆತು ಹೋಯಿತು.
ಡೋಂಟ್ ಫೀಲ್ ಬ್ಯಾಡ್.
ತಂದೆ : ಇಟ್ಸ್ ಓಕೆ, ಬಟ್ ನೆಕ್ಸ್ಟ್ ಟೈಮ್ ಮಾತ್ರ ಮರೀ ಬೇಡ!

***


ಹುಡುಗಿರ ಲೈಫ್ ನೀರಿನ ತರಹ...
ಹುಡುಗರ ಲೈಫ್ ಮೊಬೈಲ್ ತರಹ...
ಮೊಬೈಲ್ ನೀರಿಗೆ ಬಿದ್ದರೂ ಅಥವಾ ನೀರು ಮೊಬೈಲ್ ಮೇಲೆ ಬಿದ್ದರೂ.. ಹಾಳಾಗುವುದು ಮೊಬೈಲ್ ಮಾತ್ರಾ!

***


ಒಬ್ಬ ಹುಡುಗ ರಜನೀಕಾಂತ್ ಮನೆ ಮುಂದೆ ಕ್ರಿಕೆಟ್ ಆಡುತ್ತಿದ್ದ..
ಹುಡುಗ ಹೊಡೆದ ರಭಸಕ್ಕೆ ರಜನೀಕಾಂತ್ ಮನೆಯ ಕಿಟಕಿ ಒಡೆದು ಹೋಯಿತು..
ರಜನಿ ಬಾಲ್ ಹಿಡಿದು ಹುಡುಗನಿಗೆ ನಿಧಾನವಾಗಿ ಆಡು ಎಂದು ಉಪದೇಶಿಸಿದರು..
ಆ ಹುಡುಗ ಮತ್ಯಾರೂ ಅಲ್ಲ.. ರಾಹುಲ್ ದ್ರಾವಿಡ್!

***

ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ?

ಲೈಲಾ : ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ ಗೊತ್ತಾ?
ಮಜನೂ : ಅಷ್ಟೂ ಗೊತ್ತಿಲ್ವೇನೆ ಲೈಲಿ... ಚೀನಾದಿಂದ.
ಲೈಲಾ : ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತೀಯಾ?
ಮಜನೂ : ಯಾಕಂದ್ರೆ ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲ!

***

ಗುಂಡನ ಮಡದಿ ಅವಳಿ ಮಕ್ಕಳಿಗೆ ಜನ್ಮವಿತ್ತಳು
ಗುಂಡ ಇಡೀ ರಾತ್ರಿ ನಿದ್ದೆ ಮಾಡದೆ ಆಲೋಚಿಸುತ್ತಿದ್ದ..
ಗುಂಡ ಏನು ಆಲೋಚನೆ ಮಾಡುತ್ತಿದ್ದಾಂದರೆ... ಎರಡನೇ ಮಗುವಿನ ತಂದೆ ಯಾರಿರಬಹುದು ಎಂದು!

***

ಗುಂಡನಿಗೆ ಈಜು ಬರುತ್ತಿರಲಿಲ್ಲ. ಒಂದು ದಿನ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ,
ನೀರಿನಲ್ಲಿ ಮುಳುಗಬೇಕಾದರೆ ಕೈಗೆ ಸಿಕ್ಕಿದ ಒಂದು ಮೀನನ್ನು ದಡಕ್ಕೆ ಎಸೆದು
ಹೇಳ್ತಾನೆ... ನಾನಂತೂ ಬದುಕೊಲ್ಲ.. ನೀನಾದ್ರೂ ಬದುಕೋ ಹೋಗು.

***

ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ..
ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ?
ಟಿಸಿ: ಒಂದು ಗಂಟೆಗೆ
ಗುಂಡ: ಲೋಕಲ್ ಟ್ರೈನ್?
ಟಿಸಿ: 9 ಗಂಟೆಗೆ
ಗುಂಡ: ಗೂಡ್ಸ್ ಗಾಡಿ..?
ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು?
ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು.
***

ಪುಸ್ತಕ ಓದುತ್ತಿದ್ದ ವೈದ್ಯ ಡಿಸ್ಮಿಸ್ ಆದ!

ಆಸ್ಪತ್ರೆಯ ಗ್ರಂಥಾಲಯದಲ್ಲಿ ಪುಸ್ತಕವೊಂದನ್ನು ಓದುತ್ತಿದ್ದ ವೈದ್ಯನೊಬ್ಬನನ್ನು
ಆಡಳಿತ ಮಂಡಳಿ ಕೆಲಸದಿಂದ ಡಿಸ್ ಮಿಸ್ ಮಾಡಿತು.
ಆ ವೈದ್ಯ ಯಾವ ಪುಸ್ತಕ ಓದುತ್ತಿದ್ದಿದ್ದಕ್ಕಾಗಿ ಆಡಳಿತ ಮಂಡಳಿ ಈ ನಿರ್ಧಾರ
ತೆಗೆದುಕೊಂಡಿತು ಹೇಳಿ? ಉತ್ತರ ಹೊಳೀತಾ?
ಆ ವೈದ್ಯ ಓದುತ್ತಿದ್ದ ಪುಸ್ತಕ "30 ದಿನಗಳಲ್ಲಿ ವೈದ್ಯನಾಗುವುದು ಹೇಗೆ?!"

***

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜು ಜೀವನದ ಮೊದಲ ದಿನ. ಒಬ್ಬ ವಿದ್ಯಾರ್ಥಿ
ಮತ್ತು ವಿದ್ಯಾರ್ಥಿನಿ ನಡುವಿನ ಸಂವಾದ...
ವಿದ್ಯಾರ್ಥಿ : ನಿನ್ನ ಹೆಸರೇನು?
ವಿದ್ಯಾರ್ಥಿನಿ : ಎಲ್ಲರೂ ನನ್ನನ್ನು " ಅಕ್ಕ' ಅಂತಾರೆ.
ವಿದ್ಯಾರ್ಥಿ : ವಾವ್, what a co-incident. ಎಲ್ಲರೂ ನನ್ನನ್ನ "ಬಾವ" ಅಂತಾರೆ!

***

ಅಪ್ಪ : ಲೇ ಗುಂಡ, ನಿನ್ನ ಪರೀಕ್ಷೆ ಫಲಿತಾಂಶ ಏನಾಯಿತು?
ಗುಂಡ : ಅಪ್ಪಾ, ನಾನು ಮತ್ತೆ ಫೇಲ್ ಆದೆ.
ಅಪ್ಪ : ಇನ್ನು ಮುಂದೆ ನನ್ನನ್ನು ಅಪ್ಪಾ ಅಂತ ಕರೀಬೇಡ.
ಗುಂಡ : ಓ.. ಕಮಾನ್ ಅಪ್ಪಾ.. ನಾನು ಹೇಳ್ತಾ ಇದ್ದಿದ್ದು ನನ್ನ ಸ್ಕೂಲ್ ಟೆಸ್ಟ್
ಬಗ್ಗೆ, ಡಿಎನ್ಎ ಟೆಸ್ಟ್ ಬಗ್ಗೆ ಅಲ್ಲ.

***

ಮಗ : ಅಪ್ಪಾ ನಮ್ ಟೀಚರ್ ಸೂಪರ್ ಆಗಿದ್ದಾರೆ.
ಅಪ್ಪ : ಹಾಗೆಲ್ಲ ಹೇಳಬಾರದು ಮಗು, ಟೀಚರ್ ಅಮ್ಮನಿಗೆ ಸಮಾನ.
ಮಗ : ಹೋಗಪ್ಪಾ ನೀನು, ಯಾವಾಗ್ಲೂ ನಿಂಗೇ ಸೆಟ್ ಮಾಡ್ಕೋಳೋಕೆ ನೋಡ್ತೀಯಾ.

****

ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್!

ಗುಂಡ : ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್.
ಕವಿ : ನನ್ನ ಯಾವ ಕವನ ನಿನಗೆ ಇಷ್ಟಪ್ಪಾ?
ಗುಂಡ : ಅದೇ ಸಾರ್... ನಿಮ್ಮ ಎರಡನೇ ಮಗಳು.. ಕವನ.

***

ಅಂದು 1947ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ದುಡಿದರು ದೇಶಕ್ಕಾಗಿ.
ಇಂದು 2010ರಲ್ಲಿ ನಾವು ದುಡಿಯುತ್ತಿರುವುದು ಗಾಂಧೀ ನೋಟಿಗಾಗಿ.

***

ಸರ್ದಾರ್ಜಿ ಮತ್ತು ಕಪ್ಪೆ ನಡುವೆ ವಾಗ್ಯುದ್ದ ನಡೆಯಿತು.
ಕಪ್ಪೆ : ನೀವು ಸರ್ದಾರ್ಜಿಗಳು ಮುಠಾಳರು.
ಸರ್ದಾರ್ಜಿ : ಇಲ್ಲಾ ನಾವು ಮುಠಾಳರಲ್ಲ.
ಕಪ್ಪೆ : ನಿನ್ನ ಜೊತೆ ಮಾತನಾಡುವುದು ವೇಸ್ಟ್, ಸುಮ್ನೆ ಸಮಯ ವ್ಯರ್ಥ (ಎಂದು ಬಾವಿಗೆ ಹಾರಿತು)
ಸರ್ದಾರ್ಜಿ : ಛೇ.. ಇದರಲ್ಲಿ ಕಪ್ಪೆ ಆತ್ಮಹತ್ಯೆ ಮಾಡಿಕೊಳ್ಳುವಂತದ್ದೇನಿದೆ?

1 comment:

Unknown said...

Astondu tarle enu ella mestre

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...